ಭುವನೇಶ್ವರ್ (ಒಡಿಶಾ): ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಬುಧವಾರ ಕಳಿಂಗ ಸ್ಟೇಡಿಯಂನಲ್ಲಿ ಜಿಮ್ನಾಸ್ಟಿಕ್ಸ್ ಹೈ ಪರ್ಫಾರ್ಮೆನ್ಸ್ ಸೆಂಟರ್ ಮತ್ತು ಹೊಸ ಹಾಕಿ ಹೈ ಪರ್ಫಾರ್ಮೆನ್ಸ್ ಸೆಂಟರ್ ಅನ್ನು ಉದ್ಘಾಟಿಸಿದರು.
ಜಿಮ್ನಾಸ್ಟಿಕ್ಸ್ ಹೈ ಪರ್ಫಾರ್ಮೆನ್ಸ್ ಸೆಂಟರ್, ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ ಜೊತೆಗಿನ ಜಂಟಿ ಉಪಕ್ರಮವಾಗಿದ್ದು, ಹಾಕಿ ಹೈ ಪರ್ಫಾರ್ಮೆನ್ಸ್ ಸೆಂಟರ್ ಟಾಟಾ ಸ್ಟೀಲ್ ಮತ್ತು ಟಾಟಾ ಟ್ರಸ್ಟ್‌ಗಳ ಸಹಭಾಗಿತ್ವದಲ್ಲಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಒಡಿಯಾ ಜಿಮ್ನಾಸ್ಟ್‌ಗಳಾದ ರಾಕೇಶ್ ಪಾತ್ರ ಮತ್ತು ತಪನ್ ಮೊಹಂತಿ ಅವರಿಗೆ ಮುಂಬರುವ ಏಷ್ಯನ್ ಗೇಮ್ಸ್ 2023ಕ್ಕೆ ಅರ್ಹತೆಗಾಗಿ 10 ಲಕ್ಷ ರೂಪಾಯಿಗಳ ಚೆಕ್ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ನವೀನ್ ಪಟ್ನಾಯಕ್, “ಒಡಿಶಾ ಕ್ರೀಡಾ ಶ್ರೇಷ್ಠತೆಗಾಗಿ ಪಾಲುದಾರಿಕೆ ಮಾದರಿಯನ್ನು ಅನುಸರಿಸುತ್ತದೆ. ಹೊಸ ಹಾಕಿ ಹೈ ಪರ್ಫಾರ್ಮೆನ್ಸ್ ಸೆಂಟರ್ ಮತ್ತು ಜಿಮ್ನಾಸ್ಟಿಕ್ ಹೈ ಪರ್ಫಾರ್ಮೆನ್ಸ್ ಸೆಂಟರ್ ಉದ್ಘಾಟನೆಯೊಂದಿಗೆ, ಒಡಿಶಾದ ಕ್ರೀಡಾ ಪರಿಸರ ವ್ಯವಸ್ಥೆಯು ಇನ್ನಷ್ಟು ಸದೃಢವಾಗಿದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಸ್ಪರ್ಧಿಸಲು ಮತ್ತು ಮಿಂಚಲು ಕ್ರೀಡಾಪಟುಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ಹೊಸ ಕೇಂದ್ರಗಳು ಪ್ರತಿಭೆಗಳನ್ನು ಕಂಡು ಹಿಡಿಯುವಲ್ಲಿ ಮತ್ತು ಸಂಭಾವ್ಯ ಪದಕ ವಿಜೇತ ಕ್ರೀಡಾಪಟುಗಳನ್ನು ಪೋಷಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ'' ಎಂದರು.
ಜಿಮ್ನಾಸ್ಟಿಕ್ಸ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಒತ್ತು: ಜಿಮ್ನಾಸ್ಟಿಕ್ಸ್ ಹೈ ಪರ್ಫಾರ್ಮೆನ್ಸ್ ಸೆಂಟರ್ ಅನ್ನು ಭಾರತದ ಜಿಮ್ನಾಸ್ಟ್‌ಗಳಿಗೆ ಅರ್ಪಿಸಿದ ಮುಖ್ಯಮಂತ್ರಿ, “ಜಿಮ್ನಾಸ್ಟಿಕ್ಸ್ ಅಭಿವೃದ್ಧಿಗೆ ಒಡಿಶಾ ಬದ್ಧವಾಗಿದೆ. ಜಿಮ್ನಾಸ್ಟಿಕ್ಸ್ ಅಭಿವೃದ್ಧಿಯತ್ತ ನಮ್ಮ ರಾಜ್ಯ ಮತ್ತು ಎಎಂ, ಎನ್ಎಸ್ ಭಾರತ ಒಟ್ಟಾಗಿರುವುದನ್ನು ನೋಡಲು ನನಗೆ ಸಂತೋಷವಾಗಿದೆ. ಈ ಪಾಲುದಾರಿಕೆಯು ದೇಶದಲ್ಲಿ ರೋಮಾಂಚಕ ಜಿಮ್ನಾಸ್ಟಿಕ್ಸ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು, ಭವಿಷ್ಯಕ್ಕಾಗಿ ಯುವ ಪ್ರತಿಭೆಗಳನ್ನು ಗುರುತಿಸಲು ಮತ್ತು ಪೋಷಿಸಲು ಸಹಾಯ ಮಾಡುತ್ತದೆ.
ಟಾಟಾ ಗ್ರೂಪ್‌ನೊಂದಿಗೆ ನಮ್ಮ ಸಹಭಾಗಿತ್ವ: ''ಹೊಸ ಹಾಕಿ ಹೈ ಪರ್ಫಾರ್ಮೆನ್ಸ್ ಸೆಂಟರ್ ಮತ್ತು ತಳಮಟ್ಟದ ಕೇಂದ್ರಗಳಲ್ಲಿ ಹಾಕಿ ಅಭಿವೃದ್ಧಿಗಾಗಿ ಟಾಟಾ ಗ್ರೂಪ್‌ನೊಂದಿಗೆ ನಮ್ಮ ಸಹಭಾಗಿತ್ವದ ಬಗ್ಗೆ ನಮಗೆ ತುಂಬಾ ಸಂತೋಷವಾಗಿದೆ. ಇದು ಪ್ರತಿಭೆಯನ್ನು ಪೋಷಿಸಲು ಸಹಾಯ ಮಾಡುತ್ತದೆ. ರಾಷ್ಟ್ರೀಯ ತಂಡಗಳಿಗೆ ಆಟಗಾರರನ್ನು ಸಿದ್ಧರಾಗಿಲು ಕೊಡುಗೆ ನೀಡುತ್ತದೆ. ಕ್ರೀಡಾ ಶ್ರೇಷ್ಠತೆಯನ್ನು ಸಾಧಿಸುವಲ್ಲಿ ಕ್ರೀಡಾಪಟುಗಳಿಗೆ ಸಹಾಯ ಮಾಡುವ ಉದ್ದೇಶದಿಂದ ನಾವು ಈಗ ಅತ್ಯುತ್ತಮ ಮತ್ತು ಆಧುನಿಕ ಮೂಲಸೌಕರ್ಯದೊಂದಿಗೆ ಹೆಚ್ಚು ಮುಕ್ತ ಮತ್ತು ಸಮಗ್ರ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದೇವೆ'' ಎಂದು ತಿಳಿಸಿದರು.
ಜಿಮ್ನಾಸ್ಟಿಕ್ಸ್ ಹೆಚ್ಪಿಸಿಯ ಆರು ಕ್ರೀಡಾಪಟುಗಳ ಆಯ್ಕೆ: ಒಡಿಶಾ ಎಎಂ, ಎನ್ಎಸ್ ಇಂಡಿಯಾ ಜಿಮ್ನಾಸ್ಟಿಕ್ಸ್ ಹೈ ಪರ್ಫಾರ್ಮೆನ್ಸ್ ಸೆಂಟರ್ ಅನ್ನು ಭಾರತದಲ್ಲಿ ಜಿಮ್ನಾಸ್ಟಿಕ್ಸ್ ಕ್ರೀಡೆಯನ್ನು ಉತ್ತೇಜಿಸಲು ಮತ್ತು ಒಡಿಶಾವನ್ನು ಜಿಮ್ನಾಸ್ಟಿಕ್ಸ್ ಶ್ರೇಷ್ಠತೆಯ ರಾಷ್ಟ್ರೀಯ ಕೇಂದ್ರವನ್ನಾಗಿ ಪರಿವರ್ತಿಸಲು ಸ್ಥಾಪಿಸಲಾಗಿದೆ. ಇದು ಸುಧಾರಿತ ಉಪಕರಣಗಳು ಮತ್ತು ಸೌಲಭ್ಯಗಳನ್ನು ಹೊಂದಿದೆ. ಹಿರಿಯ ಮತ್ತು ತಳಮಟ್ಟದ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತದೆ ಹಾಗೂ ತಯಾರು ಮಾಡುತ್ತದೆ. ಮುಂಬರುವ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತವನ್ನು ಪ್ರತಿನಿಧಿಸಲು ರಿಸರ್ವ್‌ನಲ್ಲಿರುವ ಒಬ್ಬರು ಸೇರಿದಂತೆ ಜಿಮ್ನಾಸ್ಟಿಕ್ಸ್ HPCಯ ಆರು ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ. ಇದು ಅವರ ಪ್ರತಿಭೆ ಮತ್ತು ಕೇಂದ್ರದಲ್ಲಿ ನೀಡಲಾದ ತರಬೇತಿಯ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. 2023ರ ಏಪ್ರಿಲ್‌ನಲ್ಲಿ ಮುಖ್ಯಮಂತ್ರಿ ಜಪಾನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಮ್ನಾಸ್ಟಿಕ್ಸ್ HPC ಅನ್ನು ಸ್ಥಾಪಿಸಲು ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಜೊತೆಗೆ ಕ್ಯೋಟೋದಲ್ಲಿ ಎಂಒಯುಗೆ ಸಹಿ ಹಾಕಲಾಯಿತು.
ಇದನ್ನೂ ಓದಿ: WADA Testing: ಭಾರತದ 70 ಅಥ್ಲೀಟ್‌ಗಳನ್ನೊಂಡ 12 ಸಕಾರಾತ್ಮಕ ಪರೀಕ್ಷೆಗಳು, 97 ವೈಫಲ್ಯ ಗುರುತು