ಚೆನ್ನೈ: ಇಟಲಿಯಲ್ಲಿ ನಡೆದ ಟೂರ್ನಮೆಂಟ್ನಲ್ಲಿ ಗೋವಾದ 14 ವರ್ಷದ ಲಿಯಾನ್ ಮೆಂಡೊಂಕಾ ಫೈನಲ್ ಪಂದ್ಯ ಗೆಲ್ಲುವ ಮೂಲಕ ಭಾರತದ 67ನೇ ಚೆಸ್ ಗ್ರ್ಯಾಂಡ್ ಮಾಸ್ಟರ್ ಎನಿಸಿಕೊಂಡಿದ್ದಾರೆ.
ಮೆಂಡೊಂಕಾ ತಮ್ಮ 14ನೇ ವರ್ಷದಲ್ಲಿ (14 ವರ್ಷ 9 ತಿಂಗಳು ಹಾಗೂ 17ದಿನಗಳು) ಈ ಸಾಧನೆ ಮಾಡಿದ್ದಾರೆ. ಅವರು ಗೋವಾ ರಾಜ್ಯದ 2ನೇ ಗ್ರ್ಯಾಂಡ್ ಮಾಸ್ಟರ್ ಎನಿಸಿಕೊಂಡಿದ್ದಾರೆ.
ಅಕ್ಟೋಬರ್ನಲ್ಲಿ ಈ ಆಟಗಾರ ತಮ್ಮ ಮೊದಲ ಜಿಮ್ ನಾರ್ಮ್ ಗೆದ್ದಿದ್ದರು. ನವೆಂಬರ್ನಲ್ಲಿ ಎರಡನೇ ಜಿಎಂ ಹಾಗೂ ಮೂರನೇ ಜಿಎಂ ಅನ್ನು ಇಟಲಿಯಲ್ಲಿ ಗೆಲ್ಲುವ ಮೂಲಕ ಭಾರತದ 67ನೇ ಗ್ರ್ಯಾಂಡ್ ಮಾಸ್ಟರ್ ಎನ್ನಿಸಿಕೊಂಡಿದ್ದಾರೆ.
-
At 14 yrs, 9 months, 17 days, Leon Mendonca is now India's 67th GM. Only Goa's 2nd GM. When world shut down in March, Leon & his father were stranded in Europe. Away for 10 mnths now, they turned adversity into advantage. Leon won his final norm at Vergani Cup, Italy. @ESPNIndia
— Susan Ninan (@ninansusan) December 31, 2020 " class="align-text-top noRightClick twitterSection" data="
">At 14 yrs, 9 months, 17 days, Leon Mendonca is now India's 67th GM. Only Goa's 2nd GM. When world shut down in March, Leon & his father were stranded in Europe. Away for 10 mnths now, they turned adversity into advantage. Leon won his final norm at Vergani Cup, Italy. @ESPNIndia
— Susan Ninan (@ninansusan) December 31, 2020At 14 yrs, 9 months, 17 days, Leon Mendonca is now India's 67th GM. Only Goa's 2nd GM. When world shut down in March, Leon & his father were stranded in Europe. Away for 10 mnths now, they turned adversity into advantage. Leon won his final norm at Vergani Cup, Italy. @ESPNIndia
— Susan Ninan (@ninansusan) December 31, 2020
ಕೊರೊನಾ ವೈರಸ್ ಪರಿಣಾಮ ಜಾರಿಯಾದ ಲಾಕ್‌ಡೌನ್ ಮತ್ತು ಪ್ರಯಾಣದ ನಿರ್ಬಂಧಗಳ ಹಿನ್ನೆಲೆಯಲ್ಲಿ ಮೆಂಡೊಂಕಾ ಮತ್ತು ಅವರ ತಂದೆ ಲಿಂಡನ್ ಮಾರ್ಚ್ನಿಂದಲೂ ಯುರೋಪ್ನಲ್ಲಿ ಸಿಲುಕಿಕೊಂಡಿದ್ದರು. ಆದರೆ ಇದನ್ನು ಅನುಕೂಲಕ್ಕೆ ಬಳಸಿಕೊಂಡ ಅವರು ಗ್ರ್ಯಾಂಡ್ ಮಾಸ್ಟರ್ (ಜಿಎಂ) ಪ್ರಶಸ್ತಿಯನ್ನು ಪಡೆಯುವ ಉದ್ದೇಶದಿಂದ ಹಲವು ಟೂರ್ನಮೆಂಟ್ಗಳಲ್ಲಿ ಪಾಲ್ಗೊಂಡಿದ್ದರು.
ಮಾರ್ಚ್ನಿಂದ ಡಿಸೆಂಬರ್ವರೆಗೆ ಒಂಭತ್ತು ತಿಂಗಳ ಅವಧಿಯಲ್ಲಿ ಮೆಂಡೊಂಕಾ 16 ಟೂರ್ನಮೆಂಟ್ಗಳಲ್ಲಿ ಆಡಿದ್ದು, ತಮ್ಮ ಇಎಲ್ಒ ರೇಟಿಂಗ್ ಪಾಯಿಂಟ್ ಅನ್ನು 2432 ರಿಂದ 2544ಕ್ಕೆ ಏರಿಸಿಕೊಂಡಿದ್ದರು.