ನವದೆಹಲಿ: ಮಾಂಟೆನೆಗ್ರೊದ ಬುಡ್ವಾದಲ್ಲಿ ನಡೆದ 30ನೇ ಆ್ಯಡ್ರಿಯಾಟಿಕ್ ಪರ್ಲ್ ಬಾಕ್ಸಿಂಗ್ ಟೂರ್ನಮೆಂಟ್ನಲ್ಲಿ ಭಾರತದ ಬೇಬಿರೋಜಿಸನಾ ಚಾನು ಮತ್ತು ಅರುಂಧತಿ ಚೌದರಿ ಚಿನ್ನ ಗೆದ್ದಿದ್ದಾರೆ. ಈ ಮೂಲಕ ಭಾರತ ಟೂರ್ನಿಯಲ್ಲಿ 5 ಚಿನ್ನದ ಪದಕಗಳೊಂದಿಗೆ ಗರಿಷ್ಠ ಪದಕ ಪಡೆದ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
51 ಕೆಜಿ ವಿಭಾಗದಲ್ಲಿ ಚಾನು ಉಜ್ಬೆಕಿಸ್ತಾನದ ಸಬಿನಾ ಬೊಬೊಕುಲೊವಾ ವಿರುದ್ಧ 3-2 ಅಂಕಗಳಿಂದ ಗೆದ್ದರೆ, 3 ಬಾರಿಯ ಖೇಲೋ ಇಂಡಿಯಾ ಗೋಲ್ಡ್ ಮೆಡಲಿಸ್ಟ್ ಅರುಂಧತಿ ಚೌದರಿ 5-0 ಅಂತರದಿಂದ ಉಕ್ರೇನ್ನ ಮರ್ಯಾನ ಸ್ಟೋಯ್ನಿಕ್ ವಿರುದ್ಧ ಜಯ ಸಾಧಿಸಿದರು.
ಒಟ್ಟಾರೆ ಭಾರತ ತಂಡ ಟೂರ್ನಿಯಲ್ಲಿ 5 ಚಿನ್ನದ ಪದಕ, 3 ಬೆಳ್ಳಿ ಮತ್ತು 2 ಕಂಚಿನ ಪದಕ ಸಹಿತ 10 ಪದಕ ಪಡೆದು ಅಗ್ರಸ್ಥಾನಿಯಾಗಿ ಟೂರ್ನಿ ಮುಗಿಸಿತು. ಉಜ್ಬೆಕಿಸ್ತಾನ 2 ಚಿನ್ನ, ಜೆಕ್ ಗಣರಾಜ್ಯ 1 ಚಿನ್ನದ ಪದಕದೊಂದಿಗೆ 2 ಮತ್ತು 3ನೇ ಸ್ಥಾನ ಪಡೆದವು.
ಈ ಟೂರ್ನಮೆಂಟ್ನಲ್ಲಿ ಅಲ್ಫಿಯಾ ಪಠಾಣ್ (+ 81 ಕೆಜಿ), ವಿಂಕಾ (60 ಕೆಜಿ) ಮತ್ತು ಟಿ ಸನಮಾಚಾ ಚಾನು (75 ಕೆಜಿ) ಮೊದಲೆರಡು ದಿನ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.
ಇದನ್ನು ಓದಿ:ಸಮರ್ಥ್ ಶತಕ: ಬಿಹಾರ ವಿರುದ್ಧ 291 ರನ್ಗಳ ಬೃಹತ್ ಜಯ ಸಾಧಿಸಿದ ಕರ್ನಾಟಕ