ಮೊಗ್ಯೊರೊಡ್(ಹಂಗೇರಿ): ಹಂಗೇರಿ ಗ್ರ್ಯಾಂಡ್ಸ್ ಫ್ರಿಕ್ಸ್ ಗೆಲ್ಲುವ ಮೂಲಕ ಒಂದೇ ಆವೃತ್ತಿಯಲ್ಲಿ ಹ್ಯಾಮಿಲ್ಟನ್ 7 ಎಫ್1 ಚಾಂಪಿಯನ್ಶಿಪ್ ಗೆದಿದ್ದಾರೆ. ಈ ಮೂಲಕ ಜರ್ಮನಿಯ ಮೈಕಲ್ ಶೂಮೇಕರ್ ಅವರೊಂದಿಗೆ ಸಾರ್ವಕಾಲಿಕ ದಾಖಲೆ ಹಂಚಿಕೊಂಡಿದ್ದಾರೆ.
ಹಂಗೇರಿಯನ್ ಜಿಪಿಯಲ್ಲಿನ ತಮ್ಮ ಎಂಟನೇಯ ವಿಜಯವನ್ನು ಹ್ಯಾಮಿಲ್ಟನ್ ಪಡೆದರು. ಲೆಜೆಂಡ್ ಶೂಮೇಕರ್ ಕೂಡ ಫ್ರೆಂಚ್ ಜಿಪಿಯಲ್ಲಿ 8 ಪ್ರಶಸ್ತಿ ಪಡೆದಿದ್ದಾರೆ.
ಒಟ್ಟಾರೆ ನೋಡುವುದಾದರೆ ಇದು ಹ್ಯಾಟಿಲ್ಟನ್ ಅವರ 86ನೇ ಜಿಪಿ ವಿಜಯವಾಗಿದೆ. ಸಾರ್ವಕಾಲಿಕ ದಾಖಲೆ ಬರೆದಿರುವ ಮೈಕಲ್ ಶೂಮೇಕರ್ 91 ಜಿಪಿ ಗೆದ್ದಿದ್ದಾರೆ.
ನಿನ್ನೆ ನಡೆದ ಹಂಗೇರಿಯನ್ ಜಿಪಿಯಲ್ಲಿ 360 ಕಿಮೀ ದೂರವನ್ನು 1 ಗಂಟೆ 36 ನಿಮಿಷ ಹಾಗೂ 12.473 ಸೆಕೆಂಡ್ಗಳಲ್ಲಿ ತಲುಪಿ ಮೊದಲ ಸ್ಥಾನ ಪಡೆದಿದ್ದರು. ರೆಡ್ಬುಲ್ಸ್ನ ಮ್ಯಾಕ್ಸ್ ವರ್ಸ್ಟಾಪನ್ (+8.702) 2ನೇ ಸ್ಥಾನ ಹಾಗೂ ಹ್ಯಾಮಿಲ್ಟನ್ ಅವರ ತಂಡದವರೇ ಆದ ವಲ್ಟೇರಿ ಬೊಟ್ಟಾಸ್ (+9.452) ಮೂರನೇ ಸ್ಥಾನ ಪಡೆದರು.