ಮುಂಬೈ: ಇಲ್ಲಿನ ಎನ್ಎಸ್ಸಿಐ ಮೈದಾನದಲ್ಲಿ ನಡೆದ ಪ್ರೊ. ಕಬಡ್ಡಿಯ ಹೈವೋಲ್ಟೇಜ್ ಕದನದಲ್ಲಿ ದಬಾಂಗ್ ಡೆಲ್ಲಿ ಕೆ ಸಿ ತಂಡವು ಹರ್ಯಾಣ ಸ್ಟೀಲರ್ಸ್ ವಿರುದ್ಧ 41-21 ಅಂಕಗಳ ಅಂತರದಿಂದ ಗೆದ್ದಿದೆ.
ನವೀನ್ ಕುಮಾರ್ ಹಾಗೂ ಚಂದ್ರನ್ ರಂಜಿತ್ ಅವರ ಅದ್ಭುತ ರೈಡಿಂಗ್ ಹಾಗೂ ಸಯೀದ್ ಘಫಾರಿ ಅವರ ಟ್ಯಾಕಲ್ ನೆರವಿನಿಂದ ದಬಾಂಗ್ ಡೆಲ್ಲಿ ಹೆಚ್ಚು ಪಾಯಿಂಟ್ ಗಳಿಸುವಲ್ಲಿ ಸಫಲವಾಗಿದೆ.
ಇನ್ನು ಈ ಸೀಸನ್ನಲ್ಲಿ ಸತತ ಮೂರನೇ ಗೆಲುವು ದಾಖಲಿಸಿದ ದಬಾಂಗ್ ಡೆಲ್ಲಿ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.