ನವದೆಹಲಿ : ಡಾ.ಕರ್ಣಿ ಸಿಂಗ್ ಶೂಟಿಂಗ್ ರೇಂಜ್ನಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ನ ರೈಫಲ್, ಪಿಸ್ತೂಲ್, ಶಾಟ್ಗನ್ ವಿಭಾಗಗಳಲ್ಲಿ ಭಾರತ ಮತ್ತೆ ಮೂರು ಚಿನ್ನದ ಪದಕಗಳನ್ನು ಗೆದ್ದಿದೆ. ಈ ಮೂಲಕ ಆರು ಚಿನ್ನ, ನಾಲ್ಕು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ಭಾರತ ಗೆದ್ದಿದ್ದು, ಪದಕದ ಭೇಟೆಯಲ್ಲಿ ಮುಂಚೂಣಿಯಲ್ಲಿದೆ.
ಆತಿಥೇಯ ಭಾರತ ತಂಡ ಸೋಮವಾರ ಒಟ್ಟು 14 ಪದಕಗಳನ್ನು ಗೆದ್ದಿದೆ. 10 ಮೀ. ಏರ್ ರೈಫಲ್ ಮಿಶ್ರ ತಂಡ ಸ್ಪರ್ಧೆ ಗೆಲ್ಲುವ ಮೂಲಕ ಚಾಂಪಿಯನ್ಶಿಪ್ನ ನಾಲ್ಕನೇ ದಿನವನ್ನು ಪ್ರಾರಂಭಿಸಿತು. ದಿನದ ಕೊನೆಯ ಫೈನಲ್ ಪಂದ್ಯದಲ್ಲಿ ಸ್ಕೀಟ್ ಪುರುಷರ ತಂಡವು ಚಿನ್ನ ಗೆದ್ದಿದೆ. ಮಹಿಳಾ ಸ್ಕೀಟ್ ತಂಡ ಬೆಳ್ಳಿ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಕಂಚು ಗೆದ್ದಿದೆ.
ಓದಿ : ಶೂಟಿಂಗ್ ವಿಶ್ವಕಪ್: ಭಾರತಕ್ಕೆ 7ನೇ ಚಿನ್ನದ ಪದಕ ತಂದುಕೊಟ್ಟ ಬಜ್ವಾ-ಸೆಖೋನ್
ದಿನದ ಮೊದಲ ಫೈನಲ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಜೋಡಿ ಎಲವೆನಿಲ್ ವಲರಿವನ್ ಮತ್ತು ದಿವ್ಯಾನ್ಶ್ ಸಿಂಗ್ ಪನ್ವಾರ್, ಹಂಗೇರಿಯ ಚಾಂಪಿಯನ್ ರೈಫಲ್ ಶೂಟರ್ ಇಸ್ತವಾನ್ ಪೆನಿ ಮತ್ತು ವಿಶ್ವದ 9ನೇ ಸ್ಥಾನದಲ್ಲಿರುವ ಡೆನೆಸ್ ಎಸ್ಜ್ಟರ್ ವಿರುದ್ಧ ವೈಯಕ್ತಿಕ ಒಂಬತ್ತು ಸ್ಥಾನ ಪಡೆದಿದ್ದಾರೆ ಮತ್ತು ವೈಯಕ್ತಿಕ ಮಹಿಳಾ 10 ಮೀಟರ್ ಏರ್ ರೈಫಲ್‌ನಲ್ಲಿ ಕಂಚು ಗೆದ್ದಿದ್ದಾರೆ.