ನೂರ್-ಸುಲ್ತಾನ್: ಕಜಾಕಿಸ್ತಾನ್ನ ನೂರ್ಸುಲ್ತಾನ್ನಲ್ಲಿ ನಡೆಯುತ್ತಿರುವ ಮಹಿಳೆಯರ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನ 2ನೇ ಮರುಹಂಚಿಕೆ ಸುತ್ತಿನಲ್ಲಿ ವಿಶ್ವದ ನಂಬರ್ ಒನ್ ಶ್ರೇಯಾಂಕದ ಸಾರಾ ಹಿಲ್ಡರ್ ಬ್ರಾಂಡ್ರನ್ನು ಮಣಿಸಿ ಟೋಕಿಯೋ ಒಲಿಂಪಿಕ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಮಂಗಳವಾರ ನಡೆದ ಪಂದ್ಯದಲ್ಲಿ ಜಪಾನ್ನ ಮಾಯಾ ಮುಕೈದಾ ವಿರುದ್ಧ 0-7ರಲ್ಲಿ ಸೋಲನುಭವಿಸಿದ್ದರು. ಆದರೆ ಮುಕೈದಾ ಫೈನಲ್ ತಲುಪಿದ್ದರಿಂದ ಫೋಗಟ್ಗೆ ಮರುಹಂಚಿಕೆ ಸುತ್ತಿನಲ್ಲಿ ಕಂಚಿಗಾಗಿ ಹೋರಾಡುವ ಅವಕಾಶ ಸಿಕ್ಕಿತ್ತು.
ಇಂದು ನಡೆದ ಮರುಹಂಚಿಕೆಯ ಮೊದಲ ಪಂದ್ಯದಲ್ಲಿ ಉಕ್ರೇನ್ನ ಯುವಿಲಿಯಾ ಅವರನ್ನು 5-0ಯಲ್ಲಿ ಮಣಿಸಿದ್ದ ಫೋಗಟ್, ಎರಡನೇ ಪಂದ್ಯದಲ್ಲಿ ಕಳೆದ ಬಾರಿಯ ವಿಶ್ವಚಾಂಪಿಯನ್ಶಿಪ್ನ ಬೆಳ್ಳಿ ಪದಕ ವಿಜೇತೆ ಅಮೆರಿಕದ ಸಾರಾ ಹಿಲ್ಡರ್ಬ್ರಾಂಡ್ರನ್ನು 8-2 ರಲ್ಲಿ ಮಣಿಸಿ 2020ರ ಟೋಕಿಯೋ ಒಲಿಂಪಿಕ್ಗೆ ಅರ್ಹತೆ ಗಿಟ್ಟಿಸಿಕೊಂಡರಲ್ಲದೆ ಕಂಚಿನ ಪದಕಕ್ಕೆ ಹತ್ತಿರವಾಗಿದ್ದಾರೆ.
ಇಂದು ಕಂಚಿನ ಪದಕಕ್ಕಾಗಿ ಗ್ರೀಕ್ನ ಮರಿಯಾ ಪ್ರೇವೊಲರಕಿ ವಿರುದ್ಧ ಫೋಗಟ್ ಸೆಣಸಾಟ ನಡೆಸಲಿದ್ದಾರೆ.