ETV Bharat / sports

ಕ್ರೀಡಾ ಸಚಿವರನ್ನು ಮುಟ್ಟಿದ ಮಂಗಳೂರಿನ ಕಂಬಳ ವೀರನ ಓಟದ ಗತ್ತು - ಕ್ರೀಡಾ ಸಚಿವಾ ಕಿರಣ್​ ರಿಜಿಜು

ಮಂಗಳೂರಿನಲ್ಲಿ ನಡೆದ ಕಂಬಳದಲ್ಲಿ ಓಟ ಸ್ಪರ್ಧೆಯಲ್ಲಿ ಮೂಡಬಿದಿರೆಯ ಶ್ರೀನಿವಾಸ್​ ಗೌಡ 142.50 ಮೀಟರ್ ಓಟವನ್ನು ಕೇವಲ 13.62 ಸೆಕೆಂಡ್‌ಗಳಲ್ಲಿ ಮುಗಿಸುವ ಮೂಲಕ ಕಂಬಳ ಹಾಗೂ ಶ್ರೀನಿವಾಸ ಗೌಡ ಎಂಬ ಹೆಸರು ದೇಶದಲ್ಲೇ ಟ್ರೆಂಡ್​ ಆಗಿದ್ದು, ಸಾಮಾಜಿಕ ಜಾಲಾತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

kambala
ಕಂಬಳ
author img

By

Published : Feb 15, 2020, 8:03 PM IST

ನವದೆಹಲಿ: ಕರ್ನಾಟಕದ ಪ್ರಸಿದ್ಧ ದೇಶಿಯ ಹಾಗೂ ಕರಾವಳಿ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳ ಓಟ ಸ್ಪರ್ಧೆಯಲ್ಲಿ 142.50 ಮೀಟರ್ ಓಟವನ್ನು 13.62 ಸೆಕೆಂಡ್​ಗಳಲ್ಲಿ ಮುಗಿಸಿ ದೇಶದ ಮನೆಮಾತಾಗಿರುವ ಶ್ರೀನಿವಾಸ್​ ಗೌಡ ಅವರ ವಿಚಾರ ಕೇಂದ್ರ ಸಚಿವರಿಗೂ ತಲುಪಿದೆ.

ಟ್ವಿಟರ್​ನಲ್ಲಿ ಶನಿವಾರ ಕಂಬಳ, ಉಸೇನ್​ ಬೋಲ್ಟ್​ ಹೆಸರಿನಲ್ಲಿ ಶ್ರೀನಿವಾಸ್​ ಅವರ ಸಾಧನೆ ಟ್ರೆಂಡ್​ ಆಗಿ ಮಾರ್ಪಟ್ಟಿದೆ. ಅಲ್ಲದೆ ಟ್ವೀಟ್​ ಮಾಡುವವರೆಲ್ಲ ಕೇಂದ್ರ ಕ್ರೀಡಾ ಸಚಿವ ಕಿರಣ್​ ರಿಜಿಜು ಅವರನ್ನು ಟ್ಯಾಗ್​ ಮಾಡಿದ್ದಾರೆ. ಜೊತೆಗೆ ದೇಶದ ಪ್ರತಿಷ್ಠಿತ ಉದ್ಯಮಿ ಆನಂದ್​ ಮಹೀಂದ್ರ ಕೂಡ ಕಂಬಳದ ಓಟಗಾರನಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುವಂತೆ ತಮ್ಮ ಟ್ವಿಟರ್​​ನಲ್ಲಿ ಪೋಸ್ಟ್​ ಮಾಡಿದ್ದಾರೆ.

  • Yes @PMuralidharRao ji. Officials from SAI have contacted him. His rail ticket is done and he will reach SAI centre on monday. I will ensure top national coaches to conduct his trials properly. We are team @narendramodi ji and will do everything to identity sporting talents! https://t.co/RF7KMfIHAD

    — Kiren Rijiju (@KirenRijiju) February 15, 2020 " class="align-text-top noRightClick twitterSection" data=" ">

ಆನಂದ್​ ಮಹೀಂದ್ರ ಅವರ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಕಿರಣ್​ ರಿಜಿಜು, ನಾನು ಕರ್ನಾಟಕದ ಶ್ರೀನಿವಾಸ್​ ಗೌಡ ಅವರಿಗೆ ಕರೆ ಮಾಡಿ ಟ್ರಯಲ್ಸ್​ ನಡೆಸಲು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ (SAI) ಉನ್ನತ ಕೋಚ್‌ಗಳಿಗೆ ತಿಳಿಸಿದ್ದೇನೆ. ಒಲಿಂಪಿಕ್ಸ್‌ನ ಮಾನದಂಡಗಳು ಬಗ್ಗೆ ಹಾಗೂ ಪ್ರಮುಖವಾಗಿ ಅಥ್ಲೆಟಿಕ್ಸ್‌ನಲ್ಲಿ ಮಾನವ ಶಕ್ತಿ ಮತ್ತು ಸಹಿಷ್ಣತೆಯ ವಿಚಾರದಲ್ಲಿ ಸಾಮಾನ್ಯ ಜನರನಲ್ಲಿ ಜ್ಞಾನ ಕಡಿಮೆಯಿದೆ. ಆದರೂ ಭಾರತದ ಯಾವುದೇ ಪ್ರತಿಭೆ ಪರೀಕ್ಷೆಯಾಗದೆ ಉಳಿಯಬಾರದು ಎಂಬುದನ್ನು ನಾನು ಖಚಿತ ಪಡಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.