ಭುವನೇಶ್ವರ (ಒಡಿಶಾ): ಚೀನಾದ ಹ್ಯಾಂಗ್‌ಝೌನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್ 2023ರಲ್ಲಿ ಒಡಿಶಾದ ಜಾವೆಲಿನ್ ತಾರೆ ಕಿಶೋರ್ ಕುಮಾರ್ ಜೆನಾ ಅವರು ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಕಿಶೋರ್ ವೈಯಕ್ತಿಕ ದಾಖಲೆಯ ದೂರ ದಾಖಲಿಸುವ ಮೂಲಕ ದೇಶಕ್ಕೆ ಬೆಳ್ಳಿ ಪದಕ ಗೆದ್ದರು. ಅಲ್ಲದೇ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಈ ಅದ್ಭುತ ಸಾಧನೆಗಾಗಿ ಒಡಿಶಾದ ಜಾವೆಲಿನ್ ತಾರೆ ಕಿಶೋರ್ ಕುಮಾರ್ ಜೆನಾ ಅವರನ್ನು ಮುಖ್ಯಮಂತ್ರಿ ನವೀನ್ ಪಟ್ನಾಯಕ್ 1.5 ಕೋಟಿ ರೂಪಾಯಿ ಬಹುಮಾನದ ಚೆಕ್ ನೀಡಿ ಸನ್ಮಾನಿಸಿದರು.
-
CM @Naveen_Odisha felicitated #Odisha’s Javelin star, Kishore Kumar Jena with a cash award of ₹1.5 Cr for his stellar performance in the recently concluded #AsianGames in Hangzhou. Kishore bagged a Silver medal & sealed his berth in the upcoming #ParisOlympics 2024 bringing… pic.twitter.com/x5qd8WwTjY
— CMO Odisha (@CMO_Odisha) October 17, 2023 " class="align-text-top noRightClick twitterSection" data="
">CM @Naveen_Odisha felicitated #Odisha’s Javelin star, Kishore Kumar Jena with a cash award of ₹1.5 Cr for his stellar performance in the recently concluded #AsianGames in Hangzhou. Kishore bagged a Silver medal & sealed his berth in the upcoming #ParisOlympics 2024 bringing… pic.twitter.com/x5qd8WwTjY
— CMO Odisha (@CMO_Odisha) October 17, 2023CM @Naveen_Odisha felicitated #Odisha’s Javelin star, Kishore Kumar Jena with a cash award of ₹1.5 Cr for his stellar performance in the recently concluded #AsianGames in Hangzhou. Kishore bagged a Silver medal & sealed his berth in the upcoming #ParisOlympics 2024 bringing… pic.twitter.com/x5qd8WwTjY
— CMO Odisha (@CMO_Odisha) October 17, 2023
19ನೇ ಏಷ್ಯಾಡ್ನಲ್ಲಿ ಭಾರತ ಅಥ್ಲೆಟಿಕ್ಸ್ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿತು. ಜಾವೆಲಿನ್ ಥ್ರೋದಲ್ಲಿ ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಚಿನ್ನ ಗೆದ್ದರೆ, ಕಿಶೋರ್ ಬೆಳ್ಳಿ ಗೆದ್ದರು. ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಅಥ್ಲೀಟ್ಗಳ ನಡುವೆಯೇ ಪೈಪೋಟಿ ಏರ್ಪಟ್ಟಿತ್ತು. ಜೆನಾ ವೈಯಕ್ತಿಕ ಅತ್ಯುತ್ತಮ 87.54 ಮೀಟರ್‌ಗಳೊಂದಿಗೆ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಜಯಿಸಿದರು.
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಕಿಶೋರ್ ಕುಮಾರ್ ಜೆನಾ ಒಡಿಶಾ ರಾಜ್ಯಕ್ಕೆ ಹೆಮ್ಮೆಯ ಮೂಲವಾಗಿದೆ ಎಂದು ಪುನರುಚ್ಚರಿಸಿದರು. ವಿಶೇಷ ಸಾಧನೆಗಾಗಿ ಅವರನ್ನು ಶ್ಲಾಘಿಸಿದರು. ಜೆನಾ ಅವರು ರಾಜ್ಯಕ್ಕೆ ಇನ್ನಷ್ಟು ಪ್ರಶಸ್ತಿ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಶುಭ ಹಾರೈಸಿದರು. ಕಿಶೋರ್ ಮಾತನಾಡಿ, ತಮ್ಮ ಪ್ರಯತ್ನ ಮತ್ತು ಸಾಧನೆಯನ್ನು ಗುರುತಿಸಿದ್ದಕ್ಕಾಗಿ ಮುಖ್ಯಮಂತ್ರಿಗೆ ಧನ್ಯವಾದ ಅರ್ಪಿಸಿದರು.
ಪುರಿ ಮೂಲದ ಕಿಶೋರ್ ಅಥ್ಲೆಟಿಕ್ಸ್ ಜಗತ್ತಿನಲ್ಲಿ ಮುಂದಿನ ಸ್ಟಾರ್ ಆಗಿದ್ದಾರೆ. ಈ ವರ್ಷದಲ್ಲಿ ಹಲವಾರು ಯಶಸ್ವಿ ಪ್ರವಾಸ ಮಾಡಿದ್ದಾರೆ. 2018ರಲ್ಲಿ ಬುಡಾಪೆಸ್ಟ್ನಲ್ಲಿ ನಡೆದಿದ್ದ ಏಷ್ಯನ್ ಕ್ರೀಡಾಕೂಟ ಮತ್ತು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 5ನೇ ಸ್ಥಾನ ಪಡೆದಿದ್ದರು.
ಕಿಶೋರ್ ಭರ್ಚಿ ಎಸೆತ ಹೀಗಿತ್ತು: ನೀರಜ್ ಚೋಪ್ರಾ ಜತೆಗೆ ಕಣಕ್ಕಿಳಿದಿದ್ದ ಕಿಶೋರ್ ಕುಮಾರ್ ಜೆನಾ ಆರಂಭದಿಂದಲೂ ಉತ್ತಮ ಬಾಹುಬಲ ಪ್ರದರ್ಶನ ನೀಡಿದರು. ಮೊದಲ ಎಸೆತದಲ್ಲಿಯೇ ಅವರು 81.26 ಮೀಟರ್ ದೂರ ಜಾವೆಲಿನ್ ಎಸೆದರು. ಎರಡನೇ ಎಸೆತದಲ್ಲಿ 79.76 ಮೀ, ಮೂರನೇ ಬಾರಿಗೆ 86.77 ಎಸೆದರು. ಇದು ಅವರ ವೈಯಕ್ತಿಕ ಉತ್ತಮವಾಗಿತ್ತು. ಮುಂದಿನ ಎಸೆತದಲ್ಲೇ 87.54 ಮೀಟರ್ ದೂರ ಭರ್ಚಿ ಚಿಮ್ಮಿಸಿ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡರು. ಇದಾದ ಬಳಿಕ 84.49 ಮೀಟರ್ ಎಸೆದರೆ, ಕೊನೆಯ ಪ್ರಯತ್ನ ಫೌಲ್ ಮಾಡಿದರು.
ಇದನ್ನೂ ಓದಿ: ಏಷ್ಯನ್ ಗೇಮ್ಸ್: ಜಾವೆಲಿನ್ ರಜತ ಸಾಧಕ ಕಿಶೋರ್ಗೆ ಒಡಿಶಾ ಸರ್ಕಾರದಿಂದ ₹1.5 ಕೋಟಿ ಬಹುಮಾನ