ಸೋಫಿಯಾ(ಬಲ್ಗೇರಿಯಾ): ಭಾರತದ ಸತ್ಯವರ್ತ್ ಕಡಿಯನ್ ಮತ್ತು ಸುಮಿತ್ ಮಲಿಕ್ ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯುತ್ತಿರುವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸುವುದರೊಂದಿಗೆ ಟೋಕಿಯೋ ಒಲಿಂಪಿಕ್ಸ್ ಆಸೆ ಜೀವಂತವಾಗಿರಿಸಿ ಕೊಂಡಿದ್ದಾರೆ.
ಗುರುವಾರ ನಡೆದ 97 ಕೆಜಿ ವಿಭಾಗದಲ್ಲಿ ಸತ್ಯವರ್ತ್ ಕಡಿಯನ್ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೋರ್ಟೊ ರಿಕೊದ ಇವಾನ್ ಅಮಡೋರ್ ರಾಮೋಸ್ ವಿರುದ್ಧ 5-2ರಲ್ಲಿ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
125 ಕೆಜಿ ವಿಭಾಗದಲ್ಲಿ ಸುಮಿತ್ ಕಿರ್ಗಿಜಿಸ್ತಾನದ ಐಯಾಲ್ ಲಾಜರೆವ್ ವಿರುದ್ಧ 3-2ರಲ್ಲಿ ಮಣಿಸಿ 8ರ ಘಟ್ಟಕ್ಕೆ ಎಂಟ್ರಿ ಪಡೆದಿದ್ದಾರೆ.
ಆದರೆ 74 ಕೆಜಿ ವಿಭಾಗದಲ್ಲಿ ಅಮಿತ್ ಧನ್ಕರ್ 6-9 ರ ಅಂತರದಲ್ಲಿ ಮೊಲ್ಡೊವಾದ ಮಿಹೈಲ್ ಸಾವಾ ವಿರುದ್ಧ ಸೋಲು ಕಂಡರು. ಈ ಮೂಲಕ ಟೋಕಿಯೋ ಒಲಿಂಪಿಕ್ಸ್ನಲ್ಲಿ ಈ ವಿಭಾಗದಿಂದ ಭಾರತದ ಯಾವೊಬ್ಬ ಕ್ರೀಡಾಪಟು ಕೂಡ ಸ್ಪರ್ಧಿಸುವ ಅವಕಾಶವನ್ನು ಕಳೆದು ಕೊಂಡಂತಾಗಿದೆ.