ನವದೆಹಲಿ: ಭಾರತದ ಅಂಡರ್-17 ಮಹಿಳಾ ಫುಟ್ಬಾಲ್ ತಂಡ ಎರಡು ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಜೂನ್ 20ರಿಂದ ಜುಲೈ 8ರವರೆಗೆ ಇಟಲಿ ಮತ್ತು ನಾರ್ವೆ ಪ್ರವಾಸ ಕೈಗೊಳ್ಳಲಿದೆ. ಮುಂದಿನ ಅಕ್ಟೋಬರ್ನಲ್ಲಿ ಭಾರತದಲ್ಲಿ ಫಿಫಾ U-17 ಮಹಿಳಾ ವಿಶ್ವಕಪ್ ನಡೆಯಲಿದ್ದು, ಇದರ ಪೂರ್ವ ಸಿದ್ಧತೆಯ ಭಾಗವಾಗಿ ಎರಡು ರಾಷ್ಟ್ರಗಳಿಗೆ ತೆರಳುತ್ತಿದೆ.
ಇಟಲಿಯಲ್ಲಿ ಜು.22ರಿಂದ 26ರವರೆಗೆ ನಡೆಯುವ 6ನೇ ಟೋರ್ನಿಯೊ ಮಹಿಳಾ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾರತ ತಂಡ ಭಾಗವಹಿಸಲಿದೆ. ಟೂರ್ನಿಯ ಮೊದಲ ದಿನವೇ ಇಟಲಿ ತಂಡವನ್ನು ಎದುರಿಸಲಿದೆ.
ನಾರ್ವೆಯಲ್ಲಿ ಜು.1ರಿಂದ 7ರವರೆಗೆ ಜರುಗುವ ಓಪನ್ ನಾರ್ಡಿಕ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು, ಇದೇ ಮೊದಲ ಬಾರಿಗೆ ಭಾರತ ತಂಡ ಈ ಟೂರ್ನಿಯಲ್ಲಿ ಭಾಗವಹಿಸುತ್ತಿದೆ. ಇಲ್ಲಿ ಕೂಟದ ಮೊದಲ ದಿನವೇ ನೆದರ್ಲ್ಯಾಂಡ್ ವಿರುದ್ಧ ಭಾರತ ಕಣಕ್ಕಿಳಿಯಲಿದೆ.
ಮುಖ್ಯ ಕೋಚ್ ಥಾಮಸ್ ಡೆನ್ನರ್ಬಿ ನೇತೃತ್ವದಲ್ಲಿ ಎರಡೂ ಟೂರ್ನಿಗಳಿಗೆ 23 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಆಟಗಾರರ ಮಾಹಿತಿ ಇಲ್ಲಿದೆ.
ಗೋಲ್‌ಕೀಪರ್‌ಗಳು: ಮೊನಾಲಿಸಾ ದೇವಿ, ಹೆಂಪ್ರಿಯಾ ಸೆರಮ್, ಕೇಶಾಮ್ ಮೆಲೋಡಿ ಚಾನು.
ಡಿಫೆಂಡರ್ಸ್: ಅಸ್ತಮ್ ಓರಾನ್, ಕಾಜಲ್, ಭೂಮಿಕಾ ಮಾನೆ, ನಕೇತಾ, ಪೂರ್ಣಿಮಾ ಕುಮಾರಿ, ಶುಭಾಂಗಿ ಸಿಂಗ್, ಸುಧಾ ಅಂಕಿತಾ ಟಿರ್ಕಿ, ವರ್ಷಿಕಾ
ಮಿಡ್‌ಫೀಲ್ಡರ್‌ಗಳು: ಬಬಿನಾ ದೇವಿ, ಗ್ಲಾಡಿಸ್ ಝೋನುನ್‌ಸಂಗಿ, ಮಿಶಾ ಭಂಡಾರಿ, ಪಿಂಕು ದೇವಿ, ನಿತು ಲಿಂಡಾ, ಶೈಲ್ಜಾ
ಫಾರ್ವರ್ಡ್‌ಗಳು: ಅನಿತಾ ಕುಮಾರಿ, ಕಾಜೋಲ್ ಡಿಝೌಜಾ, ನೇಹಾ, ರೆಜಿಯಾ ದೇವಿ ಲೈಶ್ರಾಮ್, ಶೆಲಿಯಾ ದೇವಿ, ಲಿಂಡಾ ಕೋಮ್ ಸೆರ್ಟೊ.