ETV Bharat / sports

FIFA World Cup: ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿರುವ ಪೆನಾಲ್ಟಿ ಶೂಟೌಟ್​ ವಿಡಿಯೋ! - ಅರ್ಜೆಂಟೀನಾ ಫಿಫಾ ವಿಶ್ವಕಪ್ ಗೆದ್ದು

ಭಾನುವಾರ ದೋಹಾದ ಲುಸೇಲ್ ಸ್ಟೇಡಿಯಂನಲ್ಲಿ ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವೆ ನಡೆದ ಫುಟ್ಬಾಲ್ ವಿಶ್ವಕಪ್ 2022 ರ ಸೂಪರ್ ಥ್ರಿಲ್ಲಿಂಗ್ ಫೈನಲ್‌ನ ಪೆನಾಲ್ಟಿ ಶೂಟೌಟ್​ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ.

FIFA World Cup  Penalty shootout video  Argentina beat France  ದೂಳೆಬ್ಬಿಸುತ್ತಿರುವ ಪೆನಾಲ್ಟಿ ಶೂಟೌಟ್​ ವಿಡಿಯೋ  ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವೆ ನಡೆದ ಫುಟ್ಬಾಲ್  ಸೂಪರ್ ಥ್ರಿಲ್ಲಿಂಗ್ ಫೈನಲ್‌ನ ಪೆನಾಲ್ಟಿ ಶೂಟೌಟ್​ ವಿಡಿಯೋ  ಅರ್ಜೆಂಟೀನಾದ ಮೂರೂವರೆ ದಶಕಗಳ ಕಾಯುವಿಕೆಗೆ ಫಲ  ಅರ್ಜೆಂಟೀನಾ ಫಿಫಾ ವಿಶ್ವಕಪ್ ಗೆದ್ದು  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ
ಸೋಶಿಯಲ್​ ಮಿಡಿಯಾದಲ್ಲಿ ದೂಳೆಬ್ಬಿಸುತ್ತಿರುವ ಪೆನಾಲ್ಟಿ ಶೂಟೌಟ್​ ವಿಡಿಯೋ
author img

By

Published : Dec 19, 2022, 12:30 PM IST

Updated : Dec 19, 2022, 1:10 PM IST

ದೋಹ, ಕತಾರ್​: ಅರ್ಜೆಂಟೀನಾದ ಮೂರೂವರೆ ದಶಕಗಳ ಕಾಯುವಿಕೆಗೆ ಫಲ ಸಿಕ್ಕಿದೆ. ಸೂಪರ್ ಸ್ಟಾರ್ ಮೆಸ್ಸಿ ಕನಸು ನನಸಾಗಿದೆ. ಹಲವು ತಿರುವುಗಳೊಂದಿಗೆ ಥ್ರಿಲ್ಲಿಂಗ್​ ಫೈನಲ್‌ನಲ್ಲಿ ಫ್ರಾನ್ಸ್ ತಂಡವನ್ನು ಸೋಲಿಸಿ ಅರ್ಜೆಂಟೀನಾ ಫಿಫಾ ವಿಶ್ವಕಪ್ ಗೆದ್ದುಕೊಂಡಿತು. ಈಗ ಇದರ ಜಿಯೋ ಸಿನಿಮಾ ಕಂಪನಿ ತಮ್ಮ ಟ್ವಿಟ್ಟರ್​ ಹ್ಯಾಂಡಲ್​ ಮತ್ತು ಯೂಟ್ಯೂಬ್​ ಚಾನೆಲ್​ನಲ್ಲಿ ಅರ್ಜೆಂಟೀನಾ ಸಂಭ್ರಮ ವಿಡಿಯೋ ಮತ್ತು ಪೆನಾಲ್ಟಿ ಶೂಟೌಟ್​ ವಿಡಿಯೋ ಹಂಚಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ.

ಅರ್ಜೆಂಟೀನಾದ ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಪೆನಾಲ್ಟಿ ಶೂಟೌಟ್‌ನ ಹೀರೋ ಆಗಿದ್ದಾರೆ. ಎಂಬಪ್ಪೆ ಫ್ರಾನ್ಸ್‌ಗೆ ಮೊದಲ ಪೆನಾಲ್ಟಿಯ ಲಾಭವನ್ನು ಪಡೆದರು, ನಂತರ ಮೆಸ್ಸಿ ಅರ್ಜೆಂಟೀನಾ ಪರ ಗೋಲು ಗಳಿಸಿದರು. ಆ ಬಳಿಕ ಫ್ರಾನ್ಸ್​ನ ಕೋಮನ್ (ಎರಡನೇ ಪೆನಾಲ್ಟಿ) ಮತ್ತು ಚೌಮಾನಿ (ಮೂರನೇ ಪೆನಾಲ್ಟಿ) ಸತತ ವಿಫಲವಾದಾಗ ಅರ್ಜೆಂಟೀನಾ ಅಭಿಮಾನಿಗಳು ಸಂಭ್ರಮಿಸಿದರು.

ಅರ್ಜೆಂಟೀನಾ ಪರ ಎರಡು ಮತ್ತು ಮೂರನೇ ಪ್ರಯತ್ನಗಳಲ್ಲಿ ಡೈಬಾಲಾ ಮತ್ತು ಪರೆಡೆಸ್ ಯಶಸ್ವಿಯಾಗಿ ಗೋಲ್​ ಬಾರಿಸಿದರು. ಆಗ ಅರ್ಜೆಂಟೀನಾ ತಂಡವು 3-1ರಿಂದ ಮುನ್ನಡೆ ಸಾಧಿಸಿತು. ಕೊಲೊ ಮೌನಿ ನಾಲ್ಕನೇ ಪೆನಾಲ್ಟಿಯ ಲಾಭ ಪಡೆಯುವ ಮೂಲಕ ಫ್ರಾನ್ಸ್‌ನ ಭರವಸೆಯನ್ನು ಜೀವಂತವಾಗಿಟ್ಟರು (2-3). ಆದರೆ ನಂತರ ಮೊಂಟಿಯೆಲ್ ತಂಡದ ಪರ ನಾಲ್ಕನೇ ಗೋಲ್​ ಯಶಸ್ವಿಯಿಂದ ಗಳಿಸಿದ ಬಳಿಕ ಫ್ರಾನ್ಸ್​ ಸೋಲುನ್ನೊಪ್ಪಿಕೊಂಡಿತು.

ಎರಡು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್​ನಲ್ಲಿ ಫ್ರಾನ್ಸ್ ತಂಡವನ್ನು 4-2 ಗೋಲುಗಳಿಂದ ಮಣಿಸಿ ಮೂರನೇ ಬಾರಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತು. ಕೊನೆಗೂ ಮೆಸ್ಸಿ ವಿಶ್ವಕಪ್​ಗೆ ಮುತ್ತಿಕ್ಕುವ ಕನಸು ನನಸು ಮಾಡಿಕೊಂಡರು.

ಓದಿ: ಚಾಂಪಿಯನ್​ ಆಟ ಮುಂದುವರೆಸುತ್ತೇನೆ, ನಿವೃತ್ತಿ ಪಡೆಯುವುದಿಲ್ಲ : ಲಿಯೊನೆಲ್‌ ಮೆಸ್ಸಿ

Last Updated : Dec 19, 2022, 1:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.