ETV Bharat / sports

ಫ್ರೆಂಚ್ ಓಪನ್ ಮಹಿಳೆಯರ ಸಿಂಗಲ್ಸ್‌: ಚೊಚ್ಚಲ ಬಾರಿಗೆ ಸೆಮೀಸ್‌ಗೇರಿದ ಬೆಲಾರಸ್‌ ಪ್ರತಿಭೆ

ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್​ನಲ್ಲಿ ಬೆಲಾರಸ್‌ನ ಅರೀನಾ ಸಬಲೆಂಕಾ 6-4, 6-4ರ ನೇರ ಸೆಟ್‌ಗಳಿಂದ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಅವರನ್ನು ಮಣಿಸಿದರು.

french-open-2023
ಫ್ರೆಂಚ್ ಓಪನ್: ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಮಣಿಸಿದ ಬೆಲಾರಸ್‌ನ ಅರೀನಾ ಸಬಲೆಂಕಾ
author img

By

Published : Jun 6, 2023, 8:17 PM IST

ಪ್ಯಾರಿಸ್‌: ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್​ ವಿಭಾಗದ ಪಂದ್ಯದಲ್ಲಿ ವಿಶ್ವದ ಎರಡನೇ ಶ್ರೇಯಾಂಕದ ಆಟಗಾರ್ತಿ ಬೆಲಾರಸ್‌ನ ಅರೀನಾ ಸಬಲೆಂಕಾ ಅವರು ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಅವರನ್ನು 6-4, 6-4 ಸೆಟ್‌ಗಳಿಂದ ಸೋಲಿಸಿ ಫ್ರೆಂಚ್ ಓಪನ್ ಸೆಮಿಫೈನಲ್ ತಲುಪಿದರು. ಸಬಲೆಂಕಾ ಸೆಮಿಫೈನಲ್​ನಲ್ಲಿ ಝೆಕ್ ಕರೋಲಿನಾ ಮುಚೋವಾ ಅವರನ್ನು ಎದುರಿಸಲಿದ್ದಾರೆ.

ಈ ಪಂದ್ಯ ಹೆಚ್ಚು ಆಕರ್ಷಣೆಗೆ ಕಾರಣವಾಗಿತ್ತು. ಇದಕ್ಕೆ ಕಾರಣ ರಷ್ಯಾ ಮತ್ತು ಉಕ್ರೇನ್​ ನಡುವಿನ ಯುದ್ಧದ ಪರಿಸ್ಥಿತಿ. ಅಷ್ಟೇ ಅಲ್ಲ, ಕಳೆದ ಅಕ್ಟೋಬರ್‌ನಲ್ಲಿ ತಾಯಿಯಾದ ನಂತರ ತನ್ನ ಮೊದಲ ಗ್ರ್ಯಾಂಡ್‌ಸ್ಲಾಮ್ ಈವೆಂಟ್‌ನಲ್ಲಿ ಸ್ವಿಟೋಲಿನಾ ಭಾಗವಹಿಸುತ್ತಿದ್ದಾರೆ. ಹೀಗಾಗಿ ಸ್ವಿಟೋಲಿನಾ ಅವರಿಗೆ ಮೈದಾನದಲ್ಲಿ ಹೆಚ್ಚು ಬೆಂಬಲ ಸಿಕ್ಕಿತು.

2023ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ತನ್ನ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದ ಸಬಲೆಂಕಾ ತಮ್ಮ ಜಯದ ಲಯ ಮುಂದುವರೆಸಿದ್ದಾರೆ. ಮೈದಾನದಲ್ಲಿ ಉಕ್ರೇನ್​ಗೆ ಹೆಚ್ಚು ಬೆಂಬಲ ವ್ಯಕ್ತವಾದರೂ ಸಬಲೆಂಕಾ ಆಟ ಬಿಟ್ಟುಕೊಡಲಿಲ್ಲ. ಎಲಿನಾ ಸ್ವಿಟೋಲಿನಾ ವಿರುದ್ಧ ಪ್ರಬಲ ಹೋರಾಟ ತೋರಿಸಿದರು. ಅಗ್ರ ಶ್ರೇಯಾಂಕದ ಮೇಲೆ ಕಣ್ಣಿಟ್ಟಿರುವ ಸಬಲೆಂಕಾ ತೀವ್ರ ಪೈಪೋಟಿ ನೀಡಿದ್ದು ಎದುರಾಳಿಯನ್ನು 6-4, 6-4 ರ ನೇರ ಸೆಟ್​ಗಳಿಂದ ಸೋಲಿಸಿ ಸೆಮೀಸ್​ಗೆ ಪ್ರವೇಶ ಪಡೆದರು.

ಪುರುಷರ ಸಿಂಗಲ್ಸ್​ ಕ್ವಾರ್ಟರ್‌ ಫೈನಲ್: 2023ರ ಫ್ರೆಂಚ್ ಓಪನ್‌ನಲ್ಲಿ ಬಹು ನಿರೀಕ್ಷಿತ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ ಕಾರ್ಲೋಸ್ ಅಲ್ಕರಾಜ್ ಐದನೇ ಶ್ರೇಯಾಂಕದ ಸ್ಟೆಫಾನೋಸ್ ಸಿಟ್ಸಿಪಾಸ್ ಅವರನ್ನು ಕ್ವಾರ್ಟರ್ ಫೈನಲ್‌ನಲ್ಲಿ ಎದುರಿಸಲಿದ್ದಾರೆ. 2021 ರ ಯುಎಸ್ ಓಪನ್‌ನಲ್ಲಿ ಅವರ ಅತ್ಯಂತ ಗಮನಾರ್ಹ ಮುಖಾಮುಖಿಯಾಗಿದ್ದು, ಅಲ್ಕಾರಾಜ್ ರೋಮಾಂಚಕ ಐದು-ಸೆಟ್ ಪಂದ್ಯಗಳಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದ್ದರು. ಇವರಿಬ್ಬರ ನಡುವೆ ಇಂದು ರಾತ್ರಿ 11:45ಕ್ಕೆ ಪಂದ್ಯ ನಡೆಯಲಿದೆ.

ಇದಲ್ಲದೇ, 22 ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್, ಎರಡು ಬಾರಿಯ ಫ್ರೆಂಚ್ ಓಪನ್ ಚಾಂಪಿಯನ್ ಮತ್ತು ವಿಶ್ವದ 3 ನೇ ಶ್ರೇಯಾಂಕಿತ ನೊವಾಕ್ ಜೊಕೊವಿಕ್ ಅವರು ವಿಶ್ವದ 11 ನೇ ಶ್ರೇಯಾಂಕಿತ ಕರೆನ್ ಕಚನೋವ್ ವಿರುದ್ಧ ಪಂದ್ಯ ಆಡುತ್ತಿದ್ದಾರೆ. ಪಂದ್ಯ ಸಂಜೆ 5:30ಕ್ಕೆ ಆರಂಭವಾಗಿದ್ದು, ಕರೆನ್ ಕಚನೋವ್ ಮೊದಲ ಸೆಟ್​ ವಶಪಡಿಸಿಕೊಂಡಿದ್ದಾರೆ. ಒಂದು ವೇಳೆ ಕ್ವಾರ್ಟರ್‌-ಫೈನಲ್​ನಲ್ಲಿ ಕಾರ್ಲೋಸ್ ಅಲ್ಕರಾಜ್ ಮತ್ತು ನೊವಾಕ್ ಜೊಕೊವಿಕ್ ಗೆದ್ದಲ್ಲಿ ಸೆಮೀಸ್​ನಲ್ಲಿ ತೀವ್ರ ಪೈಪೋಟಿ ಕಾಣಸಿಗಲಿದೆ. ಅಲ್ಲದೇ ಜನರು ಈ ಜೋಡಿಯ ಮುಖಾಮುಖಿಯನ್ನು ನೋಡಲು ಹೆಚ್ಚು ಉತ್ಸುಕರಾಗಿದ್ದಾರೆ.

ಜರ್ಮನಿ ಕ್ವಾರ್ಟರ್‌ ಫೈನಲ್ ಪ್ರವೇಶ: ಜರ್ಮನಿಯ ಟೆನಿಸ್ ಆಟಗಾರ ಅಲೆಕ್ಸಾಂಡರ್ ಜ್ವೆರೆವ್ ಅವರು ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ 2023 ಟೂರ್ನಿಯಲ್ಲಿ ಬಲ್ಗೇರಿಯಾದ ಟೆನಿಸ್ ಆಟಗಾರ ಗ್ರಿಗೊರ್ ಡಿಮಿಟ್ರೋವ್ ಅವರನ್ನು ಸೋಲಿಸಿದ್ದಾರೆ. ಪಂದ್ಯವನ್ನು ಗೆಲ್ಲುವ ಮೂಲಕ ಅಲೆಕ್ಸಾಂಡರ್ ಜ್ವೆರೆವ್ ಫ್ರೆಂಚ್ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ. ಜೂನ್ 5 ಸೋಮವಾರ ತಡವಾಗಿ ನಡೆದ ಪಂದ್ಯದಲ್ಲಿ ಡಿಮಿಟ್ರೋವ್ ಅವರನ್ನು 6-1, 6-4, 6-3 ಅಂತರದಲ್ಲಿ ಸೋಲಿಸಿದರು. ಬುಧವಾರದಂದು ಅವರ ಮೂರನೇ ನೇರ ಸೆಮಿಫೈನಲ್‌ಗಾಗಿ ಅರ್ಜೆಂಟೀನಾದ ಥಾಮಸ್ ಮಾರ್ಟಿನ್ ಎಚೆವೇರಿಯನ್ನು ಎದುರಿಸಲಿದ್ದಾರೆ.

ಇದನ್ನೂ ಓದಿ: ರೋಹಿತ್​ ಶರ್ಮಾ ಎಡಗೈಗೆ ಗಾಯ: ಇಂಜುರಿ ಭಯದಲ್ಲಿ ಅಭ್ಯಾಸದಿಂದ ದೂರ ಉಳಿದ ಆಟಗಾರರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.