ಟೋಕಿಯೊ : ಸೋಮವಾರ ವಿಶ್ವದಾಖಲೆಯೊಂದಿಗೆ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಜಾವಲಿನ್ ಥ್ರೋವರ್ ಸುಮಿತ್ ಅಂತಿಲ್ ಅವರಿಗೆ ಹರಿಯಾಣ ಸರ್ಕಾರ 6 ಕೋಟಿ ರೂ., ಬೆಳ್ಳಿ ಗೆದ್ದ ಕಥುನಿಯಾಗೆ 4 ಕೋಟಿ ರೂ. ನಗದು ಬಹುಮಾನ ಮತ್ತು ಸರ್ಕಾರಿ ಕೆಲಸ ನೀಡುವುದಾಗಿ ಘೋಷಿಸಿದೆ.
ಅಂತಿಲ್ ಪುರುಷರ ಜಾವಲಿನ್ F64 ವಿಭಾಗದಲ್ಲಿ 68.55 ಮೀಟರ್ ಎಸೆದು ವಿಶ್ವದಾಖಲೆ ಬರೆದು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಈ ಮೂಲಕ ಭಾರತಕ್ಕೆ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ 5ನೇ ಹಾಗೂ 2ನೇ ಜಾವಲಿನ್ ಥ್ರೋವರ್ ಎನಿಸಿದರು.
ಈ ಮೊದಲು 1972ರಲ್ಲಿ ಈಜುಗಾರ ಮುರಳೀಕಾಂತ್ ಪೆಟ್ಕರ್, 2004 ಮತ್ತು 2012ರಲ್ಲಿ ಜಾವಲಿನ್ ಥ್ರೋವರ್ ದೇವೇಂದ್ರ ಜಜಾರಿಯಾ ಮತ್ತು 2016ರಲ್ಲಿ ಹೈಜಂಪರ್ ಮರಿಯಪ್ಪನ್ ತಂಗವೇಲು ಹಾಗೂ ಈ ಆವೃತ್ತಿಯಲ್ಲಿ ಶೂಟರ್ ಅವನಿ ಲೇಖಾರಾ ಚಿನ್ನದ ಪದಕ ಪಡೆದಿದ್ದರು.
ಡಿಸ್ಕಸ್ ಥ್ರೋ F56 ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಅವರು 44.38 ಮೀಟರ್ ಎಸೆದು ಬೆಳ್ಳಿ ಪದಕ ಪಡೆದಿದ್ದರು. ಇವರಿಗೆ ಹರಿಯಾಣ ಸರ್ಕಾರ 4 ಕೋಟಿ ರೂ. ಬಹುಮಾನ ಘೋಷಣೆ ಮಾಡಿದೆ.
ಕಥುನಿಯಾ 2018ರಲ್ಲಿ ಜರ್ಮನಿಯ ಬರ್ಲಿನ್ನಲ್ಲಿ ನಡೆದ ಪ್ಯಾರಾ ಗ್ರ್ಯಾಂಡ್ ಫ್ರಿಕ್ಸ್ನಲ್ಲಿ 45.18 ಮೀಟರ್ ಎಸೆದು ವಿಶ್ವದಾಖಲೆ ಸೃಷ್ಟಿಸಿದ್ದರು. ಆದರೆ, ಈ ಬಾರಿ ಕೊನೆಯವರೆಗೂ ಅಗ್ರಸ್ಥಾನ ಕಾಯ್ದುಕೊಂಡಿದ್ದ ಅವರು ಬ್ರೆಜಿಲ್ನ ಸ್ಯಾಂಟೋಸ್ ತಮ್ಮ ಕೊನೆಯ ಪ್ರಯತ್ನದಲ್ಲಿ 44.47 ಮೀಟರ್ ಎಸೆದು ಚಿನ್ನದ ಪದಕ ಮುಡಿಗೇರಿಸಿಕೊಂಡರು.
ಇದನ್ನು ಓದಿ:ಪ್ಯಾರಾಲಿಂಪಿಕ್ಸ್ 'ಚಿನ್ನ' ಅವಿನ ಲೇಖಾರಾಗೆ ಆನಂದ್ ಮಹೀಂದ್ರಾ ಭರ್ಜರಿ ಗಿಫ್ಟ್