ಹೈದರಾಬಾದ್: ಹೈದರಾಬಾದ್ನ ಬಿ.ಸಾಯಿ ದೀಪಕ್ ಎಂಬ ಯುವಕ ಒಂದು ನಿಮಿಷದಲ್ಲಿ 59 ಸೈಡ್ ಲಾಂಜ್ ಮಾಡುವ ಮೂಲಕ ಗಿನ್ನೆಸ್ ವಿಶ್ವದಾಖಲೆಗೆ ಸೇರಿದ್ದಾರೆ.
ದೀಪಕ್ 60 ಸೆಕೆಂಡ್ಗಳಲ್ಲಿ 59 ಸೈಡ್ ಲಾಂಜ್ ಮಾಡುವ ಮೂಲಕ ತಮ್ಮ 4ನೇ ಗಿನ್ನೆಸ್ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ಈ ವಿಭಾಗದ ಗಿನ್ನೆಸ್ ರೆಕಾರ್ಡ್ ಪಾಕಿಸ್ತಾನದ ಇರ್ಫಾನ್ ಮೆಹ್ಸೂದ್ ಅವರ ಹೆಸರಿನಲ್ಲಿತ್ತು. ತಮ್ಮ ಈ ಸಾಧನೆಯನ್ನು ಮಹಿಳೆಯರ ಭದ್ರತೆ ಹಾಗೂ ದೇಶಕ್ಕೋಸ್ಕರ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಅರ್ಪಿಸಿದ್ದಾರೆ.
"ಪಾಕಿಸ್ತಾನದ ಇರ್ಫಾನ್ ಒಂದು ನಿಮಿಷದಲ್ಲಿ 54 ಸೈಡ್ ಲಾಂಜ್ ಮಾಡಿ ದಾಖಲೆ ಬರೆದಿದ್ದರು. ನಾನು 59 ಸೈಡ್ ಲಾಂಜ್ ಮಾಡುವ ಮೂಲಕ ನಾಲ್ಕನೇ ಬಾರಿ ಗಿನ್ನೆಸ್ ದಾಖಲೆಗೆ ಸೇರ್ಪಡೆಗೊಂಡಿದ್ದೇನೆ. ಈ ಗಿನ್ನೆಸ್ ದಾಖಲೆಯನ್ನು ದೇಶವನ್ನು ಸುಸ್ಥಿತಿಯಲ್ಲಿಡಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿರುವ ಯೋಧರಿಗೆ ಅರ್ಪಿಸುತ್ತಿದ್ದೇನೆ" ಎಂದು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ದೀಪಕ್ ತಿಳಿಸಿದ್ದಾರೆ.
-
Hyderabad (Telangana): B Sai Deepak has set a Guinness World Record for most side lunges in 60 seconds. Deepak scripted the record by doing 59 side lunges in 60 seconds. The previous record was held by Pakistan's Irfan Mehsood. https://t.co/TzwscmwseM
— ANI (@ANI) January 2, 2020 " class="align-text-top noRightClick twitterSection" data="
">Hyderabad (Telangana): B Sai Deepak has set a Guinness World Record for most side lunges in 60 seconds. Deepak scripted the record by doing 59 side lunges in 60 seconds. The previous record was held by Pakistan's Irfan Mehsood. https://t.co/TzwscmwseM
— ANI (@ANI) January 2, 2020Hyderabad (Telangana): B Sai Deepak has set a Guinness World Record for most side lunges in 60 seconds. Deepak scripted the record by doing 59 side lunges in 60 seconds. The previous record was held by Pakistan's Irfan Mehsood. https://t.co/TzwscmwseM
— ANI (@ANI) January 2, 2020
ಸೈಡ್ ಲಾಂಜ್ ದಾಖಲೆಯಲ್ಲದೆ ದೀಪಕ್ ಟೇಕ್ವಾಂಡೋದಲ್ಲೇ ಇನ್ನು ಮೂರು ಗಿನ್ನೆಸ್ ದಾಖಲೆಗಳಿಗೆ ಪಾತ್ರರಾಗಿದ್ದಾರೆ. ಒಂದು ನಿಮಿಷದಲ್ಲಿ ಅತಿ ಹೆಚ್ಚು ಎಲ್ಬೋ ಸ್ಟ್ರೈಕ್ಸ್, ಮೂರು ನಿಮಿಷದಲ್ಲಿ ಅತಿ ಹೆಚ್ಚು ನೀ ಸ್ಟ್ರೈಕ್ಸ್, 5 ಕೆಜಿ ಭಾರವನ್ನು ಯಾಂಕಲ್ ವೈಟ್ಸ್ ಧರಿಸಿ ಒಂದೇ ಕಾಲಿನಲ್ಲಿ ಅತಿ ಹೆಚ್ಚು ನೀ ಸ್ಟ್ರೈಕ್ಸ್ ಮಾಡಿ ಗಿನ್ನೆಸ್ ದಾಖಲೆ ಬರೆದಿದ್ದರು.
29 ಗಿನ್ನೆಸ್ ದಾಖಲೆ ಹೊಂದಿರುವ ದೀಪಕ್ ಕೋಚ್ ಜೀವನ್ ರೆಡ್ಡಿ ಮಾತನಾಡಿ, 2024ರ ವೇಳೆಗೆ ದೀಪಕ್ನನ್ನು ಒಲಿಂಪಿಕ್ಸ್ಗೆ ಸ್ಪರ್ಧಿಸಲು ಕಳಿಸುವ ಗುರಿ ಹೊಂದಿದ್ದೇನೆ. ಇದಕ್ಕು ಮುನ್ನ ಮತ್ತಷ್ಟು ಗಿನ್ನೆಸ್ ದಾಖಲೆ ಸೃಷ್ಠಿಸಲು ಆತನಿಗೆ ತರಬೇತಿ ನೀಡುತ್ತಿದ್ದೇನೆ. ಈ ವರ್ಷ 10 ಗಿನ್ನೆಸ್ ರೆಕಾರ್ಡ್ಗಳನ್ನು ಬ್ರೇಕ್ ಮಾಡುವ ಯೋಜನೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.