ETV Bharat / sports

ಭಾರತಕ್ಕೆ ಮತ್ತೊಂದು ಸ್ವರ್ಣ ಪದಕ; ಬ್ಯಾಡ್ಮಿಂಟನ್​​ನಲ್ಲಿ ಚಿನ್ನ ಗೆದ್ದ ಲಕ್ಷ್ಯಸೇನ್​

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಯುವ ಶಟ್ಲರ್​​ ಲಕ್ಷ್ಯ ಸೇನ್ ಚೊಚ್ಚಲ ಚಿನ್ನದ ಪದಕ ಗೆದ್ದರು. ಈ ಮೂಲಕ ಭಾರತ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಈವರೆಗೆ 20 ಚಿನ್ನದ ಪದಕ ಸಂಪಾದಿಸಿದೆ.

Lakshya Sen win Men Singles gold
Lakshya Sen win Men Singles gold
author img

By

Published : Aug 8, 2022, 4:49 PM IST

Updated : Aug 8, 2022, 5:34 PM IST

ಬರ್ಮಿಂಗ್​ಹ್ಯಾಮ್​​(ಇಂಗ್ಲೆಂಡ್): ಕಾಮನ್​ವೆಲ್ತ್ ಕ್ರೀಡಾಕೂಟದ ಕೊನೆಯ ದಿನವಾದ ಇಂದು ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಬಂದಿದೆ. ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್​​ನಲ್ಲಿ ಮಲೇಷ್ಯಾ ಆಟಗಾರ ಎಂಜಿ ತ್ಸೆ ಯಂಗ್‌ (Ng Tze Yong) ವಿರುದ್ಧ ಲಕ್ಷ್ಯಸೇನ್​ ಗೆಲುವಿನ ನಗೆ ಬೀರಿದರು. ಮೊದಲ ಸೆಟ್​ನಲ್ಲಿ ಸೋಲುಂಡ ಲಕ್ಷ್ಯ, ತದನಂತರ ಗುರಿ ತಪ್ಪಲಿಲ್ಲ.

ತಾವು ಭಾಗಿಯಾಗಿದ್ದ ಮೊದಲ ಕಾಮನ್​​​ವೆಲ್ತ್ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆದ್ದಿರುವ ಲಕ್ಷ್ಯಸೇನ್,​ ತಮ್ಮ ಗುರು ಪ್ರಕಾಶ್ ಪಡುಕೋಣೆ ಅವರ ದಾಖಲೆಯ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಪ್ರಕಾಶ್ ಪಡುಕೋಣೆ 1978ರಲ್ಲಿ ಕಾಮನ್​ವೆಲ್ತ್​ನ ಚೊಚ್ಚಲ ಗೇಮ್​​ನಲ್ಲಿ ಚಿನ್ನ ಗೆದ್ದಿದ್ದರು.

ಕೋವಿಡ್​ನಿಂದಾಗಿ ಲಕ್ಷ್ಯಸೇನ್​ 2021ರ ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಅರ್ಹತೆ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದರು. ವಿಶ್ವ ಚಾಂಪಿಯನ್​ಶಿಪ್​ ಇವರಿಗೆ ಕಂಚಿನ ಪದಕ ಒಲಿದು ಬಂದಿತ್ತು. ಮಹಿಳಾ ಬ್ಯಾಡ್ಮಿಂಟನ್​ ಸಿಂಗಲ್ಸ್​ನಲ್ಲಿ ಭಾರತದ ಪಿ.ವಿ.ಸಿಂಧು ಈಗಾಗಲೇ ಚಿನ್ನಕ್ಕೆ ಗೆದ್ದಿದ್ದಾರೆ.

ಇದನ್ನೂ ಓದಿ: ಫೈನಲ್​ಗೆ ಲಗ್ಗೆ ಹಾಕಿದ ಲಕ್ಷ್ಯ ಸೇನ್.. ಆಲ್​​ ಇಂಗ್ಲೆಂಡ್​ ಚಾಂಪಿಯನ್​ಶಿಪ್​ನಲ್ಲಿ ಗೆಲುವಿನ ನಾಗಾಲೋಟ​​

Last Updated : Aug 8, 2022, 5:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.