ಬರ್ಮಿಂಗ್ಹ್ಯಾಮ್(ಲಂಡನ್): ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. 4ನೇ ದಿನವಾದ ಇಂದು ಭಾರತದ ಅಥ್ಲೀಟ್ಸ್ ಗಮನಾರ್ಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯರ 48 ಕೆಜಿ ಜೂಡೋ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾದ ಮೈಕೆಲಾ ವೈಟ್‌ಬೂಯಿ ವಿರುದ್ಧ ಸೋತ ಸುಶೀಲಾ ದೇವಿ ಬೆಳ್ಳಿ ಪದಕ ಗೆದ್ದರು.
ಪುರುಷರ 60 ಕೆಜಿ ಜೂಡೋದಲ್ಲಿ ಭಾರತದ ವಿಜಯ್ ಕುಮಾರ್ ಯಾದವ್ ಕಂಚಿನ ಪದಕ ಸಾಧನೆ ತೋರಿದರು. ಕಾಮನ್‌ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಸುಶೀಲಾಗೆ ಇದು ಎರಡನೇ ಬೆಳ್ಳಿ ಪದಕವಾಗಿದೆ. 2014ರಲ್ಲಿ ಬೆಳ್ಳಿ ಪದಕ ಗೆದ್ದಿರುವ ಅವರು ಈ ಬಾರಿ ಚಿನ್ನವನ್ನಾಗಿ ಪರಿವರ್ತಿಸುವ ಪ್ರಯತ್ನ ಮಾಡಿದ್ದರು. ಆದರೆ, ಅದರಲ್ಲಿ ವಿಫಲರಾದರು.
-
Union Sports Minister Anurag Thakur congratulates Shushila Devi for winning a silver medal and Vijay Kumar Yadav for winning bronze medal in #CommonwealthGames2022 pic.twitter.com/Ir7a0WKiS3
— ANI (@ANI) August 1, 2022 " class="align-text-top noRightClick twitterSection" data="
">Union Sports Minister Anurag Thakur congratulates Shushila Devi for winning a silver medal and Vijay Kumar Yadav for winning bronze medal in #CommonwealthGames2022 pic.twitter.com/Ir7a0WKiS3
— ANI (@ANI) August 1, 2022Union Sports Minister Anurag Thakur congratulates Shushila Devi for winning a silver medal and Vijay Kumar Yadav for winning bronze medal in #CommonwealthGames2022 pic.twitter.com/Ir7a0WKiS3
— ANI (@ANI) August 1, 2022
ಇವರ ಗಮನಾರ್ಹ ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿದ್ದು, ದೇಶದ ಹಿರಿಮೆ ಹೆಚ್ಚಿಸಿದಕ್ಕಾಗಿ ಶುಭ ಹಾರೈಸಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತ ಇದುವರೆಗೆ 3 ಚಿನ್ನ, 3 ಬೆಳ್ಳಿ ಹಾಗೂ ಎರಡು ಕಂಚು ಸೇರಿ 8 ಪದಕ ಸಂಪಾದಿಸಿದ್ದು 6ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಲಾನ್ ಬೌಲ್ಸ್ನಲ್ಲಿ ಐತಿಹಾಸಿಕ ಫೈನಲ್ ಪ್ರವೇಶಿಸಿದ ಭಾರತ! ಮತ್ತೊಂದು ಪದಕ ಪಕ್ಕಾ