ETV Bharat / sports

ವಿಶ್ವ ರ‍್ಯಾಪಿಡ್ ಚೆಸ್​ ಚಾಂಪಿಯನ್​ಶಿಪ್​ ಗೆದ್ದ ಕೊನೆರು ಹಂಪಿ ​ - ಕೊನೆರು ಹಂಪಿ

ಭಾರತ ಕಂಡ ಶ್ರೇಷ್ಠ ಮಹಿಳಾ ಚೆಸ್ ಆಟಗಾರ್ತಿಯಾಗಿರುವ ಕೊನೆರು ಹಂಪಿ ಚೀನಾದ ಲೀ ಟಿಂಗ್‌ಜೀ ಅವರನ್ನು ಮಣಿಸುವ ಮೂಲಕ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್​ಶಿಪ್​ ಕಿರೀಟವನ್ನು ಧರಿಸಿದ್ದಾರೆ.

Humpy Koneru wins women's world rapid chess championship

author img

By

Published : Dec 29, 2019, 5:34 PM IST

ಮಾಸ್ಕೊ : ಭಾರತದ ಚೆಸ್​ ಆಟಗಾರ್ತಿ ಕೊನೆರು ಹಂಪಿ 2019ರ ಮಹಿಳೆಯರ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ಭಾರತ ಕಂಡ ಶ್ರೇಷ್ಠ ಮಹಿಳಾ ಚೆಸ್ ಆಟಗಾರ್ತಿಯಾಗಿರುವ ಕೊನೆರು ಹಂಪಿ ಚೀನಾದ ಲೀ ಯಿಂಗ್ಜಿ ಅವರನ್ನು ಮಣಿಸುವ ಮೂಲಕ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್​ಶಿಪ್​ ಕಿರೀಟವನ್ನು ಧರಿಸಿದ್ದಾರೆ.

ಮೊದಲ ಗೇಮ್​ನಲ್ಲಿ ಸೋಲನುಭವಿಸಿ ಹಂಪಿ ಎರಡನೇ ಗೇಮ್​ ಗೆದ್ದು ಚೀನಾ ಆಟಗಾರ್ತಿಗೆ ತಿರುಗೇಟು ನೀಡಿದರು. ಮೂರನೇ ಗೇಮ್​ನಲ್ಲಿ ಉತ್ತಮ ನಡೆಗಳೊಂದಿಗೆ ಆರಂಭದಲ್ಲೇ ಮುನ್ನಡೆ ಕಾಯ್ದುಕೊಂಡ ಅವರು ಸುಲಭ ಜಯ ಸಾಧಿಸುವ ಮೂಲಕ ಚಾಂಪಿಯನ್ ಆಗಿ ಹೊರ ಹೊಮ್ಮಿದರು.

"ನಾನು ಈ ಟೂರ್ನಿಗೆ ಹೆಚ್ಚು ತಯಾರಿ ನಡೆಸಿರಲಿಲ್ಲವಾದ್ದರಿಂದ ಅಗ್ರ 3 ರಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಕೊಂಡಿದ್ದೆ. ಆದರೆ ಪ್ರಶಸ್ತಿ ಜಯಿಸಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ" ಎಂದು ಹಂಪಿ ಅಂತಾರಾಷ್ಟ್ರೀಯ ಚೆಸ್​ ಫೆಡರೇಷನ್​ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಇನ್ನು ಪುರುಷರ ವಿಭಾಗದಲ್ಲಿ ನಾರ್ವೆಯ ಮ್ಯಾಗ್ನಸ್​ ಕಾರ್ಲ್ಸೆನ್ ಅಮೇರಿಕಾದ ಅರೋನಿಯನ್​ ರನ್ನು ಮಣಿಸಿ​ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ. ಅವರು ಈ ಟೂರ್ನಿಯಲ್ಲಿ 8 ಗೆಲುವು ಹಾಗೂ 7 ಡ್ರಾ ಸಾಧಿಸುವ ಮೂಲಕ ಚಾಂಪಿಯನ್​ ಪಟ್ಟ ಅಲಂಕರಿಸಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.