ETV Bharat / sports

ಮತ್ತೊಂದು ಅಚ್ಚರಿಯ ಫಲಿತ: ಯುರೋಪ್​ನ ಬಲಿಷ್ಠ ತಂಡ ಬೆಲ್ಜಿಯಂಗೆ ಮೊರಾಕ್ಕೊ ಶಾಕ್​

author img

By

Published : Nov 27, 2022, 10:55 PM IST

ಫಿಫಾ ವಿಶ್ವಕಪ್​ ಮತ್ತೊಂದು ಅಚ್ಚರಿಯ ರಿಸಲ್ಟ್​ ಬಂದಿದೆ. ಯುರೋಪ್​ನ ಬಲಿಷ್ಠ ತಂಡವಾದ ಬೆಲ್ಜಿಯಂ ಅಂಡರ್​ಡಾಗ್​ ಮೊರಾಕ್ಕೊ ವಿರುದ್ಧ ಸೋಲುಂಡಿದೆ.

morocco-stun-belgium
ಯುರೋಪ್​ನ ಬಲಿಷ್ಠ ತಂಡ ಬೆಲ್ಜಿಯಂಗೆ ಮೊರಾಕ್ಕೊ ಶಾಕ್​

ದೋಹಾ(ಕತಾರ್): ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ ಮತ್ತೊಂದು ಅಚ್ಚರಿಯ ಫಲಿತಾಂಶ ನೀಡಿದೆ. ಯುರೋಪ್​ ಖಂಡದ ಬಲಿಷ್ಠ ತಂಡ ಬೆಲ್ಜಿಯಂ, ಅಂಡರ್​ಡಾಗ್​ ಮೊರಾಕ್ಕೊ ವಿರುದ್ಧ 2-0 ಗೋಲುಗಳಿಂದ ಪರಾಜಿತವಾಗಿದೆ.

ಇಲ್ಲಿಯ ಅಲ್ ಥುಮಾಮಾ ಕ್ರೀಡಾಂಗಣದಲ್ಲಿ ನಡೆದ ಎಫ್ ಗುಂಪಿನ ಪಂದ್ಯದಲ್ಲಿ ಮೊರಾಕ್ಕೊದ ಅಬ್ದೆಲ್‌ಹಮಿದ್ ಸಬೀರಿ ಮತ್ತು ಜಕಾರಿಯಾ ಅಬೌಖ್ಲಾಲ್ ಕೊನೆ ಕ್ಷಣದಲ್ಲಿ ಬಾರಿಸಿದ ಗೋಲುಗಳಿಂದ ಮೊರಾಕ್ಕೊ ವಿಶ್ವಕಪ್​ನಲ್ಲಿ ಮೊದಲ ಜಯ ದಾಖಲಿಸಿತು.

The Atlas Lions get a huge win over Belgium.@adidasfootball | #FIFAWorldCup

— FIFA World Cup (@FIFAWorldCup) November 27, 2022

ಕ್ರೊಯೇಷಿಯಾ ವಿರುದ್ಧದ ಮೊದಲ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದ ಮೊರಾಕ್ಕೊ ಬಲಿಷ್ಠ ಬೆಲ್ಜಿಯಂ ಎದುರಾದಾಗ ಸೋಲುವ ಭೀತಿಯಲ್ಲಿತ್ತು. ಪಂದ್ಯದ ಆರಂಭದಿಂದಲೂ ಉತ್ತಮ ಆಟವಾಡಿದ ಬೆಲ್ಜಿಯಂ ಆಟಗಾರರು ಚೆಂಡಿನ ಮೇಲೆ ಶೇಕಡಾ 67 ರಷ್ಟು ಹಿಡಿತ ಸಾಧಿಸಿದ್ದರು. 3 ಬಾರಿ ಗೋಲು ಬಾರಿಸಲು ನಡೆಸಿದ ಯತ್ನ ಫಲ ನೀಡಲಿಲ್ಲ.

ಕೊನೆಯಲ್ಲಿ ಮಿಂಚಿದ ಮೊರಾಕ್ಕೊ: ಉಭಯ ತಂಡಗಳು ಪ್ರಥಮಾರ್ಧವನ್ನು ಗೋಲು ಗಳಿಸದೆ ಮುಗಿಸಿದವು. ವಿರಾಮದ ಬಳಿಕ ಚುರುಕಾದ ಆಟಗಾರರು, ಗೋಲಿಗಾಗಿ ಹೋರಾಟ ನಡೆಸಿದರು. ಆದರೆ, ಗೋಲಿಗಳು ಇದಕ್ಕೆ ಆಸ್ಪದ ನೀಡಲಿಲ್ಲ. ದ್ವಿತೀಯಾರ್ಧದದ 73 ನೇ ನಿಮಿಷದಲ್ಲಿ ಮೊರೊಕ್ಕೊದ ಅಬ್ದೆಲ್‌ಹಮಿದ್ ಸಬೀರಿ ಅದ್ಭುತ ಫ್ರೀ ಕಿಕ್‌ನೊಂದಿಗೆ ಚೆಂಡನ್ನು ಗೋಲಿನ ಬಲೆಗೆ ಸೇರಿಸಿದರು. ಇದು ಬೆಲ್ಜಿಯಂಗೆ ದೊಡ್ಡ ಹೊಡೆತ ನೀಡಿತು.

ಬಳಿಕ ಕೆಲವೇ ನಿಮಿಷಗಳಲ್ಲಿ ಮತ್ತೆ ಬೆಲ್ಜಿಯಂ ರಕ್ಷಣಾ ಕೋಟೆಯನ್ನು ಬೇಧಿಸಿ ನುಗ್ಗಿದ ಜಕಾರಿಯಾ ಅಬೌಖ್ಲಾಲ್ ಗೋಲ್​ಕೀಪರ್​ನನ್ನು ಯಾಮಾರಿಸಿ ಗೋಲು ಗಳಿಸಿ ಯುರೋಪಿನ ಬಲಿಷ್ಠ ತಂಡದ ಸೋಲಿಗೆ ಅಂತಿಮ ಮೊಳೆ ಹೊಡೆದರು. ಮೊರಾಕ್ಕೊ 2-0 ಅಂತರದಲ್ಲಿ ಗೆದ್ದು ಮೈದಾನದಲ್ಲಿ ಸಂಭ್ರಮಾಚರಣೆ ಮಾಡಿತು.

ಓದಿ: ಫಿಫಾ ವಿಶ್ವಕಪ್: ಜಪಾನ್​ ವಿರುದ್ಧ ಗೆದ್ದು ಬೀಗಿದ ಕೋಸ್ಟರಿಕಾ

ದೋಹಾ(ಕತಾರ್): ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ ಮತ್ತೊಂದು ಅಚ್ಚರಿಯ ಫಲಿತಾಂಶ ನೀಡಿದೆ. ಯುರೋಪ್​ ಖಂಡದ ಬಲಿಷ್ಠ ತಂಡ ಬೆಲ್ಜಿಯಂ, ಅಂಡರ್​ಡಾಗ್​ ಮೊರಾಕ್ಕೊ ವಿರುದ್ಧ 2-0 ಗೋಲುಗಳಿಂದ ಪರಾಜಿತವಾಗಿದೆ.

ಇಲ್ಲಿಯ ಅಲ್ ಥುಮಾಮಾ ಕ್ರೀಡಾಂಗಣದಲ್ಲಿ ನಡೆದ ಎಫ್ ಗುಂಪಿನ ಪಂದ್ಯದಲ್ಲಿ ಮೊರಾಕ್ಕೊದ ಅಬ್ದೆಲ್‌ಹಮಿದ್ ಸಬೀರಿ ಮತ್ತು ಜಕಾರಿಯಾ ಅಬೌಖ್ಲಾಲ್ ಕೊನೆ ಕ್ಷಣದಲ್ಲಿ ಬಾರಿಸಿದ ಗೋಲುಗಳಿಂದ ಮೊರಾಕ್ಕೊ ವಿಶ್ವಕಪ್​ನಲ್ಲಿ ಮೊದಲ ಜಯ ದಾಖಲಿಸಿತು.

ಕ್ರೊಯೇಷಿಯಾ ವಿರುದ್ಧದ ಮೊದಲ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದ ಮೊರಾಕ್ಕೊ ಬಲಿಷ್ಠ ಬೆಲ್ಜಿಯಂ ಎದುರಾದಾಗ ಸೋಲುವ ಭೀತಿಯಲ್ಲಿತ್ತು. ಪಂದ್ಯದ ಆರಂಭದಿಂದಲೂ ಉತ್ತಮ ಆಟವಾಡಿದ ಬೆಲ್ಜಿಯಂ ಆಟಗಾರರು ಚೆಂಡಿನ ಮೇಲೆ ಶೇಕಡಾ 67 ರಷ್ಟು ಹಿಡಿತ ಸಾಧಿಸಿದ್ದರು. 3 ಬಾರಿ ಗೋಲು ಬಾರಿಸಲು ನಡೆಸಿದ ಯತ್ನ ಫಲ ನೀಡಲಿಲ್ಲ.

ಕೊನೆಯಲ್ಲಿ ಮಿಂಚಿದ ಮೊರಾಕ್ಕೊ: ಉಭಯ ತಂಡಗಳು ಪ್ರಥಮಾರ್ಧವನ್ನು ಗೋಲು ಗಳಿಸದೆ ಮುಗಿಸಿದವು. ವಿರಾಮದ ಬಳಿಕ ಚುರುಕಾದ ಆಟಗಾರರು, ಗೋಲಿಗಾಗಿ ಹೋರಾಟ ನಡೆಸಿದರು. ಆದರೆ, ಗೋಲಿಗಳು ಇದಕ್ಕೆ ಆಸ್ಪದ ನೀಡಲಿಲ್ಲ. ದ್ವಿತೀಯಾರ್ಧದದ 73 ನೇ ನಿಮಿಷದಲ್ಲಿ ಮೊರೊಕ್ಕೊದ ಅಬ್ದೆಲ್‌ಹಮಿದ್ ಸಬೀರಿ ಅದ್ಭುತ ಫ್ರೀ ಕಿಕ್‌ನೊಂದಿಗೆ ಚೆಂಡನ್ನು ಗೋಲಿನ ಬಲೆಗೆ ಸೇರಿಸಿದರು. ಇದು ಬೆಲ್ಜಿಯಂಗೆ ದೊಡ್ಡ ಹೊಡೆತ ನೀಡಿತು.

ಬಳಿಕ ಕೆಲವೇ ನಿಮಿಷಗಳಲ್ಲಿ ಮತ್ತೆ ಬೆಲ್ಜಿಯಂ ರಕ್ಷಣಾ ಕೋಟೆಯನ್ನು ಬೇಧಿಸಿ ನುಗ್ಗಿದ ಜಕಾರಿಯಾ ಅಬೌಖ್ಲಾಲ್ ಗೋಲ್​ಕೀಪರ್​ನನ್ನು ಯಾಮಾರಿಸಿ ಗೋಲು ಗಳಿಸಿ ಯುರೋಪಿನ ಬಲಿಷ್ಠ ತಂಡದ ಸೋಲಿಗೆ ಅಂತಿಮ ಮೊಳೆ ಹೊಡೆದರು. ಮೊರಾಕ್ಕೊ 2-0 ಅಂತರದಲ್ಲಿ ಗೆದ್ದು ಮೈದಾನದಲ್ಲಿ ಸಂಭ್ರಮಾಚರಣೆ ಮಾಡಿತು.

ಓದಿ: ಫಿಫಾ ವಿಶ್ವಕಪ್: ಜಪಾನ್​ ವಿರುದ್ಧ ಗೆದ್ದು ಬೀಗಿದ ಕೋಸ್ಟರಿಕಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.