ETV Bharat / sports

ಭಾರತದಲ್ಲಿ ಒಲಿಂಪಿಕ್ಸ್​ ಕ್ರೀಡಾಕೂಟ ನಡೆಯುವ ವಿಶ್ವಾಸ: ಪುಲ್ಲೇಲ ಗೋಪಿಚಂದ್​ - ETV bharat kannada news

ವಿಶ್ವ ಕ್ರೀಡಾಕೂಟ ಎಂದೇ ಹೆಸರಾದ ಒಲಿಂಪಿಕ್​ಗೆ ಆತಿಥ್ಯ ವಹಿಸುವ ಶಕ್ತಿ ಭಾರತಕ್ಕೆ ಇದೆ ಎಂದು ಮಾಜಿ ಬ್ಯಾಡ್ಮಿಂಟನ್​ ಆಟಗಾರ ಪುಲ್ಲೇಲ ಗೋಪಿಚಂದ್​ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

india-can-soon-hope-to-host-olympics
ಭಾರತದಲ್ಲಿ ಒಲಿಂಪಿಕ್ಸ್​ ಕ್ರೀಡಾಕೂಟ
author img

By

Published : Sep 15, 2022, 3:15 PM IST

ಗಾಂಧಿನಗರ (ಗುಜರಾತ್): ಗುಜರಾತ್​ನಲ್ಲಿ ರಾಷ್ಟ್ರೀಯ ಕ್ರೀಡಾಕೂಟದಂತಹ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿರುವುದು, ಮುಂದಿನ ದಿನಗಳಲ್ಲಿ ಒಲಿಂಪಿಕ್ಸ್​ ಕ್ರೀಡಾಕೂಟ ಆಯೋಜನೆ ಮಾಡುವುದಕ್ಕೆ ಶಕ್ತಿ ಬಂದಿದೆ. ಭಾರತದಲ್ಲಿ ಒಲಿಂಪಿಕ್ಸ್​​ ನಡೆಯುವ ವಿಶ್ವಾಸವಿದೆ ಎಂದು ಮಾಜಿ ಬ್ಯಾಡ್ಮಿಂಟನ್​ ಆಟಗಾರ ಪುಲ್ಲೇಲ ಗೋಪಿಚಂದ್​ ಹೇಳಿದರು.

ಗುಜರಾತ್​ನಲ್ಲಿ 7 ವರ್ಷಗಳ ಬಳಿಕ ರಾಷ್ಟ್ರೀಯ ಕ್ರೀಡಾಕೂಟ ಆಯೋಜನೆಯಾಗುತ್ತಿದೆ. ಇದು ಸಂತಸದ ವಿಚಾರ. ಇಂತಹ ದೊಡ್ಡ ಕ್ರೀಡಾಕೂಟವನ್ನು ಆಯೋಜಿಸಿದ ಮೇಲೆ ಒಲಿಂಪಿಕ್ಸ್​ ಕ್ರೀಡಾಕೂಟವನ್ನೂ ನಡೆಸಿಕೊಡುವುದು ದೊಡ್ಡ ವಿಷಯವೇನಲ್ಲ. ಹಾಗಾಗಿ ಮುಂದೆ ಭಾರತದಲ್ಲಿ ಒಲಿಂಪಿಕ್ಸ್​ ಕೂಟ ನಡೆಯಲಿದೆ ಎಂದು ಭಾವಿಸುವೆ ಎಂದರು.

ರಾಷ್ಟ್ರೀಯ ಕ್ರೀಡಾಕೂಟ 20 ಸಾವಿರಕ್ಕೂ ಅಧಿಕ ಕ್ರೀಡಾಳುಗಳು ಭಾಗವಹಿಸುವ ದೊಡ್ಡ ಸ್ಪರ್ಧೆಯಾಗಿದೆ. 11 ಸಾವಿರ ಸ್ಪರ್ಧಿಗಳು ಭಾಗವಹಿಸುವ ಒಲಿಂಪಿಕ್ಸ್​ ಅನ್ನೂ ಸರ್ಕಾರ ಆಯೋಜಿಸುವ ವಿಶ್ವಾಸವಿದೆ ಎಂದು ಪುಲ್ಲೇಲ ಗೋಪಿಚಂದ್​ ಹೇಳಿದರು.

ಇನ್ನು ರಾಷ್ಟ್ರೀಯ ಕ್ರೀಡಾಕೂಟದ ಬಗ್ಗೆ ಮಾತನಾಡಿ, ಕೂಟದಲ್ಲಿ ಗುಜರಾತ್​ ಟಾಪ್​ 5 ರಲ್ಲಿ ಬರುವಂತೆ ಆಗಬೇಕು. ಕ್ರೀಡಾಳುಗಳು ಶಕ್ತಿ ಮೀರಿ ಪ್ರಯತ್ನಿಸಿ ಪದಕ ಜಯಿಸಬೇಕು. ಇಂತಹ ಬೃಹತ್​ ಕ್ರೀಡಾಕೂಟವನ್ನು ಆಯೋಜಿಸಿದ್ದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಅಭಿನಂದಿಸುವೆ ಎಂದರು.

ಇಂತಹ ದೊಡ್ಡ ಕ್ರೀಡಾಕೂಟವನ್ನು ಆಯೋಜಿಸುವುದು ಸವಾಲಿನ ಕೆಲಸ. ಅದನ್ನು ಗುಜರಾತ್​ ಸರ್ಕಾರ ಮಾಡಿದೆ. ಜವಾಬ್ದಾರಿಯನ್ನು ವಹಿಸಿಕೊಂಡು ದೊಡ್ಡ ಪ್ರಮಾಣದಲ್ಲಿ ಆಯೋಜಿಸುತ್ತಿರುವುದಕ್ಕೆ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಕಳೆದ 8 10 ವರ್ಷಗಳಲ್ಲಿ ಫಿಟ್ ಇಂಡಿಯಾ, ಖೇಲೋ ಇಂಡಿಯಾದಂತಹ ಯೋಜನೆಗಳಿಂದ ದೇಶದಲ್ಲಿ ಕ್ರೀಡಾ ಕ್ಷೇತ್ರ ಅಭೂತಪೂರ್ವವಾಗಿ ಅಭಿವೃದ್ಧಿ ಕಂಡಿದೆ ಎಂದರು. ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್ ಉಪಸ್ಥಿತರಿದ್ದರು.

ಓದಿ: ಟೆಸ್ಟ್‌, ಏಕದಿನ ಕ್ರಿಕೆಟ್‌ ಸಲುವಾಗಿ ಕೊಹ್ಲಿ ಟಿ20 ಗೆ ವಿದಾಯ ಹೇಳುವುದು ಸೂಕ್ತ: ಅಖ್ತರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.