ETV Bharat / sports

ಕೀವ್‌ನಲ್ಲಿ ಸಿಲುಕಿ ಕೊನೆಗೂ ಪೋಲೆಂಡ್‌ ಗಡಿ ತಲುಪಿದ ಭಾರತೀಯ ಚೆಸ್‌ ಆಟಗಾರ - ಚೆಸ್ ಆಟಗಾರ ಅನ್ವೇಶ್ ಉಪಾಧ್ಯಾಯ

ಅನ್ವೇಶ್​ ತಮ್ಮ ಇತರೆ ಪ್ರತಿಸ್ಪರ್ಧಿಗಳಂತೆ ರಷ್ಯಾ ಆಕ್ರಮಣದ ವೇಳೆ ಉಕ್ರೇನ್​ನಲ್ಲಿ ಸಿಲುಕಿದ್ದರು. ಅವರು ಸುದೀರ್ಘ 10 ಗಂಟೆಗಳ ರೈಲು ಪ್ರಯಾಣ ಮಾಡಿ ಕೀವ್​ ರಾಜಧಾನಿಯನ್ನು ಬಿಟ್ಟು ಪೋಲೆಂಡ್ ಗಡಿಗೆ ಹೊಂದಿಕೊಂಡಿರುವ ಪಶ್ಚಿಮ ಉಕ್ರೇನ್​ನ ಲುವೀವ್​ ನಗರವನ್ನೀಗ ತಲುಪಿದ್ದಾರೆ.

Indian chess player Anwesh
ಅನ್ವೇಶ್​ ಉಪಾಧ್ಯಾಯ
author img

By

Published : Mar 2, 2022, 4:15 PM IST

ನವದೆಹಲಿ: ಉಕ್ರೇನ್​ನ ರಾಜಧಾನಿ ಕೀವ್​ನಲ್ಲಿ ಸಿಲುಕಿದ್ದ ಭಾರತದ ಮಾಜಿ ರಾಷ್ಟ್ರೀಯ ರ‍್ಯಾಪಿಡ್​ ಚೆಸ್​ ಚಾಂಪಿಯನ್​ ಅನ್ವೇಶ್​ ಉಪಾಧ್ಯಾಯ ಅವರು ಕೀವ್​ ರಾಜಧಾನಿಯಿಂದ ಪೋಲೆಂಡ್​ ಗಡಿ ಮೂಲಕ ಲುವೀವ್​ ನಗರ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.

ಅನ್ವೇಶ್​ ತಮ್ಮ ಇತರೆ ಪ್ರತಿಸ್ಪರ್ಧಿಗಳಂತೆ ರಷ್ಯಾ ಆಕ್ರಮಣದ ವೇಳೆ ಉಕ್ರೇನ್​ನಲ್ಲಿ ಸಿಲುಕಿದ್ದರು. ಅವರು ಸುದೀರ್ಘ 10 ಗಂಟೆಗಳ ರೈಲು ಪ್ರಯಾಣ ಮಾಡಿ ಕೀವ್​ ರಾಜಧಾನಿಯನ್ನು ಬಿಟ್ಟು ಪೋಲೆಂಡ್ ಗಡಿಗೆ ಹೊಂದಿಕೊಂಡಿರುವ ಪಶ್ಚಿಮ ಉಕ್ರೇನ್​ನ ಲುವೀವ್​ ನಗರ ಸೇರಿದ್ದಾರೆ.

30 ವರ್ಷ ವಯಸ್ಸಿನ ಅನ್ವೇಶ್​ ಪಿಟಿಐ ಜೊತೆಗೆ ಮಾತನಾಡಿದ್ದು, ಒಂದು ದಿನ ಲುವೀವ್​ನಲ್ಲಿ ವಿಶ್ರಾಂತಿ ಪಡೆದು ನಂತರ ಭಾರತದತ್ತ ಪ್ರಯಾಣ ಬೆಳೆಸುವುದಾಗಿ ಹೇಳಿದ್ದಾರೆ.

"ನಾನು ನನ್ನ ಪೋಷಕರ ಜೊತೆಗೆ ನಿರಂತರ ಕೊನೆಗೂ ಸಂಪರ್ಕದಲ್ಲಿದ್ದೇನೆ. ಇದರಿಂದ ಅವರಿಗೆ ಧೈರ್ಯದಿಂದಿರಲು ಸಾಧ್ಯವಾಗುತ್ತದೆ. ಭಾರತೀಯ ರಾಯಭಾರ ಕಚೇರಿ ನೀಡುವ ಪ್ರತಿಯೊಂದು ಸಲಹೆಯನ್ನು ನಾನು ಅನುಸರಿಸುತ್ತಿದ್ದೇನೆ" ಎಂದು ಅನ್ವೇಶ್​ ಹೇಳಿದ್ದಾರೆ.

ಅನ್ವೇಶ್​ 2012ರಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವುದಕ್ಕಾಗಿ ಉಕ್ರೇನ್​ಗೆ ತೆರಳಿದ್ದರು. ಅವರು ಕೈವ್ ಆಸ್ಪತ್ರೆಯಲ್ಲಿ ಗ್ಯಾಸ್ಟ್ರೋಎಂಟರಾಲಜಿಯಲ್ಲಿ ಅಪ್ರೆಂಟಿಸ್‌ಶಿಪ್ ಮಾಡುತ್ತಿದ್ದರು. ಮಾರ್ಚ್​ನಲ್ಲಿ ಭಾರತಕ್ಕೆ ಬರುವ ಯೋಜನೆಯಲ್ಲಿದ್ದರು. ಆದರೆ ರಷ್ಯಾ ಫೆಬ್ರವರಿ 24ರಂದು ಉಕ್ರೇನ್​ ಮೇಲೆ ಸೈನಿಕ ಕಾರ್ಯಾಚರಣೆ ಆರಂಭಿಸಿದ್ದರಿಂದ ವಿದೇಶಿ ನಾಗರೀಕರ ಅನಿಶ್ಚಿತತೆಯ ಪರಿಣಾಮವಾಗಿ ವಿಮಾನಯಾನವನ್ನು ಸ್ಥಗಿತಗೊಳಿಸಲಾಗಿತ್ತು. ಅನ್ವೇಶ್​ ಈ ಹಿಂದೆಯೇ ಉಕ್ರೇನ್​ ತೊರೆಯಲು ಪ್ರಯತ್ನಿಸಿದ್ದರಾದರೂ, ವಿಮಾನ ಟಿಕೆಟ್​ ಸಿಕ್ಕಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಭಾರತೀಯ ಧ್ವಜ ಹಿಡಿದು ಉಕ್ರೇನ್​ನಿಂದ ಸುರಕ್ಷಿತವಾಗಿ ಹೊರಬಂದ ಪಾಕ್‌, ಟರ್ಕಿ ವಿದ್ಯಾರ್ಥಿಗಳು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.