ಬೆಂಗಳೂರು: ಸ್ಯಾಫ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಭಾರತ ಪುರುಷರ ತಂಡ ರೋಚಕ ಗೆಲುವು ಸಾಧಿಸಿದೆ. ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತ 5-4 ಗೋಲುಗಳಿಂದ ಕುವೈತ್ ತಂಡವನ್ನು ಸೋಲಿಸಿ ಒಂಬತ್ತನೇ ಬಾರಿಗೆ ಸ್ಯಾಫ್ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದುಕೊಂಡಿದೆ.
ಬೆಂಗಳೂರಿನ ಶ್ರೀಕಂಠೀರವ ಸ್ಟೇಡಿಯಂನಲ್ಲಿ ಇಂದು ಭಾರತ ಮತ್ತು ಕುವೈತ್ ತಂಡಗಳು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಎರಡೂ ತಂಡಗಳು ರೋಚಕ ಹಣಾಹಣಿ ನಡೆಸಿದವು. ಮೊದಲಾರ್ಧದಲ್ಲಿ ಪ್ರಬಲ ಪೈಪೋಟಿ ನುಡುವೆ ತಲಾ ಒಂದು ಗೋಲು ಗಳಿಸಲು ಮಾತ್ರ ಸಾಧ್ಯವಾಯಿತು. ನಂತರ ಹೆಚ್ಚುವರಿ ಸಮಯದ ಅಂತ್ಯಕ್ಕೆ ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತ 5-4ರಿಂದ ಕುವೈಟ್ ತಂಡವನ್ನು ಮಣಿಸಿತು. ಗುರ್‌ಪ್ರೀತ್ ಸಿಂಗ್ ಸಂಧು ಪೆನಾಲ್ಟಿಗಳನ್ನು ಉಳಿಸುವ ಮೂಲಕ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವಂತೆ ಮಾಡಿದರು.
-
🇮🇳 INDIA are SAFF 𝐂𝐇𝐀𝐌𝐏𝐈𝐎𝐍𝐒 for the 9️⃣th time! 💙
— Indian Football Team (@IndianFootball) July 4, 2023 " class="align-text-top noRightClick twitterSection" data="
🏆 1993
🏆 1997
🏆 1999
🏆 2005
🏆 2009
🏆 2011
🏆 2015
🏆 2021
🏆 𝟮𝟬𝟮𝟯#SAFFChampionship2023 #BlueTigers 🐯 #IndianFootball ⚽ pic.twitter.com/3iLJQSeyWG
">🇮🇳 INDIA are SAFF 𝐂𝐇𝐀𝐌𝐏𝐈𝐎𝐍𝐒 for the 9️⃣th time! 💙
— Indian Football Team (@IndianFootball) July 4, 2023
🏆 1993
🏆 1997
🏆 1999
🏆 2005
🏆 2009
🏆 2011
🏆 2015
🏆 2021
🏆 𝟮𝟬𝟮𝟯#SAFFChampionship2023 #BlueTigers 🐯 #IndianFootball ⚽ pic.twitter.com/3iLJQSeyWG🇮🇳 INDIA are SAFF 𝐂𝐇𝐀𝐌𝐏𝐈𝐎𝐍𝐒 for the 9️⃣th time! 💙
— Indian Football Team (@IndianFootball) July 4, 2023
🏆 1993
🏆 1997
🏆 1999
🏆 2005
🏆 2009
🏆 2011
🏆 2015
🏆 2021
🏆 𝟮𝟬𝟮𝟯#SAFFChampionship2023 #BlueTigers 🐯 #IndianFootball ⚽ pic.twitter.com/3iLJQSeyWG
ಈ ಗೆಲುವಿನೊಂದಿಗೆ ಭಾರತ ಒಂಬತ್ತನೇ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಈ ಮೊದಲು 1993, 1997, 1999, 2005, 2009, 2011, 2015, ಹಾಗೂ 2021ರಲ್ಲಿ ಭಾರತ ಫುಟ್ಬಾಲ್ ತಂಡ ಸ್ಯಾಫ್ ಚಾಂಪಿಯನ್‌ಶಿಪ್ ಗೆದ್ದಿತ್ತು. ಸೆಮಿಫೈನಲ್ನಲ್ಲಿ ಮಣಿಸಿ ಭಾರತ 13ನೇ ಬಾರಿಗೆ ಫೈನಲ್ಗೆ ಪ್ರವೇಶಿಸಿತ್ತು. ಸೆಮಿಫೈನಲ್ನಲ್ಲೂ 120 ನಿಮಿಷಗಳ ಗೋಲುರಹಿತ ಆಟದಿಂದಾಗಿ ಕೊನೆಗೆ ಪೆನಾಲ್ಟಿ ಶೂಟೌಟ್ ಪಂದ್ಯಕ್ಕೆ ಹೋಗಿತ್ತು. ಇದರಲ್ಲಿ ಭಾರತ ತನ್ನ ಅದ್ಭುತ ಕಾಲ್ಚಳಕ ಪ್ರದರ್ಶಿಸಿ 4-2ರಿಂದ ಪಂದ್ಯ ಗೆದ್ದಿತ್ತು. ಮತ್ತೊಂದು ಸೆಮಿಫೈನಲ್ನಲ್ಲಿ ಬಾಂಗ್ಲಾದೇಶವನ್ನು ಕುವೈತ್ 1-0 ಗೋಲಿನಿಂದ ಸೋಲಿಸಿ ಫೈನಲ್ಗೆ ಬಂದಿತ್ತು.
ಇದನ್ನೂ ಓದಿ: Mark Taylor: 50 ವರ್ಷಗಳ ಟಾಪ್ 5 ಕ್ರಿಕೆಟಿಗರ ಪಟ್ಟಿಯಲ್ಲಿ ಇಬ್ಬರು ಭಾರತೀಯ ಬ್ಯಾಟರ್ಗಳ ಹೆಸರು ಸೂಚಿಸಿದ ಟೇಲರ್