ಹ್ಯಾಂಗ್‌ಝೌ (ಚೀನಾ): ಭಾರತದ ಅಥ್ಲೀಟ್ಗಳು ಚೀನಾದಲ್ಲಿ ನಡೆಯುತ್ತಿರುವ ಮಿನಿ ಒಲಂಪಿಕ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನಡೆಯುತ್ತಿರುವ ಮೂರನೇ ದಿನ ಭಾರತ ಈವರೆಗೆ 14 ಪದಕಗಳನ್ನು ಗೆದ್ದಿದೆ. ಮೂರು ಚಿನ್ನ, ನಾಲ್ಕು ಬೆಳ್ಳಿ ಮತ್ತು ಏಳು ಕಂಚನ್ನು ಗೆದ್ದಿರುವ ಭಾರತ 6ನೇ ಸ್ಥಾನದಲ್ಲಿದೆ.
ಟೆನಿಸ್: ಏಷ್ಯನ್ ಗೇಮ್ಸ್ 2023 ರ 3ನೇ ಸುತ್ತಿನ ಪಂದ್ಯದಲ್ಲಿ ಭಾರತದ ಏಸ್ ಭಾರತೀಯ ಪುರುಷರ ಸಿಂಗಲ್ಸ್ ಆಟಗಾರ, ವಿಶ್ವದ ನಂ. 159 ರ ಸುಮಿತ್ ನಗಲ್, 7-6, 6-4 ರಿಂದ 127 ನಿಮಿಷಗಳಲ್ಲಿ 297 ನೇ ಶ್ರೇಯಾಂಕದ ಕಜಕಿಸ್ತಾನದ ಬೀಬಿತ್ ಝುಕಾಯೆವ್ ವಿರುದ್ಧ ಗೆದ್ದರು.
26 ವರ್ಷದ ನಾಗಲ್ ನಾಳೆ ಹ್ಯಾಂಗ್‌ಝೌನಲ್ಲಿ ನಡೆಯಲಿರುವ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಜಾಂಗ್ ಝಿಜೆನ್ ವಿರುದ್ಧ ಸೆಣಸಲಿದ್ದಾರೆ. ಭಾರತದ ಮಹಿಳಾ ಡಬಲ್ಸ್ ಜೋಡಿ ಅಂಕಿತಾ ರೈನಾ ಮತ್ತು ಪ್ರಾರ್ಥನಾ ಥೋಂಬರೆ 7-5, 6-2 ರಲ್ಲಿ ಥಾಯ್ಲೆಂಡ್‌ನ ಅಂಚಿಸಾ ಚಾಂಟಾ ಮತ್ತು ಪುನ್ನಿನ್ ಕೊವಾಪಿಟುಕೆಡ್ ವಿರುದ್ಧ 2ನೇ ಸುತ್ತಿನಲ್ಲಿ ಸೋತರು 2023 ರ ಏಷ್ಯನ್ ಗೇಮ್ಸ್‌ನಿಂದ ಹೊರಬಿದ್ದರು.
ಭಾರತದ ಅಂಕಿತಾ ರೈನಾ-ಯುಕಿ ಭಾಂಬ್ರಿ ಜೋಡಿಯು ಮಿಶ್ರ ಡಬಲ್ಸ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿತು. ಭಾರತದ ಮಿಶ್ರ ಡಬಲ್ಸ್ ಜೋಡಿ ಪಾಕಿಸ್ತಾನದ ಸಾರಾ ಖಾನ್ ಮತ್ತು ಅಕೀಲ್ ಖಾನ್ ವಿರುದ್ಧ ತಮ್ಮ ಟೆನಿಸ್ ಸುತ್ತಿನ 2 ಪಂದ್ಯದಲ್ಲಿ 6-0, 6-0 ಅಂತರದಲ್ಲಿ ಗೆದ್ದರು. ಅಗ್ರ ಶ್ರೇಯಾಂಕದ ಭಾರತೀಯ ಜೋಡಿ ಹಿಂದಿನ ಸುತ್ತಿನಲ್ಲಿ ಬೈ ಪಡೆದ್ದಿದ್ದರು.
ರೈನಾ ಮತ್ತು ಭಾಂಬ್ರಿ ಅವರು ಫಿಲಿಪ್ಪೀನ್ಸ್‌ನ ಅಲೆಕ್ಸ್ ಎಲಾ ಮತ್ತು ಫ್ರಾನ್ಸಿಸ್ ಅಲ್ಕಾಂಟರಾ ಜೋಡಿಯನ್ನು 3 ನೇ ಸುತ್ತಿನಲ್ಲಿ ಎದುರಿಸಲಿದ್ದಾರೆ. ಇಂದು ಮುಂಜಾನೆ ಹ್ಯಾಂಗ್‌ಝೌನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ರೌಂಡ್ 2 ರಲ್ಲಿ ಇಲಾ ಅವರು ಭಾರತದ ಟೆನಿಸ್ ಆಟಗಾರ್ತಿ ರುತುಜಾ ಭೋಸ್ಲೆ ಅವರನ್ನು ಸೋಲಿಸಿದರು. ರುತುಜಾ ಭೋಸ್ಲೆ ಮತ್ತು ಕರ್ಮಾನ್ ಥಂಡಿ ಕೂಡ ಹಾಂಗ್ ಕಾಂಗ್ ಚೀನಾದ ಯುಡಿಸ್ ಚೋಂಗ್ ಮತ್ತು ಹಾಂಗ್ ಯಿ ವಾಂಗ್ ವಿರುದ್ಧ 6-4, 6-1 ಅಂತರದಲ್ಲಿ ಸೋಲನುಭವಿಸಿ ಹ್ಯಾಂಗ್‌ಝೌ ಸ್ಪರ್ಧೆಯಿಂದ ಹೊರ ನಡೆದರು.
ಚೆಸ್: ವಿದಿತ್ ಸಂತೋಷ್ ಗುಜರಾತಿ 6 ನೇ ಸುತ್ತಿನ ಪಂದ್ಯವನ್ನು ಗೆದ್ದರು. ಗ್ರ್ಯಾಂಡ್ ಮಾಸ್ಟರ್ ವಿದಿತ್ ಸಂತೋಷ್ ಗುಜರಾತಿ ಪುರುಷರ ವೈಯಕ್ತಿಕ ಚೆಸ್ ಸುತ್ತಿನ 6 ಗೇಮ್‌ನಲ್ಲಿ ವಿಶ್ವ ಕಿರಿಯ ರ್‍ಯಾಪಿಡ್ ಚಾಂಪಿಯನ್ ಉಜ್ಬೇಕಿಸ್ತಾನ್‌ನ ನೊಡಿರ್ಬೆಕ್ ಅಬ್ದುಸತ್ತೊರೊವ್ ಅವರನ್ನು ಸೋಲಿಸಿದರು. ಅರ್ಜುನ್ ಕುಮಾರ್ ಎರಿಗೈಸಿ ಅವರು ಮಂಗೋಲಿಯಾದ ಬಿಲ್ಗುನ್ ಸುಮಿಯಾ ವಿರುದ್ಧ ತಮ್ಮ 6 ನೇ ಸುತ್ತಿನ ಪಂದ್ಯದಲ್ಲಿ ಸೋಲನುಭವಿಸಿದರು. ಭಾರತದ ಮಹಿಳಾ ಚೆಸ್ ಆಟಗಾರರಾದ ಕೋನೇರು ಹಂಪಿ ಮತ್ತು ಹರಿಕಾ ದ್ರೋಣವಲ್ಲಿ ತಮ್ಮ ವೈಯಕ್ತಿಕ ಸುತ್ತಿನ 6 ಗೇಮ್‌ಗಳಲ್ಲಿ ಡ್ರಾ ಸಾಧಿಸಿದರು.
ಜೂಡೋ: ಮಹಿಳೆಯರ +78 ಕೆಜಿ ಕಂಚಿನ ಪದಕದ ಪಂದ್ಯದಲ್ಲಿ ಮಂಗೋಲಿಯಾದ ಆದಿಯಾಸುರೆನ್ ಅಮರಸೈಖಾನ್ ವಿರುದ್ಧ ಗೋಲ್ಡನ್ ಸ್ಕೋರ್ ಸಮಯದಲ್ಲಿ ಭಾರತದ ಜೂಡೋಕಾ ತುಲಿಕಾ ಮಾನ್ ಅವರು ಇಪ್ಪನ್‌ನಿಂದ ಸೋತರು. 25ರ ಹರೆಯದ ತುಲಿಕಾ ಮಾನ್ ಅಬರ ಸೋಲಿನಿಂದ ಭಾರತೀಯ ನಾಲ್ವರು ಜೂಡೋ ಆಟಗಾರರು ಪದಕ ರಹಿತವಾಗಿ ದೇಶಕ್ಕೆ ಮರಳ ಬೇಕಾಗಿದೆ. ಇಂದುಬಾಲಾ ದೇವಿ ಮೈಬಮ್ ಮತ್ತು ಗರಿಮಾ ಚೌಧರಿ ಅವರು 16ರ ಸುತ್ತಿನಲ್ಲಿ ಸೋತರೆ, ಅವತಾರ್ ಸಿಂಗ್ ಅವರು ಆರಂಭಿಕ ಹಂತದಲ್ಲೇ ಸೋಲು ಕಂಡರು.
ಇದನ್ನೂ ಓದಿ: ಏಷ್ಯನ್ ಗೇಮ್ಸ್: ಸೈಲಿಂಗ್ನಲ್ಲಿ ಭಾರತಕ್ಕೆ ಬೆಳ್ಳಿ, ಎರಡು ಕಂಚು ಗೌರವ