ETV Bharat / sports

ಏಷ್ಯಾ ಕಪ್​: ಮುಗ್ಗರಿಸಿದ ಚೀನಾ.. ಕಂಚಿನ ಪದಕಕ್ಕೆ ಕೊರಳೊಡ್ಡಿದ ಭಾರತದ ವನಿತೆಯರು - India Women Hockey

2022ರ ಮಹಿಳಾ ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತ ಮಹಿಳಾ ಹಾಕಿ ತಂಡವು ಚೀನಾ ವಿರುದ್ಧ 2-0 ಗೋಲುಗಳ ಅಂತರದ ಜಯ ಸಾಧಿಸಿ, ಕಂಚಿನ ಪದಕಕ್ಕೆ ಮುತ್ತಿಕ್ಕಿದೆ.

India beat China in thriller to finish 3rd in Women Asia Cup 2022
ಏಷ್ಯಾ ಕಪ್​
author img

By

Published : Jan 29, 2022, 4:45 AM IST

ಮಸ್ಕತ್: 2022ರ ಮಹಿಳಾ ಏಷ್ಯಾ ಕಪ್‌ ಟೂರ್ನಿಯಲ್ಲಿ ಮೂರು/ನಾಲ್ಕನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡವು ಚೀನಾ ವಿರುದ್ಧ 2-0 ಗೋಲುಗಳ ಅಂತರದ ಜಯ ಸಾಧಿಸಿ, ಕಂಚಿನ ಪದಕಕ್ಕೆ ಕೊರಳೊಡ್ಡಿದೆ.

ತಂಡದ ಶರ್ಮಿಳಾ ದೇವಿ (13ನೇ ನಿಮಷ) ಮತ್ತು ಗುರ್ಜಿತ್ ಕೌರ್ (19 ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಸವಿತಾ ನೇತೃತ್ವದ ತಂಡವು ಮೂರನೇ ಸ್ಥಾನದೊಂದಿಗೆ ಏಷ್ಯಾ ಕಪ್‌ ಅಭಿಯಾನ ಮುಗಿಸಿದೆ.

ಪಂದ್ಯದ ಆರಂಭದಿಂದಲೂ ಎರಡೂ ತಂಡಗಳು ಪರಸ್ಪರರ ಆಕ್ರಮಣಕಾರಿ ಮತ್ತು ಡಿಫೆಂಡಿಂಗ್ ಕೌಶಲ್ಯ ಪ್ರದರ್ಶಿಸುವುದರೊಂದಿಗೆ ಗೋಲು ಬಾರಿಸಲು ರೋಚಕ ಹೋರಾಟ ನಡೆಸಿದವು. ಸಂಭಾವ್ಯ ಗೋಲು ಗಳಿಸುವ ಅವಕಾಶ ಮತ್ತು ಪೆನಾಲ್ಟಿ ಕಾರ್ನರ್‌ ಅವಕಾಶ ಗಿಟ್ಟಿಸಿಕೊಂಡಿದ್ದವು. ಆದರೆ ಗೋಲಾಗಿ ಪರಿವರ್ತಿಸುವಲ್ಲಿ ವಿಫಲರಾದವು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಆದರೂ ಕೂಡ ಪಂದ್ಯದ 14ನೇ ನಿಮಿಷದಲ್ಲಿ ಭಾರತದ ಯುವ ಫಾರ್ವರ್ಡ್ ಶರ್ಮಿಳಾ ಗುರ್ಜಿತ್ ಅವರ ಶಕ್ತಿಯುತ ಡ್ರ್ಯಾಗ್ ಫ್ಲಿಕ್​ ಮೂಲಕ ಗೋಲು ಬಾರಿಸಿ ತಂಡಕ್ಕೆ ಮೇಲುಗೈ ಒದಗಿಸಿದರು. ಬಳಿಕ 4 ನಿಮಿಷಗಳ ಅಂತರದಲ್ಲೇ ಗುರ್ಜಿತ್ ಕೌರ್ ಪೆನಾಲ್ಟಿ ಕಾರ್ನರ್​​ನ್ನು ಗೋಲಾಗಿ ಪರಿವರ್ತಿಸಿ 2-0 ಮುನ್ನಡೆಗೆ ಕಾರಣರಾದರು.

ಸ್ಕೋರ್‌ಲೈನ್‌ನಲ್ಲಿ ಮೂರನೇ ಗೋಲು ಸೇರಿಸುವ ಅವಕಾಶ ಸಿಕ್ಕರೂ ಕೂಡ ನವನೀತ್ ಸ್ವಲ್ಪದರಲ್ಲೇ ಗುರಿ ತಪ್ಪಿದರು. ಮತ್ತೊಂದೆಡೆ ಚೀನಾಗೆ ಪಂದ್ಯದಲ್ಲಿ ಏಕೈಕ ಗೋಲು ಕೂಡ ಗಳಿಸಲಾಗಲಿಲ್ಲ.

ಹತ್ತು ನಿಮಿಷಗಳ ಅರ್ಧ ಸಮಯದ ವಿರಾಮದ ನಂತರ, 0-2ರಿಂದ ಹಿನ್ನಡೆಯಲ್ಲಿದ್ದ ಚೀನಾ, ಮೂರನೇ ಕ್ವಾರ್ಟರ್ ಅನ್ನು ಭಾರತದ ಮೇಲೆ ಒತ್ತಡ ಹೇರಲು ಯತ್ನಿಸಿತು. ಆದರೆ ಭಾರತದ ರಕ್ಷಣಾತ್ಮಕ ಆಟದಲ್ಲಿ ಯಶಸ್ಸು ಸಾಧಿಸಿ, ಚೀನಾಗೆ ಗೋಲು ಬಾರಿಸದಂತೆ ತಡೆಯಿತು. ಕೊನೆಯವರೆಗೂ ಗೋಲು ಗಳಿಸಲಾಗದ ಚೀನಾ 0-2ರ ಅಂತರದಿಂದ ಭಾರತಕ್ಕೆ ಮಣಿಯಿತು.

ಈ ಗೆಲುವಿನೊಂದಿಗೆ 2022 ರ ಮಹಿಳಾ ಏಷ್ಯಾ ಕಪ್‌ನಲ್ಲಿ ಸವಿತಾ ಪಡೆ ಮೂರನೇ ಸ್ಥಾನ ಗಳಿಸಿ, ಕಂಚಿನ ಪದಕ ಪಡೆದುಕೊಂಡಿದೆ.

ಇದನ್ನೂ ಓದಿ: ರೋಹಿತ್ ಬಳಿ ಧೋನಿ, ಗಂಭೀರ್​​ ಅವರಂತಹ ನಾಯಕತ್ವದ ಗುಣ, ಆತನೋರ್ವ ಪ್ರೇರಕ ಎಂದ ಡರೇನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.