ಹರಿಯಾಣ/ ದೆಹಲಿ: ಬಿಜೆಪಿಯ ಇಬ್ಬರ ಮೇಲೆ ಕ್ರೀಡಾ ವಿಚಾರವಾಗಿ ಲೈಂಗಿಕ ಕಿರುಕುಳದ ಆರೋಪ ಇದ್ದು, ಇಂದು ಇಬ್ಬರು ಕೋರ್ಟ್ಗೆ ಹಾಜರಾಗಿದ್ದಾರೆ. ಹರಿಯಾಣದ ಚಂಡೀಗಢ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಸಂದೀಪ್ ಸಿಂಗ್ ಹಾಜರಾದರೆ, ದೆಹಲಿಯ ರೋಸ್ ಅವೆನ್ಯೂ ಕೋರ್ಟ್ಗೆ ಭಾರತೀಯ ಕುಸ್ತಿ ಸಂಸ್ಥೆಯ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಾಜರಾಗಿದ್ದರು.
ಸಂದೀಪ್ ಸಿಂಗ್ ಪ್ರಕರಣ: ಹರಿಯಾಣ ಸರ್ಕಾರದ ಸಚಿವ ಸಂದೀಪ್ ಸಿಂಗ್ ವಿರುದ್ಧದ ಲೈಂಗಿಕ ಶೋಷಣೆ ಆರೋಪದ ಪ್ರಕರಣದಲ್ಲಿ ಶನಿವಾರ ಚಂಡೀಗಢ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಚಾರ್ಜ್ ಶೀಟ್ ಸಲ್ಲಿಕೆಯಾದ ನಂತರ ನ್ಯಾಯಾಲಯದಲ್ಲಿ ಪ್ರಕರಣದ ಮೊದಲ ವಿಚಾರಣೆ ಇದಾಗಿದೆ. ಮಾಜಿ ಕ್ರೀಡಾ ಸಚಿವರು ಶನಿವಾರ ನ್ಯಾಯಾಲಯಕ್ಕೆ ಹಾಜರಾಗಿ 1 ಲಕ್ಷ ರೂ.ಬಾಂಡ್ ಪಾವತಿಸಿದ್ದಾರೆ ಎಂದು ಸಂದೀಪ್ ಸಿಂಗ್ ಪರ ವಕೀಲ ರವೀಂದ್ರ ಪಂಡಿತ್ ಹೇಳಿದ್ದಾರೆ.
ಇದಕ್ಕೂ ಮುನ್ನ ಶುಕ್ರವಾರ ನ್ಯಾಯಾಲಯ ಸಂದೀಪ್ ಸಿಂಗ್ ಅವರ ನಿರೀಕ್ಷಣಾ ಜಾಮೀನಿನ ಅರ್ಜಿಯನ್ನು ವಿಚಾರಣೆ ಮಾಡಿ ಷರತ್ತುಬದ್ಧ ಜಾಮೀನು ನೀಡಿತ್ತು. ಷರತ್ತಿನಲ್ಲಿ, ಸಂದೀಪ್ ಸಿಂಗ್ 10 ದಿನಗಳೊಳಗೆ ನ್ಯಾಯಾಲಯದ ಮುಂದೆ ಶರಣಾಗಬೇಕು ಮತ್ತು 1 ಲಕ್ಷ ರೂಪಾಯಿ ಬಾಂಡ್ ಪಾವತಿಸಬೇಕು ಎಂದು ಚಂಡೀಗಢ ನ್ಯಾಯಾಲಯ ತಿಳಿಸಿತ್ತು.
-
#WATCH | Former WFI president and BJP MP Brij Bhushan Sharan Singh arrived at Rouse Avenue Court in Delhi. pic.twitter.com/LxgaMZrTU2
— ANI (@ANI) September 16, 2023 " class="align-text-top noRightClick twitterSection" data="
">#WATCH | Former WFI president and BJP MP Brij Bhushan Sharan Singh arrived at Rouse Avenue Court in Delhi. pic.twitter.com/LxgaMZrTU2
— ANI (@ANI) September 16, 2023#WATCH | Former WFI president and BJP MP Brij Bhushan Sharan Singh arrived at Rouse Avenue Court in Delhi. pic.twitter.com/LxgaMZrTU2
— ANI (@ANI) September 16, 2023
ದೂರುದಾರರ ಪರ ವಕೀಲರಾದ ದೀಪಾಂಶು ಬನ್ಸಾಲ್ ಅವರು, ದೂರುದಾರರು ವ್ಯಕ್ತಪಡಿಸಿರುವ ಆತಂಕಗಳಿಗೆ ಸಂಬಂಧಿಸಿದಂತೆ ನೀಡಿರುವ ಆದೇಶದಲ್ಲಿ ಷರತ್ತುಗಳನ್ನು ವಿಧಿಸುವುದನ್ನು ಪರಿಗಣಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ. ಪದೇ ಪದೇ ಕಿರುಕುಳ ನೀಡಲಾಗುತ್ತಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಸಂದೀಪ್ ಸಿಂಗ್ ವಿರುದ್ಧ ಅತ್ಯಾಚಾರ ಯತ್ನದ ಸೆಕ್ಷನ್ ಸೇರಿಸುವಂತೆಯೂ ಸಂತ್ರಸ್ತೆ ಒತ್ತಾಯಿಸಿದ್ದಾರೆ. ಇದೀಗ ಈ ಪ್ರಕರಣದ ವಿಚಾರಣೆ ಅಕ್ಟೋಬರ್ 10 ರಂದು ಚಂಡೀಗಢದ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯಲಿದೆ.
ರೋಸ್ ಅವೆನ್ಯೂ ಕೋರ್ಟ್ಗೆ ಹಾಜರಾದ ಬ್ರಿಜ್ ಭೂಷಣ್ ಶರಣ್ ಸಿಂಗ್ : ಮಹಿಳಾ ಕುಸ್ತಿಪಟು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿಯಾಗಿರುವ ಭಾರತೀಯ ಕುಸ್ತಿ ಸಂಸ್ಥೆಯ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಅಮಾನತುಗೊಂಡಿರುವ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ವಿರುದ್ಧ ಶನಿವಾರ ರೋಸ್ ಅವೆನ್ಯೂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು. ಬ್ರಿಜ್ ಭೂಷಣ್ ಶರಣ್ ಸಿಂಗ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈಗ ಮುಂದಿನ ವಿಚಾರಣೆ ಸೆಪ್ಟೆಂಬರ್ 23 ರಂದು ನಡೆಯಲಿದೆ. ಅವರೊಂದಿಗೆ ದೆಹಲಿ ಕುಸ್ತಿ ಸಂಸ್ಥೆಯ ಅಧ್ಯಕ್ಷ ಜೈಪ್ರಕಾಶ್ ಕೂಡ ಉಪಸ್ಥಿತರಿದ್ದರು.
ಇದನ್ನೂ ಓದಿ: ಭಾರತ ತಂಡಕ್ಕೆ ಕಾಡಿದ ಗಾಯದ ಸಮಸ್ಯೆ.. ವಿಶ್ವಕಪ್ ತಂಡದ ಆಟಗಾರ ಏಷ್ಯಾಕಪ್ನಿಂದ ಹೊರಕ್ಕೆ?