ನವದೆಹಲಿ: ಅಜರ್ಬೈಜಾನ್ನ ಬಾಕುವಿನಲ್ಲಿ ನಡೆದ ಫಿಡೆ ಚೆಸ್ ವಿಶ್ವಕಪ್ನಲ್ಲಿ ರನ್ನರ್‌ಅಪ್ ಆಗಿ ಹೊರಹೊಮ್ಮಿರುವ ಭಾರತದ ಭರವಸೆಯ ಆಟಗಾರ ಆರ್.ಪ್ರಜ್ಞಾನಂದ ಅವರಿಗೆ 80 ಸಾವಿರ ಅಮೆರಿಕ ಡಾಲರ್ ಎಂದರೆ, ಅಂದಾಜು 66.13 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ವಿಶ್ವಕಪ್ ಗೆದ್ದ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಅವರಿಗೆ 110 ಸಾವಿರ ಡಾಲರ್ (ಅಂದಾಜು 90.90 ಲಕ್ಷ ರೂಪಾಯಿ) ಲಭಿಸಿದೆ.
ಚೆಸ್ ವಿಶ್ವಕಪ್ ಪಂದ್ಯವು ಆರ್.ಪ್ರಜ್ಞಾನಂದ ಹಾಗೂ ಕಾರ್ಲ್ಸನ್ ನಡುವಿನ ತೀವ್ರ ಪೈಪೋಟಿಯಿಂದಾಗಿ ಮಂಗಳವಾರ ಹಾಗೂ ಬುಧವಾರ ಸತತ ಎರಡು ದಿನಗಳು ಡ್ರಾನಲ್ಲಿ ಅಂತ್ಯಕಂಡಿತ್ತು. ಹೀಗಾಗಿ ಗುರುವಾರ ಅಲ್ಪಾವಧಿಯ ಟೈ-ಬ್ರೇಕ್ ಪಂದ್ಯವನ್ನು ನಡೆಸಲಾಗಿತ್ತು. ಇದರಲ್ಲಿ 1.5-0.5 ಅಂತರದಿಂದ ಕಾರ್ಲ್ಸನ್ ಗೆಲುವು ಸಾಧಿಸಿದ್ದರು. ವೀರೋಚಿತ ಪ್ರರ್ದಶನದ ನಡುವೆಯೂ ರನ್ನರ್‌ಅಪ್ ಆಗಿದ್ದ ಪ್ರಜ್ಞಾನಂದ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಫೈನಲ್ನಲ್ಲಿ ಸೋತರೂ ಕೂಡ 18 ವರ್ಷದ ಅತಿ ಕಿರಿಯ ವಯಸ್ಸಿಗೆ ಪ್ರಜ್ಞಾನಂದ ಮಾಡಿದ ಈ ಸಾಧನೆಯು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಪ್ರತಿಯೊಬ್ಬರು ಪ್ರಜ್ಞಾನಂದ ಪ್ರಯತ್ನವನ್ನು ಕೊಂಡಾಡಿದ್ದಾರೆ.
-
We are proud of Praggnanandhaa for his remarkable performance at the FIDE World Cup! He showcased his exceptional skills and gave a tough fight to the formidable Magnus Carlsen in the finals. This is no small feat. Wishing him the very best for his upcoming tournaments. pic.twitter.com/KXYcFRGYTO
— Narendra Modi (@narendramodi) August 24, 2023 " class="align-text-top noRightClick twitterSection" data="
">We are proud of Praggnanandhaa for his remarkable performance at the FIDE World Cup! He showcased his exceptional skills and gave a tough fight to the formidable Magnus Carlsen in the finals. This is no small feat. Wishing him the very best for his upcoming tournaments. pic.twitter.com/KXYcFRGYTO
— Narendra Modi (@narendramodi) August 24, 2023We are proud of Praggnanandhaa for his remarkable performance at the FIDE World Cup! He showcased his exceptional skills and gave a tough fight to the formidable Magnus Carlsen in the finals. This is no small feat. Wishing him the very best for his upcoming tournaments. pic.twitter.com/KXYcFRGYTO
— Narendra Modi (@narendramodi) August 24, 2023
''ಫಿಡೆ ವಿಶ್ವಕಪ್ನಲ್ಲಿ ಪ್ರಜ್ಞಾನಂದ ತೋರಿದ ಗಮನಾರ್ಹ ಪ್ರದರ್ಶನದಿಂದ ನಾವು ಹೆಮ್ಮೆಪಡುತ್ತೇವೆ!. ಫೈನಲ್ ಪಂದ್ಯಲ್ಲಿ ಅವರು ಅಸಾಧಾರಣ ಕೌಶಲ್ಯಗಳು ಪ್ರದರ್ಶಿಸಿದರು. ಅಗ್ರಜ ಮ್ಯಾಗ್ನಸ್ ಕಾರ್ಲ್ಸನ್ ಅವರಿಗೆ ಕಠಿಣ ಪೈಪೋಟಿಯನ್ನು ಒಡ್ಡಿದರು. ಅವರು ಇಟ್ಟಿರುವ ಪುಟ್ಟ ಹೆಜ್ಜೆ ಇದಾಗಿದೆ. ಮುಂಬರುವ ಪಂದ್ಯಾವಳಿಗಳಿಗೆ ಶುಭಕೋರುತ್ತೇವೆ'' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
-
#WATCH| Indian Chess Grandmaster Praggnanandhaa's sister, Vaishali's reaction on the nationwide support for him: "...The whole nation is praying for him. I was getting goosebumps reading some of the messages. I am sure this is just the beginning of his career and he will bring… pic.twitter.com/2Fi0pFJI8Y
— ANI (@ANI) August 24, 2023 " class="align-text-top noRightClick twitterSection" data="
">#WATCH| Indian Chess Grandmaster Praggnanandhaa's sister, Vaishali's reaction on the nationwide support for him: "...The whole nation is praying for him. I was getting goosebumps reading some of the messages. I am sure this is just the beginning of his career and he will bring… pic.twitter.com/2Fi0pFJI8Y
— ANI (@ANI) August 24, 2023#WATCH| Indian Chess Grandmaster Praggnanandhaa's sister, Vaishali's reaction on the nationwide support for him: "...The whole nation is praying for him. I was getting goosebumps reading some of the messages. I am sure this is just the beginning of his career and he will bring… pic.twitter.com/2Fi0pFJI8Y
— ANI (@ANI) August 24, 2023
ಪ್ರಜ್ಞಾನಂದ ಪ್ರದರ್ಶನದ ಬಗ್ಗೆ ಕುಟುಂಬಸ್ಥರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ''ಇಡೀ ದೇಶವೇ ಪ್ರಜ್ಞಾನಂದ ಅವರಿಗಾಗಿ ಪ್ರಾರ್ಥಿಸುತ್ತಿದೆ. ಕೆಲವು ಸಂದೇಶಗಳನ್ನು ಓದಿದಾಗ ನನಗೆ ರೋಮಾಂಚನ ಉಂಟಾಗುತ್ತದೆ. ಇದು ಅವರ ವೃತ್ತಿಜೀವನದ ಆರಂಭ. ಪ್ರಜ್ಞಾನಂದ ರಾಷ್ಟ್ರಕ್ಕೆ ಬಹಳಷ್ಟು ಕೀರ್ತಿಯನ್ನು ತರುತ್ತಾರೆ ಎಂದು ನನಗೆ ಖಾತ್ರಿಯಿದೆ" ಎಂದು ಸಹೋದರಿ ವೈಶಾಲಿ ಪ್ರತಿಕ್ರಿಯಿಸಿದ್ದಾರೆ.
ಫಿಡೆ ಚೆಸ್ ವಿಶ್ವಕಪ್ ಟೂರ್ನಿಯಲ್ಲಿ ಶ್ರೇಯಾಂಕಿತ ಆಟಗಾರರನ್ನು ಮಣಿಸಿ ಪ್ರಜ್ಞಾನಂದ ಫೈನಲ್ಗೆ ಪ್ರವೇಶಿಸಿದ್ದರು. ವಿಶ್ವದ 2ನೇ ಶ್ರೇಯಾಂಕಿತ ಆಟಗಾರ ಹಿಕರು ನಕಮುರಾ ಹಾಗೂ 3ನೇ ಶ್ರೇಯಾಂಕಿತ ಆಟಗಾರ ಫ್ಯಾಬಿಯಾನೊ ಕರುವಾನಾ ಅವರನ್ನು ಹಿಮ್ಮೆಟ್ಟಿಸಿ ಅವರು ಫೈನಲ್ಗೆ ಲಗ್ಗೆ ಇಟ್ಟಿದ್ದರು.
ಫೈನಲ್ನಲ್ಲಿ ಅಗ್ರ ಶ್ರೇಯಾಂಕಿತ ಹಾಗೂ 5 ಬಾರಿಯ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಎದುರಿಸಿ, ಪ್ರಶಸ್ತಿಗಾಗಿ ತೀವ್ರ ಹಣಾಹಣಿ ನಡೆಸಿದ್ದರು. ಕೊನೆಗೆ ರನ್ನರ್ ಅಪ್ ಆಗಿ ಹೊರಹೊಮ್ಮಿದ ಪ್ರಜ್ಞಾನಂದ ಕೆನಡಾದಲ್ಲಿ ಮುಂದಿನ ವರ್ಷ ನಡೆಯುವ ಕ್ಯಾಂಡಿಡೇಟ್ಸ್ 2024 ಚೆಸ್ ಟೂರ್ನ್‌ಮೆಂಟ್‌ಗೆ ಅರ್ಹತೆ ಪಡೆದಿದ್ದಾರೆ. ಈ ಪಂದ್ಯಾವಳಿಗೆ ಅರ್ಹತೆ ಪಡೆದ ಜಗತ್ತಿನ 3ನೇ ಅತಿ ಕಿರಿಯ ಆಟಗಾರನೆಂಬ ಕೀರ್ತಿಗೂ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ನಾರ್ವೆಯ ಮ್ಯಾಗ್ನಸ್ ಮುಡಿಗೆ ಚೊಚ್ಚಲ ಚೆಸ್ ವಿಶ್ವಕಪ್ ಕಿರೀಟ; ವೀರೋಚಿತ ಸೋಲು ಕಂಡ ಪ್ರಜ್ಞಾನಂದ ರನ್ನರ್‌ಅಪ್