ETV Bharat / sports

ವಿಶ್ವದ ನಂ.1ಚೆಸ್​​ ಆಟಗಾರನಿಗೆ ಸೋಲಿನ ರುಚಿ ತೋರಿಸಿದ 16 ವರ್ಷದ ಭಾರತದ ಪ್ರಗ್ನಾನಂದ್! - ಚೆಸ್​ನಲ್ಲಿ ಪ್ರಗ್ನಾನಂದ್

ವಿಶ್ವ ಚಾಂಪಿಯನ್​, ನಂಬರ್​ 1 ಚೆಸ್ ಮಾಸ್ಟರ್​ ಮ್ಯಾಗ್ನಸ್​​ ಕಾರ್ಲ್​ಸನ್​​​ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿರುವ ಭಾರತದ 16 ವರ್ಷದ ಪ್ರಗ್ನಾನಂದ್, ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ.

India R Praggnanandhaa
India R Praggnanandhaa
author img

By

Published : May 21, 2022, 4:08 PM IST

ನವದೆಹಲಿ: ಕೇವಲ 16 ವರ್ಷದ ಭಾರತದ ಗ್ರ್ಯಾಂಡ್ ಮಾಸ್ಟರ್​ ಆರ್​​. ಪ್ರಗ್ನಾನಂದ್​​ ವಿಶ್ವದ ನಂಬರ್​ 1 ಚೆಸ್​ ಆಟಗಾರನಿಗೆ ಸೋಲಿನ ರುಚಿ ತೋರಿಸಿದ್ದಾನೆ. ಈ ಮೂಲಕ ಒಂದೇ ವರ್ಷದಲ್ಲಿ ಎರಡು ಸಲ ವಿಶ್ವ ಚಾಂಪಿಯನ್​​ ಮ್ಯಾಗ್ನಸ್​​ ಕಾರ್ಲೆಸನ್​​ ಅವರಿಗೆ ಸೋಲಿಸಿದ್ದಾರೆ. ಏರ್ಥಿಂಗ್​ ಮಾಸ್ಟರ್ಸ್​​​ ಆನ್​ಲೈನ್​ ಟೂರ್ನಿಯಲ್ಲಿ ಈ ಸಾಧನೆ ಮಾಡಿರುವ 16 ವರ್ಷದ ಪ್ರಗ್ನಾನಂದ್ ಕಾರ್ಲ್​​ಸನ್​​ ಅವರ ಗೆಲುವಿಗೆ ಬ್ರೇಕ್​ ಹಾಕಿದ್ದಾರೆ. ಇದರ ಜೊತೆಗೆ ಭಾರತದ ಮೂರನೇ ಕಿರಿಯ ಗ್ರ್ಯಾಂಡ್ ಮಾಸ್ಟರ್ ಎನ್ನುವ ಕೀರ್ತಿಗೆ ಇವರು ಪಾತ್ರರಾಗಿದ್ದಾರೆ. ಈಗಾಗಲೇ ಈ ಸಾಧನೆಯಲ್ಲಿ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥ್ ಹಾಗೂ ಹರಿಕೃಷ್ಣ ಮಾಡಿದ್ದಾರೆ.

ಮೂಲತಃ ತಮಿಳುನಾಡಿನ ಚೆನ್ನೈದವರಾಗಿರುವ ಪ್ರಗ್ನಾನಂದ ಆಗಸ್ಟ್​​ 10, 2005ರಲ್ಲಿ ಜನಿಸಿದ್ದು, ಕೇವಲ 10 ವರ್ಷದವನಾಗಿದ್ದಾಗಲೇ ಕಿರಿಯ ಮಾಸ್ಟರ್ ಆಗಿ ಹೊರಹೊಮ್ಮಿದ್ದರು. ಇದಾದ ಬಳಿಕ 2018ರಲ್ಲಿ ಗ್ರ್ಯಾಂಡ್​ ಮಾಸ್ಟರ್​​ ಆಗಿ ಜಯ ಸಾಧಿಸಿದ್ದರು.

ಈ ಹಿಂದೆ ಫೆಬ್ರವರಿ ತಿಂಗಳಲ್ಲಿ ನಡೆದ ಏರ್​ಥಿಂಗ್ಸ್​ ಮಾಸ್ಟರ್ಸ್​​ನಲ್ಲಿ ಕಾರ್ಲ್​ಸನ್​​ ಅವರಿಗೆ ಪ್ರಗ್ನಾನಂದ ಸೋಲಿನ ರುಚಿ ತೋರಿಸಿದ್ದರು. ವಿಶೇಷ ಎಂದರೆ 2013ರಲ್ಲೇ ವಿಶ್ವ ಯೂತ್ ಚೆಸ್ ಚಾಂಪಿಯನ್​ಶಿಪ್​​ನಲ್ಲಿ ಪ್ರಗ್ನಾನಂದ್ ಅಂಡರ್​ - 8 ಪ್ರಶಸ್ತಿ ಗೆದ್ದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.