ಡೆಹ್ರಾಡೂನ್: ಪೋಲೆಂಡ್‌ನಲ್ಲಿ ಬುಧವಾರ ನಡೆದ ಯೂತ್ ವರ್ಲ್ಡ್ ವುಮೆನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ, ಭಾರತೀಯ ಮಹಿಳಾ ಬಾಕ್ಸರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು, 7 ಚಿನ್ನ ಹಾಗೂ 3 ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಭಾರತೀಯ ಯುವ ಬಾಕ್ಸಿಂಗ್ ತಂಡದ ಮುಖ್ಯ ತರಬೇತುದಾರ ಭಾಸ್ಕರ್ ಚಂದ್ರ ಭಟ್ ನೇತೃತ್ವದ 10 ಭಾರತೀಯ ಬಾಕ್ಸರ್‌ಗಳ ತಂಡ ಪೋಲೆಂಡ್‌ಗೆ ತೆರಳಿತ್ತು. 7 ಮಹಿಳಾ ಬಾಕ್ಸರ್‌ಗಳು ಚಿನ್ನದ ಪದಕ ಗೆದ್ದರೆ, ಇತರ ಮೂವರು ಪುರುಷ ಬಾಕ್ಸರ್‌ಗಳು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಗೀತಿಕಾ (48 ಕೆಜಿ), ಬಾಬಿರೋಜಿಸಾನ ಚಾನು (51 ಕೆಜಿ), ಪೂನಂ (57 ಕೆಜಿ), ವಿಂಕಾ (60 ಕೆಜಿ), ಅರುಂಧತಿ ಚೌಧರಿ (69 ಕೆಜಿ), ತೊಕ್ಕೋಮ್ ಸನಾಮಾಚು ಚಾನು (75 ಕೆಜಿ) ಮತ್ತು ಅಲ್ಫಿಯಾ ಪಠಾಣ್ (+ 81 ಕೆಜಿ) ಚಿನ್ನದ ಪದಕ ಗೆದ್ದಿದ್ದರು.
ಪುರುಷರ ವಿಭಾಗದಲ್ಲಿ ಸಚಿನ್ ಚಿನ್ನ ಗೆದ್ದರೆ, ಏಷ್ಯನ್ ಗೇಮ್ಸ್ ಬಾಕ್ಸಿಂಗ್ನಲ್ಲಿ ಬೆಳ್ಳಿ ಗೆದ್ದಿದ್ದ ಅಂಕಿತ್ ನರ್ವಾಲ್(64 ಕೆಜಿ), ಬಿಶ್ವಾಮಿತ್ರಾ ಚೊಂಗತೋಮ್(49 ಕೆಜಿ) ಮತ್ತು ವಿಶಾಲ್ ಗುಪ್ತಾ (91 ಕೆಜಿ) ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಭಾರತೀಯ ಮಹಿಳಾ ಬಾಕ್ಸರ್‌ಗಳ ಅತ್ಯುತ್ತಮ ಸಾಧನೆ ಬಗ್ಗೆ ವಿಶ್ವ ಬಾಕ್ಸಿಂಗ್ ಸಂಘದ ಅಧ್ಯಕ್ಷರು ಶ್ಲಾಘಿಸಿದ್ದಾರೆ. ವಿಶ್ವಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತೀಯ ಮಹಿಳಾ ಬಾಕ್ಸರ್‌ಗಳು ಇಷ್ಟು ಹೆಚ್ಚಿನ ಚಿನ್ನದ ಪದಕಗಳನ್ನು ಗೆದ್ದಿರುವುದು ಇದೇ ಮೊದಲು.
ಓದಿ : ವಿಶ್ವ ಯೂತ್ ಬಾಕ್ಸಿಂಗ್ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಗೀತಿಕಾ - ಬಾಬಿರೋಜಿಸಾನಾ