ಅಲ್ರಯ್ಯಾನ್(ಕತಾರ್): ಏಷ್ಯಾ ಉಪಖಂಡದ ತಂಡಗಳಾದ ಉರುಗ್ವೆ ಮತ್ತು ದಕ್ಷಿಣ ಕೊರಿಯಾ ಮಧ್ಯೆ ನಡೆದ ಪಂದ್ಯ 0-0 ಅಂತರದಲ್ಲಿ ಡ್ರಾಗೊಂಡಿತು. ಇದು ಉಭಯ ತಂಡಗಳಿಗೆ ವಿಶ್ವಕಪ್ನಲ್ಲಿ ಶುಭಾರಂಭವಾಗಿದೆ. ಪಂದ್ಯ ಗೆಲ್ಲದಿದ್ದರೂ ಅಂಕ ಹಂಚಿಕೊಂಡು ತಂಡಗಳು ಗುಂಪಿನಲ್ಲಿ ತಮ್ಮ ಸ್ಥಾನವನ್ನು ಉತ್ತಮಪಡಿಸಿಕೊಂಡವು.
ಇದೇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇದೇ ಗುಂಪಿನ ಅರ್ಜೆಂಟೀನಾ ಮತ್ತು ಜರ್ಮನಿ ತಂಡಗಳು ಸೋಲು ಕಂಡಿದ್ದು, ನಾಕೌಟ್ ಹಂತಕ್ಕೇರಲು ಹೆಣಗಾಡಬೇಕಿದೆ. ಉರುಗ್ವೆ ಮತ್ತು ದಕ್ಷಿಣ ಕೊರಿಯಾ ಡ್ರಾ ಸಾಧಿಸಿ ಅಂಕ ಪಡೆದರು.
-
Uruguay and Korea Republic begin their campaigns with a point 🇺🇾🇰🇷@adidasfootball | #FIFAWorldCup
— FIFA World Cup (@FIFAWorldCup) November 24, 2022 " class="align-text-top noRightClick twitterSection" data="
">Uruguay and Korea Republic begin their campaigns with a point 🇺🇾🇰🇷@adidasfootball | #FIFAWorldCup
— FIFA World Cup (@FIFAWorldCup) November 24, 2022Uruguay and Korea Republic begin their campaigns with a point 🇺🇾🇰🇷@adidasfootball | #FIFAWorldCup
— FIFA World Cup (@FIFAWorldCup) November 24, 2022
ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡದ ಸ್ಟಾರ್ ಫಾರ್ವರ್ಡ್ ಆಟಗಾರ ಸನ್ ಹೆಯುಂಗ್ ಮಿನ್ ಮುಖವಾಡ ಹಾಕಿಕೊಂಡು ಕಣಕ್ಕಿಳಿದರು. ಉರುಗ್ವೆ ವಿರುದ್ಧ ಕೊರಿಯಾ ಗೆಲುವು ಸಾಧಿಸಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಉತ್ತಮವಾಗಿ ಡಿಫೆಂಡ್ ಮಾಡಿದ ಉರುಗ್ವೆ ಪಂದ್ಯ ಕೈಚೆಲ್ಲದಂತೆ ನೋಡಿ ಕೊಂಡಿತು.
ದಕ್ಷಿಣ ಕೊರಿಯಾ ಆಟಗಾರರು ಆರಂಭದಿಂದಲೇ ಚುರುಕಾದ ಆಟ ಪ್ರದರ್ಶಿಸಿದರು. ಗೋಲು ಗಳಿಸಲು ಹಲವು ಪ್ರಯತ್ನ ನಡೆಸಿದರು. ಉರುಗ್ವೆ ತಂಡವೂ ಕೂಡ ಹಲವು ಯತ್ನ ನಡೆಸಿ ಗೋಲು ಗಳಿಸಲಿಲ್ಲ. ಕೊರಿಯಾದ ಡಿಯಾಗೋ ಗಾಡಿನ್ 43 ನೇ ನಿಮಿಷದಲ್ಲಿ ಗೋಲು ಪೆಟ್ಟಿಗೆಯೊಳಗೆ ಚೆಂಡು ಸೇರಿಸುವ ಯತ್ನದಲ್ಲಿ ವಿಫಲವಾದರೆ, ಫೆಡೆರಿಕೊ ವಾಲ್ವರ್ಡೆ 89 ನೇ ನಿಮಿಷದಲ್ಲಿ ಪ್ರಯತ್ನಿಸಿ ಸ್ವಲ್ಪದರಲ್ಲೇ ವಿಫಲರಾದರು. ಇದರಿಂದ ಪಂದ್ಯ 0-0 ಯಲ್ಲಿ ಡ್ರಾಗೊಂಡಿತು. ಉರುಗ್ವೆ ಮುಂದಿನ ಪಂದ್ಯದಲ್ಲಿ ಪೋರ್ಚುಗಲ್ ತಂಡವನ್ನು ಎದುರಿಸಲಿದ್ದು, ದಕ್ಷಿಣ ಕೊರಿಯಾ ಘಾನಾಕ್ಕೆ ಎದುರಾಗಲಿದೆ.
ಓದಿ: ತವರು ತಂಡಕ್ಕೆ ಶತ್ರುವಾದ ಬ್ರೀಲ್ ಎಂಬೊಲೊ.. ಸ್ವಿಟ್ಜರ್ಲ್ಯಾಂಡ್ಗೆ ಕ್ಯಾಮರೂನ್ ವಿರುದ್ಧ 1-0 ಗೆಲುವು