ETV Bharat / sports

ಫಿಫಾ ವಿಶ್ವಕಪ್​ ಕ್ವಾರ್ಟರ್‌ ಫೈನಲ್: ತಂಡಗಳ ಜೆರ್ಸಿಗೆ ಹೆಚ್ಚುತ್ತಿರೋ ಬೇಡಿಕೆ

ಇಂದಿನಿಂದ ಫಿಫಾ ಕ್ವಾರ್ಟರ್​ ಫೈನಲ್​ ಪ್ರಾರಂಭವಾಗಿದ್ದು, ಕ್ವಾರ್ಟರ್​ ಫೈನಲ್​ಗೆ ತಲುಪಿರುವ ತಂಡಗಳ ಜೆರ್ಸಿ ಖರೀದಿ ಹಚ್ಚಾಗಿದ್ದು, ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿವೆ.

Increasing demand for different team jerseys
ವಿವಿಧ ತಂಡಗಳ ಜೆರ್ಸಿಗಳಿಗೆ ಹೆಚ್ಚುತ್ತಿರೋ ಬೇಡಿಕೆ
author img

By

Published : Dec 9, 2022, 2:01 PM IST

ದೋಹಾ: ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ ಕೇವಲ 32 ತಂಡಗಳ ನಡುವಿನ ಪಂದ್ಯಾಟ ಮಾತ್ರವಲ್ಲ, ಜೊತೆಗೆ ಜೆರ್ಸಿ ಪ್ರಾಯೋಜಕರಿಗೆ ಪ್ರಮುಖ ಮಾರುಕಟ್ಟೆಯೂ ಹೌದು. ಯಾಕೆಂದರೆ ಆಟ ನೋಡಲು ಬರುವ ಜನ ತಮ್ಮ ಮೆಚ್ಚಿನ ತಂಡದ ಮೇಲಿರುವ ಅಭಿಮಾನದಿಂದ ಜೆರ್ಸಿ ಧರಿಸಿ ಆಟವನ್ನು ಸಂಭ್ರಮಿಸುತ್ತಾರೆ. ಅದಕ್ಕಾಗಿಯೇ ಪ್ರಾಯೋಜಕರು ಕೂಡ ಸ್ಪರ್ಧೆಯಲ್ಲಿ ಇರುವ ತಂಡಗಳ ಜೆರ್ಸಿ ದರವನ್ನು ಅವರ ಪ್ರದರ್ಶನಕ್ಕೆ ಅನುಗುಣವಾಗಿ ನಿರ್ಧರಿಸುತ್ತಾರೆ.

ಹಾಗಾಗಿ ವಿಶ್ವಕಪ್‌ನಲ್ಲಿ ಜರ್ಮನಿ ಮತ್ತು ಬೆಲ್ಜಿಯಂ ತಂಡಗಳು ಕಳಪೆ ಪ್ರದರ್ಶನ ನೀಡಿದ ಬೆನ್ನಲ್ಲೇ ದೋಹಾದಲ್ಲಿ ಜರ್ಮನಿ ಮತ್ತು ಬೆಲ್ಜಿಯಂ ಜೆರ್ಸಿಗಳ ಬೆಲೆಗಳು ತುಂಬಾ ಕಡಿಮೆಯಾಗಿವೆ. ಮತ್ತೊಂದೆಡೆ ಸದ್ಯ ಕತಾರ್‌ನಲ್ಲಿದ್ದು, ಕ್ವಾರ್ಟರ್‌ಫೈನಲ್ ಪಂದ್ಯಗಳನ್ನು ಆಡಲಿರುವ ಜನರ ನೆಚ್ಚಿನ ತಂಡಗಳ ಜೆರ್ಸಿಗಳು ಅವ್ಯಾಹತವಾಗಿ ಮಾರಾಟವಾಗುತ್ತಿವೆ.

16ರ ಘಟ್ಟದಿಂದ ಕ್ರೊಯೇಷಿಯಾ, ಬ್ರೆಜಿಲ್, ನೆದರ್ಲ್ಯಾಂಡ್ಸ್, ಅರ್ಜೆಂಟೀನಾ, ಮೊರಾಕೊ, ಪೋರ್ಚುಗಲ್, ಇಂಗ್ಲೆಂಡ್ ಮತ್ತು ಫ್ರಾನ್ಸ್ ಕ್ವಾರ್ಟರ್‌ಫೈನಲ್​ಗೆ ಪ್ರವೇಶ ಪಡೆದಿದೆ. ಈ ತಂಡಗಳ ಜೆರ್ಸಿ ಖರೀದಿ ಹಚ್ಚಾಗಿದ್ದು, ದುಬಾರಿ ಬೆಲೆಯಲ್ಲೂ ಮಾರಾಟವಾಗುತ್ತಿವೆ. ಜರ್ಮನಿ ಜೆರ್ಸಿಯ ಬೆಲೆ 670 ಕತಾರಿ ರಿಯಾಲ್‌ಗಳಿಂದ (ಸುಮಾರು US$184) 329 ಕತಾರಿ ರಿಯಾಲ್‌ಗಳಿಗೆ (ಸುಮಾರು US$90.3) ಇಳಿದಿದೆ. ಬೆಲ್ಜಿಯಂ ಜೆರ್ಸಿಯ ಬೆಲೆ 430 ಕತಾರಿ ರಿಯಾಲ್ ಆಗಿದ್ದದ್ದು, ಈಗ 50 ಶೇಕಡಾದಷ್ಟು ಕುಸಿದಿದೆ.

ಫಿಫಾದಲ್ಲಿ ಫೈನಲ್​ ಪ್ರವೇಶಿಸುವ ತಂಡಗಳು ಎಂದು ಜರ್ಮನಿ ಮತ್ತು ಬೆಲ್ಜಿಯಂ ಗುರುತಾಗಿದ್ದರಿಂದ ಜೆರ್ಸಿಗಳನ್ನು ಹೆಚ್ಚಾಗಿ ತಯಾರಿಸಲಾಗಿತ್ತು. ಆದರೆ, ತಂಡಗಳು ಫೈನಲ್​ ವರಗೆ ಹೋಗದ ಕಾರಣ ಜರ್ಸಿಗಳು ಹಾಗೆ ಉಳಿದಿವೆ. ಮಾರಾಟಗಾರರು ರಿಯಾಯಿತಿ ದರದಲ್ಲಿ ಜರ್ಸಿಗಳನ್ನು ಮಾರಿ ಸ್ಟಾಕ್​ ಖಾಲಿ ಮಾಡುತ್ತಿದ್ದಾರೆ.

ಇದನ್ನೂ ಓದಿ: ಇಂದಿನಿಂದ ಕಾಲ್ಚೆಂಡಿನ ಕ್ವಾರ್ಟರ್ - ಫೈನಲ್: ಪೋರ್ಚುಗಲ್ ಬಿಡುತ್ತಿಲ್ಲ ರೊನಾಲ್ಡೊ ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.