ರಾಂಚಿ: ಶುಕ್ರವಾರ ಜಾರ್ಖಂಡ್ನಲ್ಲಿ ಆರಂಭಗೊಂಡ ಮಹಿಳಾ ಏಷ್ಯನ್ ಚಾಂಪಿಯನ್ ಟ್ರೋಫಿ 2023ರ ಮೊದಲ ಪಂದ್ಯದಲ್ಲಿ ಭಾರತದ ವನಿತೆಯರು ಥಾಯ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದ್ದಾರೆ. ಸವಿತಾ ಪುನಿಯಾ ನೇತೃತ್ವದ ಭಾರತದ ಹಾಕಿ ತಂಡ ಥಾಯ್ಲೆಂಡ್ ವಿರುದ್ಧ ಸಾಂಘಿಕ ಪ್ರದರ್ಶನ ತೋರಿ 7-1 ಅಂತರದಿಂದ ಗೆಲುವು ದಾಖಲಿಸಿದೆ.
-
Many congratulations on your grand victory GIRLS! 🥳🎉🎉
— SAI Media (@Media_SAI) October 27, 2023 " class="align-text-top noRightClick twitterSection" data="
Best wishes for the next battle👍 https://t.co/XQrVvpbZrc
">Many congratulations on your grand victory GIRLS! 🥳🎉🎉
— SAI Media (@Media_SAI) October 27, 2023
Best wishes for the next battle👍 https://t.co/XQrVvpbZrcMany congratulations on your grand victory GIRLS! 🥳🎉🎉
— SAI Media (@Media_SAI) October 27, 2023
Best wishes for the next battle👍 https://t.co/XQrVvpbZrc
ಭಾರತದ ಪರ ಸಂಗೀತಾ ಕುಮಾರಿ ಅವರ ಹ್ಯಾಟ್ರಿಕ್ ಗೋಲು (29, 45, 45ನೇ, ನಿಮಿಷ ) ಗಳಿಸಿದರು. ಇದಕ್ಕೂ ಮೊದಲು ಮೋನಿಕಾ (7ನೇ, ನಿ), ಸಲಿಮಾ ಟೆಟೆ (15ನೇ, ನಿ) ಕ್ರಮವಾಗಿ ಮೊದಲೆರಡು ಗೋಲು ಗಳಿಸಿದರು. ಉಳಿದಂತೆ ದೀಪಿಕಾ (40ನೇ, ನಿ) ಮತ್ತು ಲಾಲ್ರೆಮ್ಸಿಯಾಮಿ (52ನೇ, ನಿ) ಗೋಲು ತಲಾ ಒಂದು ಗಳಿಸುವಲ್ಲಿ ಯಶಸ್ವಿಯಾದರು.
ಥಾಯ್ಲೆಂಡ್ ತಂಡದ ಪರ ಸುಪಾನ್ಸಾ ಸಮನ್ಸೊ ಅವರು 22ನೇ ನಿಮಿಷದಲ್ಲಿ ಸಾಧಿಸಿದ ಏಕೈಕ ಗೋಲು ಹೊರತು ಪಡಿಸಿದರೆ ಬೇರೆ ಯಾವೊಬ್ಬ ಆಟಗಾರ್ತಿಯರು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಈ ಮೂಲಕ ಭಾರತದ ನಾರಿಯರು ಏಷ್ಯನ್ ಚಾಂಪಿಯನ್ ಟೂರ್ನಿಯ ಮೊದಲ ಪಂದ್ಯದಲ್ಲೇ ತಮ್ಮ ಪ್ರಾಬಲ್ಯ ಮೆರದು, ಅತ್ಯುತ್ತಮ ಗೆಲುವಿನ ನಗೆ ಬೀರಿದ್ದಾರೆ.
ನಿರೀಕ್ಷೆಯಂತೆ ಭಾರತವು ಆಕ್ರಮಣಕಾರಿ ಆಟದೊಂದಿಗೆ ಪಂದ್ಯವನ್ನು ಪ್ರಾರಂಭಿಸಿತು. ಪಂದ್ಯದ 7ನೇ ನಿಮಿಷದಲ್ಲಿ ಮೋನಿಕಾ ಬಲವಾದ ಹೊಡೆತದೊಂದಿಗೆ ಮೊದಲ ಗೋಲು ಗಳಿಸಿ, ಟೀಮ್ ಇಂಡಿಯಾಗೆ ಮುನ್ನಡೆ ಒದಗಿಸಿಕೊಟ್ಟರು. ಬಳಿಕ 15ನೇ ನಿಮಿಷದಲ್ಲಿ ಸಲಿಮಾ ಟೆಟೆ ಥಾಯ್ಲೆಂಡ್ ವಿರುದ್ದ ಮತ್ತೊಂದು ಗೋಲು ದಾಖಲಿಸುವ ಮೂಲಕ ಎದುರಾಳಿ ತಂಡವನ್ನು ಒತ್ತಡಕ್ಕೆ ದೂಡಿದರು.
22ನೇ ನಿಮಿಷದಲ್ಲಿ ಥಾಯ್ಲೆಂಡ್ನ ಸುಪಾನ್ಸ್ ಸಮನ್ಸೊ ಪೆನಾಲ್ಟಿ ಕಾರ್ನರ್ನಿಂದ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ಇದರ ಬಳಿಕ ಮತ್ತೆ ಕಮ್ ಬ್ಯಾಕ್ ಮಾಡಿದ ಭಾರತದ ನಾರಿಯರು ಯಾವುದೆ ತಪ್ಪುಗಳನ್ನು ಮಾಡದೇ ನಿರಂತರ ಗೋಲುಗಳನ್ನು ದಾಖಲಿಸುತ್ತ 7-1 ಅಂತರದಿಂದ ಗೆಲುವಿನ ನಗೆ ಬೀರಿದರು.
ವಿಶ್ವ ಶ್ರೇಯಾಂಕದಲ್ಲಿ ಏಳನೇ ಸ್ಥಾನದಲ್ಲಿರುವ ಭಾರತದ ಮಹಿಳಾ ಹಾಕಿ ತಂಡ ಇಂದು ತನ್ನ ಎರಡನೇ ಪಂದ್ಯದಲ್ಲಿ ವಿಶ್ವ ಶ್ರೇಯಾಂಕದಲ್ಲಿ 18ನೇ ಸ್ಥಾನದಲ್ಲಿರುವ ಮಲೇಷ್ಯಾವನ್ನು ಎದುರಿಸಲಿದೆ. ಮೊದಲ ಪಂದ್ಯ ಗೆದ್ದ ವಿಶ್ವಾಸದಲ್ಲಿ ಭಾರತದ ವನಿತೆಯರು ಗೆಲುವಿನ ಓಟ ಮುಂದುವರೆಸಲು ಯೋಜನೆ ರೂಪಿಸಿದ್ದಾರೆ. ಇಂದಿನ ಭಾರತ ಮತ್ತು ಮಲೇಷ್ಯಾ ನಡುವಿನ ಹಾಕಿ ಪಂದ್ಯ ಸೋನಿ ಸ್ಟಾರ್ಸ್ಪೋರ್ಟ್ಸ್ನಲ್ಲಿ ನೇರಪ್ರಸಾರಗೊಳ್ಳಲಿದೆ.
ಇದನ್ನೂ ಓದಿ: ಪ್ಯಾರಾ ಏಷ್ಯನ್ ಗೇಮ್ಸ್, 6ನೇ ದಿನ: 99 ಪದಕ ಗೆದ್ದು ದಾಖಲೆ ಬರೆದ ಭಾರತ; ನಾಳೆ ಕ್ರೀಡಾಕೂಟಕ್ಕೆ ತೆರೆ