ನವದೆಹಲಿ: ಭಾರತದ ಬ್ಯಾಡ್ಮಿಂಟನ್ ದಂತಕತೆ ಪ್ರಕಾಶ್ ಪಡುಕೋಣೆ( Prakash Padukone) ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಷನ್(Badminton World Federation) ಪ್ರತಿ ವರ್ಷ ನೀಡುವ ಜೀವಮಾನದ ಸಾಧನೆ ಪ್ರಶಸ್ತಿಗೆ(Lifetime Achievement Award ) ಭಾಜನರಾಗಿದ್ದಾರೆ. ಬಿಡಬ್ಲ್ಯೂಎಫ್ ಗುರುವಾರ ಭಾರತೀಯ ಮಾಜಿ ಶಟ್ಲರ್ರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಘೋಷಿಸಿದೆ.
ಮಾಜಿ ನಂಬರ್ ಒನ್ ಆಟಗಾರನಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಬೇಕೆಂದು ಭಾರತೀಯ ಬ್ಯಾಡ್ಮಿಂಟನ್ ಸಂಘ(Badminton Association of India) ಪ್ರತಿಪಾದಿಸಿತ್ತು. ಪ್ರಕಾಶ್ ಪಡುಕೋಣೆ ವಿಶ್ವಚಾಂಪಿಯನ್ಶಿಪ್ನಲ್ಲಿ ಪದಕ ಪಡೆದಿದ್ದ ಮೊದಲ ಭಾರತೀಯ ಶಟ್ಲರ್ ಆಗಿದ್ದಾರೆ. ಅವರಿಗೆ 2018ರಲ್ಲಿ ಭಾರತೀಯ ಬ್ಯಾಡ್ಮಿಂಟನ್ ಒಕ್ಕೂಟ ಕೂಡ ಜೀವಮಾನದ ಪ್ರಶಸ್ತಿ ನೀಡಿ ಗೌರವಿಸಿತ್ತು.
2018ರಲ್ಲಿ ಈ ಪ್ರಶಸ್ತಿಯನ್ನು ನೀಡಲು ಬಿಎಐ ನಿರ್ಧರಿಸಿದ್ದು, ಮೊದಲ ಪ್ರಶಸ್ತಿಯನ್ನ ಕನ್ನಡಿಗರಾದ ಪ್ರಕಾಶ್ ಪಡುಕೋಣೆ ಪಡೆದುಕೊಂಡಿದ್ದರು. ಈ ಪ್ರಶಸ್ತಿ ಪಡೆದವರೂ 10 ಲಕ್ಷ ರೂ ನಗದನ್ನು ಪಡೆಯಲಿದ್ದಾರೆ.
ಪಡುಕೋಣೆ 1978ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನ, 1980ರಲ್ಲಿ ಡ್ಯಾನಿಸ್ ಒಪನ್ ಮತ್ತು ಸ್ವೀಡಿಸ್ ಓಪನ್ ಗೆದ್ದಿದ್ದಾರೆ. ಪ್ರಕಾಶ್ ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ ಗೆದ್ದ ಏಕೈಕ ಭಾರತೀಯ ಶಟ್ಲರ್ ಆಗಿದ್ದಾರೆ.
ಇದನ್ನೂ ಓದಿ:Asian Archery Championships: ಆರ್ಚರಿ ಸಿಂಗಲ್ಸ್ನಲ್ಲಿ ಚಿನ್ನ, ಡಬಲ್ಸ್ನಲ್ಲಿ ಬೆಳ್ಳಿ ಗೆದ್ದ ಜ್ಯೋತಿ ಸುರೇಖ