ETV Bharat / sports

ಏಷ್ಯನ್ ಗೇಮ್ಸ್ ಸಿದ್ಧತೆಯಲ್ಲಿ ಮಹಿಳಾ ಹಾಕಿ ತಂಡ: ಆಸ್ಟ್ರೇಲಿಯಾ ಪ್ರವಾಸದ ವೇಳಾಪಟ್ಟಿ ಹೀಗಿದೆ.. - ETV Bharath Kannada news

ಏಷ್ಯನ್ ಗೇಮ್ಸ್ ಪೂರ್ವ ಸಿದ್ಧತೆಯಲ್ಲಿ ಭಾರತ ಮಹಿಳಾ ಹಾಕಿ ತಂಡದ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಅಲ್ಲಿ 5 ಪಂದ್ಯಗಳನ್ನು ನಾಳೆಯಿಂದ ಆರಂಭವಾಗಿ 27ರ ವರೆಗೆ ಆಡಲಿದೆ.

Etv Bharat
Etv Bharat
author img

By

Published : May 17, 2023, 8:14 PM IST

ಅಡಿಲೇಡ್( ಆಸ್ಟ್ರೇಲಿಯಾ): ಭಾರತ ಮಹಿಳಾ ಹಾಕಿ ತಂಡವು ತನ್ನ ಪ್ರವಾಸದ ಮೊದಲ ಪಂದ್ಯದಲ್ಲಿ ಗುರುವಾರ ಆತಿಥೇಯ ಆಸ್ಟ್ರೇಲಿಯಾವನ್ನು ಎದುರಿಸಲು ಸಿದ್ಧವಾಗಿದೆ. ಅಲ್ಲಿ ಅವರು ಮೇ 18 ರಿಂದ 27 ರವರೆಗೆ ಅಡಿಲೇಡ್‌ನ ಮೆಟ್ ಸ್ಟೇಡಿಯಂನಲ್ಲಿ ಐದು ಪಂದ್ಯಗಳನ್ನು ಆಡಲಿದ್ದಾರೆ. ಅಗ್ರ ಗೋಲ್ ಸ್ಕೋರರ್ ಸವಿತಾ ಮತ್ತು ಉಪನಾಯಕ ದೀಪ್ ಗ್ರೇಸ್ ಎಕ್ಕಾ ನೇತೃತ್ವದ ತಂಡವು ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಆಡಲಿದೆ. ನಂತರ ಆಸ್ಟ್ರೇಲಿಯಾ ಎ ವಿರುದ್ಧ ಎರಡು ಪಂದ್ಯಗಳನ್ನು ಆಡಲಿದೆ. ಈ ಪ್ರವಾಸವು ಮುಂಬರುವ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್ 2023 ಗಾಗಿ ಭಾರತೀಯ ತಂಡದ ಸಿದ್ಧತೆಗಳ ಭಾಗವಾಗಿದೆ, ಇದು ಈ ವರ್ಷ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಯಲಿದೆ.

  • Battle lines are drawn 👊

    Hear what Coach Janneke Schopman and Savita have to say ahead of Indian Senior Women's Tour of Australia.

    Catch all the action live on DD Sports, FanCode app and Watch Hockey app, 2:45pm onwards.#HockeyIndia #IndiaKaGame pic.twitter.com/7FoCnCJGoz

    — Hockey India (@TheHockeyIndia) May 17, 2023 " class="align-text-top noRightClick twitterSection" data=" ">

ಭಾರತ ತಂಡವು ಮೇ 18 ರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ ತಮ್ಮ ಪ್ರವಾಸ ಪ್ರಾರಂಭಿಸಲಿದ್ದು, ಮೇ 20 ಮತ್ತು 21 ರಂದು ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನು ಆಡಲಿದೆ. ಸಂದರ್ಶಕರು ಮೇ 25 ಮತ್ತು ಮೇ 27 ರಂದು ಆಸ್ಟ್ರೇಲಿಯಾ ಎ ತಂಡವನ್ನು ಎದುರಿಸಲಿದ್ದಾರೆ. ಆಸ್ಟ್ರೇಲಿಯಾದ ಮಹಿಳಾ ಹಾಕಿ ತಂಡ ಪ್ರಸ್ತುತ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಭಾರತ ತಂಡ ಎಂಟನೇ ಸ್ಥಾನದಲ್ಲಿದೆ.

ಭಾರತೀಯ ಮಹಿಳಾ ಹಾಕಿ ತಂಡವು ಮೇ 14 ರಂದು ಅಡಿಲೇಡ್‌ಗೆ ತೆರಳಿತು ಮತ್ತು ಅಂದಿನಿಂದ ಅವರು ಆಸ್ಟ್ರೇಲಿಯಾದ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳಲು ಅಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇದೇ ವೇಳೆ ಮಾತನಾಡಿದ ಕ್ಯಾಪ್ಟನ್ ಸವಿತಾ,"ಪ್ರತಿನಿತ್ಯ ಇಲ್ಲಿ ತರಬೇತಿ ಪಡೆಯುತ್ತಿದ್ದೇವೆ. ನಮ್ಮ ಪಂದ್ಯಗಳು ಸಂಜೆ ನಡೆಯಲಿರುವುದರಿಂದ ಅಡಿಲೇಡ್‌ನಲ್ಲಿರುವ ಮೈದಾನ ಮತ್ತು ಪರಿಸ್ಥಿತಿಗಳಿಗೆ ತಂಡವು ಒಗ್ಗಿಕೊಳ್ಳುವಂತೆ ನಾವು ಇಲ್ಲಿ ದೀಪಗಳ ಅಡಿ ತರಬೇತಿ ನಡೆಸುತ್ತಿದ್ದೇವೆ. ನಾವು ಇಂದು ಬೆಳಗ್ಗೆ ತರಬೇತಿ ಅವಧಿಯನ್ನು ಹೊಂದಿದ್ದೇವೆ ಮತ್ತು ನಾಳೆ ನಮ್ಮ ಮೊದಲ ಪಂದ್ಯಕ್ಕೆ ನಾವು ತಯಾರಾಗುತ್ತಿದ್ದೇವೆ" ಎಂದರು.

ಭಾರತ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್ ಜಾನೆಕ್ ಸ್ಕೋಪ್‌ಮನ್ ಅವರು ಆಸ್ಟ್ರೇಲಿಯಾ ವಿರುದ್ಧ ಆಡಲು ತಂಡವು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಹೇಳಿದರು. "ಆಸ್ಟ್ರೇಲಿಯವನ್ನು ಎದುರಿಸಲು ಆಟಗಾರರು ಉತ್ಸುಕರಾಗಿದ್ದಾರೆ ಮತ್ತು ಸಿದ್ಧರಾಗಿದ್ದಾರೆ. ಇಲ್ಲಿ ಹವಾಮಾನವು ಉತ್ತಮವಾಗಿದೆ. ನಾವು ಉತ್ತಮ ಭಾವನೆ ಹೊಂದಿದ್ದೇವೆ ಮತ್ತು ಕಳೆದ ಕೆಲವು ವಾರಗಳಿಂದ ನಾವು ಮಾಡುತ್ತಿರುವ ಸಿದ್ಧತೆಯನ್ನು ನಾಳೆ ಪಂದ್ಯದಲ್ಲಿ ಪ್ರದರ್ಶಿಸಲಿದ್ದೇವೆ" ಎಂದು ಶಾಪ್‌ಮನ್ ಹೇಳಿದರು.

ಭಾರತೀಯ ಮಹಿಳಾ ಹಾಕಿ ತಂಡವು 2021 ರ ಟೋಕಿಯೊ ಒಲಿಂಪಿಕ್ಸ್‌ನ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು 1-0 ಗೋಲುಗಳಿಂದ ಸೋಲಿಸಿತು. ಇದು ಭಾರತ ತಂಡಕ್ಕೆ ಐತಿಹಾಸಿಕ ವಿಜಯವಾಗಿದೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022 ರ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಕಠಿಣ ಹೋರಾಟ 1-1ರ ಸಮಬಲ ಸಾಧಿಸಿತ್ತು. ಆಸ್ಟ್ರೇಲಿಯಾವು ಪೆನಾಲ್ಟಿ ಶೂಟೌಟ್ ಅನ್ನು 3-0 ಅಂತರದಿಂದ ಗೆದ್ದು ಫೈನಲ್‌ನಲ್ಲಿ ಸ್ಥಾನವನ್ನು ಕಾಯ್ದಿರಿಸಿತು, ಪೈನಲ್​ನಲ್ಲಿ ಆಸಿಸ್​ ಇಂಗ್ಲೆಂಡ್ ವಿರುದ್ಧ ಸೋತರು. ಭಾರತವು ತನ್ನ ಮೂರು ಮತ್ತು ನಾಲ್ಕನೇ ಸ್ಥಾನದ ಪಂದ್ಯಗಳನ್ನು ಗೆಲ್ಲುವ ಮೂಲಕ ಕಂಚಿನ ಪದಕವನ್ನು ಗೆದ್ದುಕೊಂಡಿತು.

ಆಸ್ಟ್ರೇಲಿಯಾದ ಭಾರತ ಪ್ರವಾಸ ವೇಳಾಪಟ್ಟಿ:

ಮೇ 18 - ಗುರುವಾರ: ಭಾರತ ವಿರುದ್ಧ ಆಸ್ಟ್ರೇಲಿಯಾ, 14:15 IST

ಮೇ 20 -ಶನಿವಾರ: ಭಾರತ ವಿರುದ್ಧ ಆಸ್ಟ್ರೇಲಿಯಾ, 14:15 IST

ಮೇ 21 - ಭಾನುವಾರ: ಭಾರತ ವಿರುದ್ಧ ಆಸ್ಟ್ರೇಲಿಯಾ, 13:45 IST

ಮೇ 25 - ಗುರುವಾರ: ಭಾರತ ವಿರುದ್ಧ ಆಸ್ಟ್ರೇಲಿಯಾ ಎ, 14:15 IST

ಮೇ 27 - ಶನಿವಾರ: ಭಾರತ ವಿರುದ್ಧ ಆಸ್ಟ್ರೇಲಿಯಾ ಎ , 14:15 IST

ಇದನ್ನೂ ಓದಿ: ಭಾರತ - ಪಾಕ್​ ನಡುವೆ ಟೆಸ್ಟ್ ಸರಣಿಗೆ ಒಪ್ಪಿದ ನಜೀಮ್​ ಸೇಥಿ : ಬಿಸಿಸಿಐ ನಿಲುವೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.