ETV Bharat / sports

ಏಷ್ಯನ್ ಕುಸ್ತಿ ಚಾಂಪಿಯನ್​ಶಿಪ್​: ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟ ದಹಿಯಾ - Asian wrestling Championship

ಶನಿವಾರ ನಡೆದ ಫೈನಲ್​ ಬೌಟ್​ನಲ್ಲಿ ಪ್ರಾಬಲ್ಯ ಸಾಧಿಸಿದ ದಹಿಯಾ 12-2 ಅಂಕಗಳಿಂದ ಕಜಕಸ್ತಾನದ ಕುಸ್ತಿಪಟು ಕಲ್ಜಾನ್ ರಹತ್ ವಿರುದ್ಧ ಜಯ ಸಾಧಿಸಿದರು. ಇದು ರವಿಕುಮಾರ್​ ಏಷ್ಯನ್ ಚಾಂಪಿಯನ್​ಶಿಪ್​ನಲ್ಲಿ ಗೆದ್ದ ಸತತ ಮೂರನೇ ಚಿನ್ನದ ಪದಕವಾಗಿದೆ.

Indian wrestler Ravi Kumar Dahiya wins gold meda
ಏಷ್ಯನ್ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ರವಿಕುಮಾರ್ ದಹಿಯಾಗೆ ಚಿನ್ನ
author img

By

Published : Apr 23, 2022, 5:02 PM IST

ಉಲಾನ್​ಬತಾರ್(ಮಂಗೋಲಿಯ): ಟೋಕಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದು ದೇಶ ಹೆಮ್ಮ ಪಡುವಂತೆ ಮಾಡಿದ್ದ ರವಿಕುಮಾರ್​ ದಹಿಯಾ ಮಂಗೋಲಿಯಾದಲ್ಲಿ ನಡೆಯುತ್ತಿರುವ ಏಷ್ಯನ್​ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟರು. ಶನಿವಾರ ನಡೆದ ಫೈನಲ್​ ಬೌಟ್​ನಲ್ಲಿ ಪ್ರಾಬಲ್ಯ ಸಾಧಿಸಿದ ಅವರು, 12-2 ಅಂಕಗಳಿಂದ ಕಜಕಸ್ತಾನದ ಕುಸ್ತಿಪಟು ಕಲ್ಜಾನ್ ರಹತ್ ವಿರುದ್ಧ ಜಯ ಸಾಧಿಸಿದರು. ಇದು ರವಿಕುಮಾರ್​ ಏಷ್ಯನ್ ಚಾಂಪಿಯನ್​ಶಿಪ್​ನಲ್ಲಿ ಗೆದ್ದ ಸತತ ಮೂರನೇ ಚಿನ್ನದ ಪದಕ ಎನ್ನುವುದು ಗಮನಾರ್ಹ.

57 ಕೆಜಿ ವಿಭಾಗದಲ್ಲಿ ದಹಿಯಾ 2020, 2021ರ ಆವೃತ್ತಿಯಲ್ಲೂ ಚಿನ್ನದ ಪದಕ ಗೆದ್ದಿದ್ದರು. ಇದಕ್ಕೂ ಮುನ್ನ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಮತ್ತು ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. ಸೋನಾಪತ್​ನ ನಹರಿ ಹಳ್ಳಿಯ ದಹಿಯಾ, ಫೈನಲ್​ ಪ್ರವೇಶಿಸುವ ಮುನ್ನ ಜಪಾನ್ ರಿಕುಟೊ ಅರವಿ ತಾಂತ್ರಿಕ ಶ್ರೇಷ್ಠತೆಯಿಂದ ಮತ್ತು ಮಂಗೋಲಿಯಾದ ಝನಾಬಜಾರ್ ಝಂಡಾನ್‌ಬುಡ್ ವಿರುದ್ಧ 12-5ರಲ್ಲಿ ಗೆಲುವು ಸಾಧಿಸಿದ್ದರು.

ಭಾರತದ ಭರವಸೆಯ ಕುಸ್ತಿಪಟು ಬಜರಂಗ್ ಪೂನಿಯಾ ಕೂಡ ಫೈನಲ್ ಪ್ರವೇಶಿಸಿದ್ದರು. ಆದರೆ ಫೈನಲ್​ನಲ್ಲಿ ಇರಾನ್​ನ ಕುಸ್ತಿಪಟು ವಿರುದ್ಧ 1-3ರಲ್ಲಿ ಸೋಲು ಕಂಡು ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ.

ಇದನ್ನೂ ಓದಿ:ಐಪಿಎಲ್ ನಿಯಮ ಉಲ್ಲಂಘಿಸಿದ್ದಕ್ಕೆ ಪಂತ್‌ಗೆ ಭಾರಿ ದಂಡ, ಆಮ್ರೆಗೆ ಒಂದು ಪಂದ್ಯ ನಿಷೇಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.