ಬರ್ಮಿಂಗ್ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾರತದ ಕ್ರೀಡಾಪಟುಗಳ ಪದಕಗಳ ಬೇಟೆ ಮುಂದುವರೆದಿದೆ. ಇಂದು ನಡೆದ 10,000 ಕಿ.ಮೀ ಓಟದ ನಡಿಗೆಯಲ್ಲಿ ಭಾರತದ ಪ್ರಿಯಾಂಕಾ ಗೋಸ್ವಾಮಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದು, ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ. ಇದರ ಬೆನ್ನಲ್ಲೇ ಭಾರತದ ಅವಿನಾಶ್ ಕೂಡ ಬೆಳ್ಳಿಗೆ ಕೊರಳೊಡ್ಡಿದ್ದಾರೆ.
2022ರ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ನಲ್ಲಿ ಮೊದಲ ಪದಕ ಗೆದ್ದಿರುವ ಭಾರತದ ಮಹಿಳಾ ಆಟಗಾರ್ತಿಯಾಗಿ ಪ್ರಿಯಾಂಕಾ ಹೊರಹೊಮ್ಮಿದ್ದಾರೆ. ಈಗಾಗಲೇ ಟ್ರ್ಯಾಕ್ ಮತ್ತು ಫೀಲ್ಡ್ನಲ್ಲಿ ಭಾರತದ ಮುರುಳಿ ಶ್ರೀಶಂಕರ್(ಲಾಂಗ್ಜಂಪ್), ತೇಜಸ್ವಿನ್ ಶಂಕರ್(ಹೈಂಜಪ್) ಪದಕ ಗೆದ್ದಿದ್ದಾರೆ. ಆದರೆ, ಪ್ರಿಯಾಂಕಾ ಗೋಸ್ವಾಮಿ ಇದೀಗ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.
-
PRIYANKA WINS SILVER 🥈#Tokyo2020 Olympian @Priyanka_Goswam wins a🥈 in Women’s 10 km Race Walk (43:38.00) at #CommonwealthGames2022🤟
— SAI Media (@Media_SAI) August 6, 2022 " class="align-text-top noRightClick twitterSection" data="
With this win the #Athletics medal count rises to 3️⃣
Proud of you Champ 🤩
Many congratulations!#Cheer4India#India4CWG2022 pic.twitter.com/rMQqUYZpHz
">PRIYANKA WINS SILVER 🥈#Tokyo2020 Olympian @Priyanka_Goswam wins a🥈 in Women’s 10 km Race Walk (43:38.00) at #CommonwealthGames2022🤟
— SAI Media (@Media_SAI) August 6, 2022
With this win the #Athletics medal count rises to 3️⃣
Proud of you Champ 🤩
Many congratulations!#Cheer4India#India4CWG2022 pic.twitter.com/rMQqUYZpHzPRIYANKA WINS SILVER 🥈#Tokyo2020 Olympian @Priyanka_Goswam wins a🥈 in Women’s 10 km Race Walk (43:38.00) at #CommonwealthGames2022🤟
— SAI Media (@Media_SAI) August 6, 2022
With this win the #Athletics medal count rises to 3️⃣
Proud of you Champ 🤩
Many congratulations!#Cheer4India#India4CWG2022 pic.twitter.com/rMQqUYZpHz
ಮಹಿಳೆಯರ 10,000 ಮೀಟರ್ ನಡಿಗೆಯನ್ನು ಪ್ರಿಯಾಂಕಾ ಕೇವಲ 49 ನಿಮಿಷ, 38 ಸೆಕೆಂಡ್ಗಳಲ್ಲಿ ಪೂರ್ಣಗೊಳಿಸಿದ್ದಾರೆ. ಜೊತೆಗೆ ಕಾಮನ್‌ವೆಲ್ತ್ ಗೇಮ್ಸ್‌ನ ಟ್ರ್ಯಾಕ್ ಮತ್ತು ಫೀಲ್ಡ್ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪುರುಷರ 3 ಸಾವಿರ ಮೀಟರ್ ಸ್ಟೀಪಲ್ ಚೇಸ್ ಫೈನಲ್ನಲ್ಲಿ ಭಾರತದ ಅವಿನಾಶ್ ಮುಕುಂದ್ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.
-
SILVER FOR SABLE🥈@avinash3000m wins a 🥈in Men's 3000m Steeplechase event at #CommonwealthGames2022 with a Personal Best and National Record (8.11.20)
— SAI Media (@Media_SAI) August 6, 2022 " class="align-text-top noRightClick twitterSection" data="
Congratulations Avinash. India is very proud of you 🤩#Cheer4India #India4CWG2022 pic.twitter.com/lSmP1Ws4sk
">SILVER FOR SABLE🥈@avinash3000m wins a 🥈in Men's 3000m Steeplechase event at #CommonwealthGames2022 with a Personal Best and National Record (8.11.20)
— SAI Media (@Media_SAI) August 6, 2022
Congratulations Avinash. India is very proud of you 🤩#Cheer4India #India4CWG2022 pic.twitter.com/lSmP1Ws4skSILVER FOR SABLE🥈@avinash3000m wins a 🥈in Men's 3000m Steeplechase event at #CommonwealthGames2022 with a Personal Best and National Record (8.11.20)
— SAI Media (@Media_SAI) August 6, 2022
Congratulations Avinash. India is very proud of you 🤩#Cheer4India #India4CWG2022 pic.twitter.com/lSmP1Ws4sk
ಬಾಕ್ಸಿಂಗ್ ಹಾಗೂ ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಇನ್ನಷ್ಟು ಪದಕ ಬರುವುದು ಖಚಿತವಾಗಿದೆ. ಈಗಾಗಲೇ ಅಮಿತ್, ನೀತು ಫೈನಲ್ಗೆ ಲಗ್ಗೆ ಹಾಕಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾರತ ಇಲ್ಲಿಯವರೆಗೆ 9 ಚಿನ್ನ, 10 ಬೆಳ್ಳಿ ಹಾಗೂ 9 ಕಂಚಿನ ಸಾಧನೆ ಮಾಡಿದ್ದು, ಒಟ್ಟು 28 ಪದಕ ಮುಡಿಗೇರಿಸಿಕೊಂಡು ಭಾರತ 5ನೇ ಸ್ಥಾನದಲ್ಲಿದೆ. 52 ಚಿನ್ನ, 44 ಬೆಳ್ಳಿ ಹಾಗೂ 46 ಕಂಚು ಗೆದ್ದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ.
ಇದನ್ನೂ ಓದಿರಿ: ಕಾಮನ್ ವೆಲ್ತ್ ಗೇಮ್ಸ್: ಪದಕ ಗೆದ್ದು ತವರಿಗೆ ಮರಳಿದ ಕ್ರೀಡಾಪಟುಗಳಿಗೆ ಅದ್ಧೂರಿ ಸ್ವಾಗತ