ETV Bharat / sports

ಹಾಕಿ ಟೆಸ್ಟ್​ನಲ್ಲಿ ಭಾರತಕ್ಕೆ 4-3 ಗೋಲಿಂದ ಜಯ.. 13 ವರ್ಷದ ಬಳಿಕ ಆಸೀಸ್​ ವಿರುದ್ಧ ಮೊದಲ ಗೆಲುವು - ಆಸೀಸ್​ ವಿರುದ್ಧ ಮೊದಲ ಗೆಲುವು

ಹಾಕಿ ಟೆಸ್ಟ್​ ಸರಣಿ ಸೋಲಿನ ಆತಂಕದಲ್ಲಿದ್ದ ಭಾರತ ಮೂರನೇ ಪಂದ್ಯದಲ್ಲಿ ವಿಶ್ವ ನಂ.1 ಆಸ್ಟ್ರೇಲಿಯಾವನ್ನು 4-3 ಗೋಲುಗಳಿಂದ ಸೋಲಿಸಿದೆ. ಆದರೂ ಸರಣಿಯಲ್ಲಿ 2-1 ರಲ್ಲಿ ಹಿನ್ನಡೆಯಲ್ಲಿದೆ.

india-shock-australia
ಹಾಕಿ ಟೆಸ್ಟ್​ನಲ್ಲಿ ಭಾರತಕ್ಕೆ 4-3 ಗೋಲಿಂದ ಜಯ
author img

By

Published : Nov 30, 2022, 7:51 PM IST

ಅಡಿಲೇಡ್(ಆಸ್ಟ್ರೇಲಿಯಾ): ಸತತ ಎರಡು ಪಂದ್ಯಗಳನ್ನು ಕೈಚೆಲ್ಲಿ ಸರಣಿ ಸೋಲಿನ ಭೀತಿಯಲ್ಲಿದ್ದ ಭಾರತ ವಿಶ್ವದ ನಂಬರ್​ 1 ತಂಡವಾದ ಆಸ್ಟ್ರೇಲಿಯಾಗೆ ಮೂರನೇ ಹಾಕಿ ಟೆಸ್ಟ್​ ಪಂದ್ಯದಲ್ಲಿ ಸೋಲುಣಿಸಿ ಸರಣಿ ಜೀವಂತವಾಗಿರಿಸಿದೆ. ಅಲ್ಲದೇ, ದ್ವಿಪಕ್ಷೀಯ ಸರಣಿಯಲ್ಲಿ 13 ವರ್ಷಗಳ ಬಳಿಕ ಭಾರತ ಇದೇ ಮೊದಲ ಗೆಲುವು ದಾಖಲಿಸಿತು.

ಅಡಿಲೇಡ್​ನಲ್ಲಿ ನಡೆದ 5 ಪಂದ್ಯಗಳ ಹಾಕಿ ಟೆಸ್ಟ್​ ಸರಣಿಯ ಮೂರನೇ ಪಂದ್ಯದಲ್ಲಿ ಕೊನೆಯ ಕ್ಷಣದಲ್ಲಿ ತೋರಿದ ಚಾಣಾಕ್ಷತನದಿಂದ ಭಾರತ 4-3 ಗೋಲುಗಳಿಂದ ಆಸ್ಟ್ರೇಲಿಯಾವನ್ನು ಮಣಿಸಿತು. ಈ ವರ್ಷದ ಆರಂಭದಲ್ಲಿ ನಡೆದ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ ಫೈನಲ್‌ನಲ್ಲಿ 7-0 ಅಂತರದಲ್ಲಿ ಸೋಲಿಸಿದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕಿದು ಮೊದಲ ಜಯವಾಗಿದೆ.

ಭಾರತದ ಪರವಾಗಿ ನಾಯಕ ಹರ್ಮನ್‌ಪ್ರೀತ್ ಸಿಂಗ್ (12ನೇ ನಿಮಿಷ), ಅಭಿಷೇಕ್ (47ನೇ), ಶಂಶೇರ್ ಸಿಂಗ್ (57ನೇ) ಮತ್ತು ಆಕಾಶದೀಪ್ ಸಿಂಗ್ 60ನೇ ನಿಮಿಷದಲ್ಲಿ ಗೋಲು ಗಳಿಸಿದರು. ಆಸ್ಟ್ರೇಲಿಯಾದ ಪರವಾಗಿ ಜ್ಯಾಕ್ ವೆಲ್ಚ್ 25ನೇ ನಿಮಿಷ, ನಾಯಕ ಅರಾನ್ ಝೆಲೆವ್​ಸ್ಕಿ 32ನೇ ನಿಮಿಷ, ನಾಥನ್ ಎಫ್ರಾಮ್ಸ್ 59ನೇ ನಿಮಿಷದಲ್ಲಿ ಗೋಲು ಬಾರಿಸಿದರು.

ಈ ಗೆಲುವಿನ ಮೂಲಕ ಭಾರತ 2-1 ಹಿನ್ನಡೆಯೊಂದಿಗೆ ಐದು ಪಂದ್ಯಗಳ ಸರಣಿಯನ್ನು ಜೀವಂತವಾಗಿರಿಸಿದೆ. ಸರಣಿ ಗೆಲುವಿಗೆ ಇನ್ನುಳಿದ 2 ಪಂದ್ಯಗಳಲ್ಲಿ ಭಾರತ ಗೆಲ್ಲಲೇಬೇಕಿದೆ. ಮೊದಲೆರಡು ಪಂದ್ಯಗಳಲ್ಲಿ 4-5 ಮತ್ತು 4-7 ಅಂತರದಲ್ಲಿ ಭಾರತ ಸೋತಿತ್ತು. ನಾಲ್ಕನೇ ಪಂದ್ಯ ಶನಿವಾರ ನಡೆಯಲಿದೆ.

ಓದಿ: ಫಿಫಾ ವಿಶ್ವಕಪ್​ನಲ್ಲಿ ಸ್ಟೆಫಾನಿ ಫ್ರಾಪಾರ್ಟ್ ದಾಖಲೆ.. ಮಹಿಳಾ ರೆಫ್ರಿಯಾಗಿ ನಾಳೆ ಕಣಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.