ETV Bharat / sports

Commonwealth Games 2022: ಭಾರತಕ್ಕೆ ಎರಡನೇ ಚಿನ್ನ, ಜೆರೆಮಿ ಮುಡಿಗೆ ಬಂಗಾರ

author img

By

Published : Jul 31, 2022, 4:08 PM IST

Updated : Jul 31, 2022, 4:57 PM IST

ಕಾಮನ್‌ವೆಲ್ತ್ ಗೇಮ್ಸ್ 2022- ಭಾರತಕ್ಕೆ ಎರಡನೇ ಚಿನ್ನದ ಪದಕ- ವೇಟ್‌ಲಿಫ್ಟರ್ ಜೆರೆಮಿ ಲಾಲ್ರಿನ್ನುಂಗಾ ಮುಡಿಗೆ ಚಿನ್ನದ ಪದಕ

Commonwealth Games 2022: Indian weightlifter Jeremy Lalrinnunga wins the Gold medal
ಕಾಮನ್‌ವೆಲ್ತ್ ಗೇಮ್ಸ್ 2022: ಭಾರತಕ್ಕೆ ಎರಡನೇ ಚಿನ್ನದ ಪದಕ

ಬರ್ಮಿಂಗ್‌ಹ್ಯಾಮ್(ಯುಕೆ): ಬರ್ಮಿಂಗ್‌ಹ್ಯಾಮ್​​ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ ಬಂದಿದೆ. ಪುರುಷರ 67 ಕೆಜಿ ವೇಟ್‌ಲಿಫ್ಟಿಂಗ್ ಫೈನಲ್‌ನಲ್ಲಿ ಭಾರತದ ವೇಟ್‌ಲಿಫ್ಟರ್ ಜೆರೆಮಿ ಲಾಲ್ರಿನ್ನುಂಗಾ ಚಿನ್ನದ ಪದಕ ಗೆದ್ದಿದ್ದಾರೆ.

ಭಾರತಕ್ಕೆ ಎರಡನೇ ಚಿನ್ನದ ಪದಕ ತಂದುಕೊಟ್ಟ ಜೆರೆಮಿ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 300 ಕೆ.ಜಿ. ತೂಕ ಎತ್ತಿದರು. ಸ್ನ್ಯಾಚ್‌ನಲ್ಲಿ 140 ಕೆಜಿ ಭಾರ ಹಾಗೂ ಜರ್ಕ್​ನಲ್ಲಿ 160 ಕೆಜಿ ಎತ್ತುವ ಮೂಲಕ ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

  • Our Yuva Shakti is creating history! Congratulations to @raltejeremy, who has won a Gold in his very first CWG and has set a phenomenal CWG record as well. At a young age he’s brought immense pride and glory. Best wishes to him for his future endeavours. pic.twitter.com/dUGyItRLCJ

    — Narendra Modi (@narendramodi) July 31, 2022 " class="align-text-top noRightClick twitterSection" data=" ">

Our Yuva Shakti is creating history! Congratulations to @raltejeremy, who has won a Gold in his very first CWG and has set a phenomenal CWG record as well. At a young age he’s brought immense pride and glory. Best wishes to him for his future endeavours. pic.twitter.com/dUGyItRLCJ

— Narendra Modi (@narendramodi) July 31, 2022

ಜೆರೆಮಿ ಸಾಧನೆಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ಯುವ ಶಕ್ತಿ ಇತಿಹಾಸ ಸೃಷ್ಟಿಸುತ್ತಿದೆ!. ಜೆರೆಮಿ ಲಾಲ್ರಿನ್ನುಂಗಾ ಅವರಿಗೆ ಅಭಿನಂದನೆಗಳು. ಅವರು ತಮ್ಮ ಮೊದಲ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನವನ್ನು ಗೆದ್ದಿದ್ದಾರೆ ಮತ್ತು ಅಸಾಧಾರಣ ದಾಖಲೆಯನ್ನು ಸಹ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಅವರು ಅಪಾರ ಹೆಮ್ಮೆ ಮತ್ತು ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು ಎಂದು ಪ್ರಧಾನಿ ಟ್ವೀಟ್​ ಮಾಡಿದ್ದಾರೆ.

ಭಾರತಕ್ಕೆ ಒಟ್ಟು ಆರು ಪದಕ: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತವು ಎರಡನೇ ಪದಕದ ಸಾಧನೆ ಮಾಡಿದೆ. ಈ ಮೂಲಕ ಇದುವರೆಗೆ ಆರು ಪದಕಗಳು ಬಂದಿವೆ. ಇಂದು ಬೆಳಗ್ಗೆ ಮಹಿಳೆಯರ 55 ಕೆಜಿ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯ ಫೈನಲ್‌ನಲ್ಲಿ ವೇಟ್‌ಲಿಫ್ಟರ್ ಬಿಂದ್ಯಾರಾಣಿ ದೇವಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು. ನಿನ್ನೆ ಮೀರಾಬಾಯಿ ಚಾನು ಚಿನ್ನ, ಸಂಕೇತ್ ಮಹದೇವ್ ಸರ್ಗರ್ ಮತ್ತು ಬಿಂದ್ಯಾರಾಣಿ ದೇವಿ ತಲಾ ಒಂದೊಂದು ಬೆಳ್ಳಿ ಮತ್ತು ಗುರುರಾಜ ಪೂಜಾರಿ ಕಂಚಿನ ಪದಕ ಗೆದ್ದಿದ್ದರು.

ಇದನ್ನೂ ಓದಿ: ಕಾಮನ್‌ವೆಲ್ತ್ ಕ್ರೀಡಾಕೂಟ: ಭಾರತದ ಬಿಂದ್ಯಾರಾಣಿ ದೇವಿಗೆ ಬೆಳ್ಳಿ ಪದಕ

ಬರ್ಮಿಂಗ್‌ಹ್ಯಾಮ್(ಯುಕೆ): ಬರ್ಮಿಂಗ್‌ಹ್ಯಾಮ್​​ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ ಬಂದಿದೆ. ಪುರುಷರ 67 ಕೆಜಿ ವೇಟ್‌ಲಿಫ್ಟಿಂಗ್ ಫೈನಲ್‌ನಲ್ಲಿ ಭಾರತದ ವೇಟ್‌ಲಿಫ್ಟರ್ ಜೆರೆಮಿ ಲಾಲ್ರಿನ್ನುಂಗಾ ಚಿನ್ನದ ಪದಕ ಗೆದ್ದಿದ್ದಾರೆ.

ಭಾರತಕ್ಕೆ ಎರಡನೇ ಚಿನ್ನದ ಪದಕ ತಂದುಕೊಟ್ಟ ಜೆರೆಮಿ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 300 ಕೆ.ಜಿ. ತೂಕ ಎತ್ತಿದರು. ಸ್ನ್ಯಾಚ್‌ನಲ್ಲಿ 140 ಕೆಜಿ ಭಾರ ಹಾಗೂ ಜರ್ಕ್​ನಲ್ಲಿ 160 ಕೆಜಿ ಎತ್ತುವ ಮೂಲಕ ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

  • Our Yuva Shakti is creating history! Congratulations to @raltejeremy, who has won a Gold in his very first CWG and has set a phenomenal CWG record as well. At a young age he’s brought immense pride and glory. Best wishes to him for his future endeavours. pic.twitter.com/dUGyItRLCJ

    — Narendra Modi (@narendramodi) July 31, 2022 " class="align-text-top noRightClick twitterSection" data=" ">

ಜೆರೆಮಿ ಸಾಧನೆಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ಯುವ ಶಕ್ತಿ ಇತಿಹಾಸ ಸೃಷ್ಟಿಸುತ್ತಿದೆ!. ಜೆರೆಮಿ ಲಾಲ್ರಿನ್ನುಂಗಾ ಅವರಿಗೆ ಅಭಿನಂದನೆಗಳು. ಅವರು ತಮ್ಮ ಮೊದಲ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನವನ್ನು ಗೆದ್ದಿದ್ದಾರೆ ಮತ್ತು ಅಸಾಧಾರಣ ದಾಖಲೆಯನ್ನು ಸಹ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಅವರು ಅಪಾರ ಹೆಮ್ಮೆ ಮತ್ತು ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು ಎಂದು ಪ್ರಧಾನಿ ಟ್ವೀಟ್​ ಮಾಡಿದ್ದಾರೆ.

ಭಾರತಕ್ಕೆ ಒಟ್ಟು ಆರು ಪದಕ: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತವು ಎರಡನೇ ಪದಕದ ಸಾಧನೆ ಮಾಡಿದೆ. ಈ ಮೂಲಕ ಇದುವರೆಗೆ ಆರು ಪದಕಗಳು ಬಂದಿವೆ. ಇಂದು ಬೆಳಗ್ಗೆ ಮಹಿಳೆಯರ 55 ಕೆಜಿ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯ ಫೈನಲ್‌ನಲ್ಲಿ ವೇಟ್‌ಲಿಫ್ಟರ್ ಬಿಂದ್ಯಾರಾಣಿ ದೇವಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು. ನಿನ್ನೆ ಮೀರಾಬಾಯಿ ಚಾನು ಚಿನ್ನ, ಸಂಕೇತ್ ಮಹದೇವ್ ಸರ್ಗರ್ ಮತ್ತು ಬಿಂದ್ಯಾರಾಣಿ ದೇವಿ ತಲಾ ಒಂದೊಂದು ಬೆಳ್ಳಿ ಮತ್ತು ಗುರುರಾಜ ಪೂಜಾರಿ ಕಂಚಿನ ಪದಕ ಗೆದ್ದಿದ್ದರು.

ಇದನ್ನೂ ಓದಿ: ಕಾಮನ್‌ವೆಲ್ತ್ ಕ್ರೀಡಾಕೂಟ: ಭಾರತದ ಬಿಂದ್ಯಾರಾಣಿ ದೇವಿಗೆ ಬೆಳ್ಳಿ ಪದಕ

Last Updated : Jul 31, 2022, 4:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.