ETV Bharat / sports

ಫಿಫಾ ವಿಶ್ವಕಪ್‌: ನಾಯಕನ ಮಿಂಚಿನಾಟ, ಆತಿಥೇಯ ಕತಾರ್​ ಸೋಲಿಸಿ ಇತಿಹಾಸ ಬರೆದ ಈಕ್ವೆಡಾರ್ - ಕತಾರ್​ ಸೋಲಿಸಿ ಇತಿಹಾಸ ಬರೆದ ಈಕ್ವೆಡಾರ್

2022ರ ಫಿಫಾ ವಿಶ್ವಕಪ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಕತಾರ್‌ ವಿರುದ್ಧ ಈಕ್ವೆಡಾರ್ 2-0 ಗೋಲುಗಳ ಅಂತರ ಐತಿಹಾಸಿಕ ಗೆಲುವು ಸಾಧಿಸಿದೆ. ಈಕ್ವೆಡಾರ್ 92 ವರ್ಷಗಳ ಟೂರ್ನಿಯ ಇತಿಹಾಸದಲ್ಲಿ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಆತಿಥೇಯ ರಾಷ್ಟ್ರವನ್ನು ಸೋಲಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

FIFA World Cup
ಫೀಫಾ ವಿಶ್ವಕಪ್‌
author img

By

Published : Nov 21, 2022, 10:08 AM IST

Updated : Nov 21, 2022, 12:05 PM IST

ಅಲ್ ಖೋರ್(ಕತಾರ್): ಅಲ್ ಖೋರ್‌ನಲ್ಲಿರುವ ಅಲ್ ಬೈಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 2022ರ ಫಿಫಾ ವಿಶ್ವಕಪ್‌ ಫುಟ್ಬಾಲ್​ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಕತಾರ್‌ ವಿರುದ್ಧ ಈಕ್ವೆಡಾರ್ 2-0 ಗೋಲುಗಳ ಅಂತರ ಗೆಲುವಿನ ನಗೆ ಬೀರಿತು. ಈಕ್ವೆಡಾರ್ ನಾಯಕ ಎನ್ನರ್ ವೇಲೆನ್ಸಿಯಾ ಎರಡು ಗೋಲು ಬಾರಿಸಿ ಗೆಲುವಿನ ರೂವಾರಿ ಎನಿಸಿದರು.

ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಕತಾರ್‌ ವಿರುದ್ಧ ದಕ್ಷಿಣ ಅಮೆರಿಕನ್ನರು ಪ್ರಾಬಲ್ಯ ಸಾಧಿಸಿದ್ದು, ಪೆನಾಲ್ಟಿ ಕಿಕ್ ಮೂಲಕ ಈ ವಿಶ್ವಕಪ್‌ನ ಆರಂಭಿಕ ಗೋಲು ಮೂಡಿಬಂದಿರುವುದು ವಿಶೇಷವಾಗಿತ್ತು. ನಾಯಕ ಎನ್ನರ್ ವೆಲೆನ್ಸಿಯಾ ಟೂರ್ನಿಗೆ ಅದ್ಧೂರಿ ಆರಂಭ ಸಿಕ್ಕ ಬೆನ್ನಲ್ಲೇ ಪಂದ್ಯ ಆರಂಭವಾದ ಮೂರು ನಿಮಿಷಗಳಲ್ಲೇ ಚೆಂಡನ್ನು ಗೋಲಿನತ್ತ ಬಾರಿಸಿ ಗಳಿಸಿ ಕ್ರೀಡಾಂಗಣಕ್ಕೆ ಕಿಚ್ಚು ಹಚ್ಚಿದ್ದರು.

ಸ್ಟ್ರೈಕರ್ ಫೆಲಿಕ್ಸ್ ಟೊರೆಸ್ ಅವರ ಕಿಕ್‌ನಿಂದ ಬಂದ ಚೆಂಡನ್ನು ಮತ್ತು ನೆಟ್​ನತ್ತ ತಳ್ಳುವ ಮೂಲಕ ಈಕ್ವೆಡಾರ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣಗಿದ್ದರು. ಆದರೆ ರೆಫರಿ ಗೋಲು ಆಫ್ ಸೈಡ್ ಎಂದು ತೀರ್ಪು ನೀಡಿದ್ದರಿಂದ ಸಂಭ್ರಮಾಚರಣೆ ಅಲ್ಪಕಾಲಿಕವಾಗಿತ್ತು. ಬಳಿಕ ವಿಎಆರ್​ (VAR) ಪರಿಶೀಲನೆಯಿಂದ ಗೋಲು ಆಫ್-ಸೈಡ್ ಎಂದು ದೃಢಪಟ್ಟಿತ್ತು.

ಒಂದೆಡೆ ಕತಾರ್ ಆಟಗಾರರು ಚೆಂಡನ್ನು ಬೆನ್ನಟ್ಟುತ್ತಿದ್ದರೆ, ಈಕ್ವೆಡಾರ್ ಕೂಡ ಆಕ್ರಮಣಕಾರಿ ಆಟ ಮುಂದುವರೆಸಿತು. ಬಳಿಕ ವೇಲೆನ್ಸಿಯಾ ಪಂದ್ಯದ 16ನೇ ನಿಮಿಷದಲ್ಲಿ ಅಮೋಘ ಆಟದಿಂದ ಗೋಲಿನತ್ತ ಮುಖ ಮಾಡಿದ್ದರಾದರೂ ಕತಾರ್‌ನ ಗೋಲ್‌ಕೀಪರ್ ಅಲ್ ಶೀಬ್ ಟ್ಯಾಕಲ್ ಮೂಲಕ ತಡೆದರು.

ಇದನ್ನೂ ಓದಿ: ಫಿಫಾ ವಿಶ್ವಕಪ್ ಹಬ್ಬ: ಕತಾರ್‌ನಲ್ಲಿ ಪ್ರತಿಧ್ವನಿಸಲಿದೆ ಭಾರತೀಯ ಪ್ರತಿಭೆಯ ಮಧುರ ಧ್ವನಿ

ಇದರಿಂದ ಕತಾರ್‌ನ ಗೋಲ್‌ಕೀಪರ್ ಶೀಬ್‌ಗೆ ಹಳದಿ ಕಾರ್ಡ್ ನೀಡಲಾಯಿತಲ್ಲದೆ, ಟ್ಯಾಕಲ್‌ಗಾಗಿ ಈಕ್ವೆಡಾರ್‌ಗೆ ಪೆನಾಲ್ಟಿ ಲಭಿಸಿತು. ಆಗ ಪೆನಾಲ್ಟಿ ಕಿಕ್‌ ಬಾಚಿಕೊಂಡ ಈಕ್ವೆಡಾರ್ ನಾಯಕ, ಚೆಂಡನ್ನು ಬಲ ಕೆಳಗಿನ ಮೂಲೆಯತ್ತ ಬಾರಿಸಿ, ವೃತ್ತಿಜೀವನದ ನಾಲ್ಕನೇ ವಿಶ್ವಕಪ್ ಗೋಲು ಗಳಿಸಿ ಸಂಭ್ರಮಿಸಿದರು. ಅಲ್ಲದೆ, ಆತಿಥೇಯ ಕತಾರ್‌ ವಿರುದ್ಧ ಈಕ್ವೆಡಾರ್​​ಗೆ 1-0 ಮುನ್ನಡೆ ಒದಗಿಸಿದರು.

ಇದಾದ ಬಳಿಕ ಕತಾರ್ ಆಟಗಾರರು ದಕ್ಷಿಣ-ಅಮೆರಿಕನ್ ತಂಡದ ವಿರುದ್ಧ ಪರದಾಡಿದರು. ತಂಡವು ನಿರಂತರವಾಗಿ ಪಂದ್ಯದ ಮೇಲಿನ ಹಿಡಿತ ಕಳೆದುಕೊಳ್ಳುತ್ತ ಸಾಗಿತು. ಚೆಂಡನ್ನು ಸರಾಗವಾಗಿ ರವಾನಿಸಲು ವಿಫಲರಾದರು. ಈ ವೇಳೆ ಈಕ್ವೆಡಾರ್ ನಾಯಕನನ್ನು ತಡೆದಿದ್ದಕ್ಕಾಗಿ ಕತಾರ್​ಗೆ ಮತ್ತೊಂದು ಹಳದಿ ಕಾರ್ಡ್ ಎಚ್ಚರಿಕೆ ಎದುರಿಸಬೇಕಾಯಿತು. ಕತಾರ್​ನ ಅಲ್ಮೋಜ್ ಅಲಿಗೆ ಹಳದಿ ಕಾರ್ಡ್ ಎಚ್ಚರಿಕೆ ನೀಡಲಾಯಿತು.

ಆತಿಥೇಯರ ಮೇಲೆ ಪ್ರಾಬಲ್ಯ ಮುಂದುವರೆಸಿದ ಈಕ್ವೆಡಾರ್​ಗೆ 31ನೇ ನಿಮಿಷದಲ್ಲಿ ವೇಲೆನ್ಸಿಯಾ ಮತ್ತೊಮ್ಮೆ ಗೋಲು ಬಾರಿಸಿ ಮೇಲುಗೈ ನೀಡಿದರು. ಬಲ ಹಿಂಭಾಗದಲ್ಲಿ ಏಂಜೆಲೊ ಪ್ರೆಸಿಯಾಡೊ ಅದ್ಭುತವಾಗಿ ಕಳಿಸಿದ ಚೆಂಡನ್ನು ನಾಯಕ ವೇಲೆನ್ಸಿಯಾ ಹೆಡ್ ಮಾಡುವ (ತಲೆಯಿಂದ ಹೊಡೆದ) ಮೂಲಕ ಎರಡನೇ ಗೋಲು ಗಳಿಸಿ ಸಂಭ್ರಮಿಸಿದರು.

ವೇಲೆನ್ಸಿಯಾ ಅಬ್ಬರದಿಂದ ಕಂಗಾಲಾದ ಕತಾರ್‌ ಆಟಗಾರರು ಟ್ಯಾಕಲ್‌ಗಳ ಮೊರೆ ಹೋದಂತಿತ್ತು. ಕತಾರ್‌ನ ಕರೀಮ್ ಬೌಡಿಯಾಫ್ ವೇಲೆನ್ಸಿಯಾರನ್ನು ಟ್ಯಾಕಲ್​ ಮಾಡಿದ್ದಕ್ಕೆ ಹಳದಿ ಕಾರ್ಡ್ ಎಚ್ಚರಿಕೆ ಎದುರಿಸಿದರು. ಟ್ಯಾಕಲ್​ ಆಘಾತಗಳನ್ನು ಎದುರಿಸುತ್ತಲೇ ಮುನ್ನಡೆದ ನಾಯಕ ವೇಲೆನ್ಸಿಯಾ 43ನೇ ನಿಮಿಷದಲ್ಲಿ ಮೊಣಕಾಲಿಗೆ ಗಾಯವಾಗಿ ಮೈದಾನದಿಂದ ಹೊರನಡೆಯಬೇಕಾಯಿತು.

ಮೊದಲಾರ್ಧದ ಕೊನೆಯ ನಿಮಿಷಗಳಲ್ಲಿ ಕತಾರ್ ಗೋಲು ಗಳಿಸುವ ಉತ್ತಮ ಅವಕಾಶ ಹೊಂದಿದ್ದರೂ ಕೂಡ ಸಾಧ್ಯವಾಗಲಿಲ್ಲ. ಕತಾರ್ 0-2 ಹಿನ್ನಡೆಯೊಂದಿಗೆ ಮೊದಲಾರ್ಧ ಮುಗಿಸಿತು.

ಇದನ್ನೂ ಓದಿ: ಫಿಫಾ ಫುಟ್ಬಾಲ್​ ವಿಶ್ವಕಪ್​ ಅದ್ಧೂರಿ ಉದ್ಘಾಟನೆ.. ಕೊರಿಯನ್​ ಗಾಯನಕ್ಕೆ ತಲೆ ಬಾಗಿದ ಪ್ರೇಕ್ಷಕರು

ದ್ವಿತೀಯಾರ್ಧದಲ್ಲಿ ಕತಾರ್ ರೋಚಕ ಆಟ ಪ್ರದರ್ಶಿಸಿ ಉತ್ತಮ ಪಾಸ್‌ನೊಂದಿಗೆ ಮಿಂಚಿದರೂ ಸಹ ಗೋಲುಗಳಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು. ಆತಿಥೇಯರು ಉತ್ತಮ ಆಟ ತೋರಿದರೂ ಸಹ ಈಕ್ವೆಡಾರ್​ಗೆ ಸರಿಸಾಟಿ ಎನಿಸಲೇ ಇಲ್ಲ.

86ನೇ ನಿಮಿಷದಲ್ಲಿ ಕತಾರ್​ ಗೋಲು ಗಳಿಸುವ ಸಮೀಪ ತಲುಪಿ ವಿಫಲವಾಯಿತು. ಮೊಹಮ್ಮದ್ ಮುಂಟಾರಿ ಅತ್ಯುತ್ತಮ ಓಟದ ಮೂಲಕ ಚೆಂಡನ್ನು ಗೋಲಿನ ಸಮೀಪ ತಂದರೂ ಕೂಡ ಕೆಲ ಇಂಚುಗಳ ಅಂತರದಲ್ಲಿ ಗುರಿ ತಪ್ಪಿತು. ಪ್ರಬಲ ಪೈಪೋಟಿಯಿಂದ ಕೂಡಿದ್ದ ದ್ವಿತೀಯಾರ್ಧದಲ್ಲಿ ಎರಡೂ ತಂಡಗಳು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಈಕ್ವೆಡಾರ್ 2-0 ಸ್ಕೋರ್‌ಲೈನ್‌ನೊಂದಿಗೆ ಪಂದ್ಯ ಜಯಿಸಿತು.

ಈ ಗೆಲುವಿನೊಂದಿಗೆ ಈಕ್ವೆಡಾರ್ 92 ವರ್ಷಗಳ ಟೂರ್ನಿಯ ಇತಿಹಾಸದಲ್ಲಿ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಆತಿಥೇಯ ರಾಷ್ಟ್ರವನ್ನು ಸೋಲಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್​ ಗೆಲುವಿನ ಓಟಕ್ಕೆ ಪುಣೆ ಬ್ರೇಕ್

Last Updated : Nov 21, 2022, 12:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.