ETV Bharat / sports

ಡೆನ್ಮಾರ್ಕ್​ ಓಪನ್​: ಮೊದಲ ಸುತ್ತಿನಲ್ಲೇ ಹೊರಬಿದ್ದ ಕಿಡಂಬಿ ಶ್ರೀಕಾಂತ್​, ಎರಡನೇ ಸುತ್ತಿಗೆ ಸಮೀರ್​ ವರ್ಮಾ - ಪಿವಿಸಿಂಧುಗೆ ಜಯ

ಕಿಡಂಬಿ ಶ್ರೀಕಾಂತ್​ ಡೆನ್ಮಾರ್ಕ್​ನ ಆ್ಯಂಡರ್ಸ್​ ಆಂಟೋನ್ಸೆನ್​ ವಿರುದ್ಧ 14-21,18-21 ರಿಂದ ಸೋಲನುಭವಿಸುವ ಮೂಲಕ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.

Denmark Open
author img

By

Published : Oct 17, 2019, 5:18 PM IST

ಆಡೆನ್ಸ್‌(ಡೆನ್ಮಾರ್ಕ್‌): ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್​ ಆಟಗಾರ ಡೆನ್ಮಾರ್ಕ್​​ ಓಪನ್​ನಲ್ಲಿ ಅಚ್ಚರಿಯ ಸೋಲು ಕಂಡು ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.

ಕಿಡಂಬಿ ಶ್ರೀಕಾಂತ್​ ಡೆನ್ಮಾರ್ಕ್​ನ ಆ್ಯಂಡರ್ಸ್​ ಆಂಟೋನ್ಸೆನ್​ ವಿರುದ್ಧ 14-21,18-21 ರಿಂದ ಸೋಲನುಭವಿಸಿದರು. 42 ನಿಮಿಷ ನಡೆದ ಪಂದ್ಯದಲ್ಲಿ ಶ್ರೀಕಾಂಕ್​ ಎದುರಾಳಿ ವಿರುದ್ಧ ಸಂಪೂರ್ಣ ವೈಫಲ್ಯ ಅನುಭವಿಸಿ ಎರಡೂ ಸೆಟ್​ ಕಳೆದುಕೊಂಡರು.

  • Denmark Open (BWF World Tour Super 750) update:
    Kidambi Srikanth ❌
    Sai Praneeth ✔️
    Kashyap Parupalli ❌
    Sameer Verma ✔️
    Sourabh Verma ❌
    P.V. Sindhu ✔️
    Saina Nehwal ❌ #DenmarkOpenSuper750 https://t.co/u8PBzhybS7

    — India_AllSports (@India_AllSports) October 16, 2019 " class="align-text-top noRightClick twitterSection" data=" ">

ಮಹಿಳೆಯರ ಪಂದ್ಯದಲ್ಲಿ ಸೈನಾ ನೆಹ್ವಾಲ್​ ಮೊದಲ ಸುತ್ತಿನಲ್ಲೇ 15-21, 21-23 ರಲ್ಲಿ ಜಪಾನ್​ನ ಸಯಾಕ ತಕಾಹಶಿ ವಿರುದ್ಧ ವಿರುದ್ಧ ಸೋಲನುಭವಿಸಿದರು.

ಇನ್ನು ಪುರುಷರ ಸಿಂಗಲ್ಸ್​ನಲ್ಲಿ ಸಮೀರ್​ ವರ್ಮಾ 21-11 21-11ರಲ್ಲಿ ಜಪಾನ್​ನ ಕಂಟಾ ಸುನೆಯಮ ವಿರುದ್ಧ ಗೆಲುವು ಸಾಧಿಸಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಒಟ್ಟಾರೆ 7 ಸಿಂಗಲ್ಸ್​ ಆಟಗಾರರಲ್ಲಿ ಸಿಂಧು, ಸಾಯಿ ಪ್ರಣೀತ್​ ಹಾಗೂ ಸಮೀರ್​ ವರ್ಮಾ ಎರಡನೇ ಸುತ್ತು ಪ್ರವೇಶಿಸಿದರೆ, ಶ್ರೀಕಾಂತ್​, ಸೈನಾ ನೆಹ್ವಾಲ್​ ಸೌರಭ್​ ವರ್ಮಾ ಹಾಗೂ ಕಶ್ಯಪ್​ ನಿರಾಶೆಯನುಭವಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.