ETV Bharat / sports

ಮೀರಾಬಾಯಿ ಚಾನು ಸ್ಫೂರ್ತಿ: ಕಾಶ್ಮೀರಿ ಯುವತಿಗೆ ಒಲಿಂಪಿಕ್ಸ್​​ನಲ್ಲಿ ಭಾರತ ಪ್ರತಿನಿಧಿಸುವ ಗುರಿ

ಜಮ್ಮು-ಕಾಶ್ಮೀರದ ಕೆಲವೊಂದು ಪ್ರದೇಶಗಳಲ್ಲಿ ಮಹಿಳೆಯರು ಮನೆಯಿಂದ ಹೊರಬರಲು ಹರಸಾಹಸ ಪಡುವಂತಹ ಸ್ಥಿತಿ ಈಗಲೂ ಇದೆ. ಆದರೆ, ಓರ್ವ ಯುವತಿ ಒಲಿಂಪಿಕ್ಸ್​​​ನಲ್ಲಿ ಭಾರತ ಪ್ರತಿನಿಧಿಸುವ ಕನಸು ಕಾಣುತ್ತಿದ್ದು, ಅದಕ್ಕಾಗಿ ಕಠಿಣ ತರಬೇತಿ ಪಡೆಯುತ್ತಿದ್ದಾರೆ.

Kashmiri woman weightlifter
Kashmiri woman weightlifter
author img

By

Published : Jul 2, 2022, 8:16 PM IST

ಬದ್ಗಾಂ​(ಜಮ್ಮು-ಕಾಶ್ಮೀರ): ಜಮ್ಮು-ಕಾಶ್ಮೀರ ಎಂದಾಕ್ಷಣ ನೆನಪಾಗುವುದು ಗುಂಡಿನ ಸದ್ದು. ಭಯೋತ್ಪಾದಕರ ಉಪಟಳ. ಈ ಎಲ್ಲ ಸಮಸ್ಯೆ ಎದುರಿಸಿ ಈ ಪ್ರದೇಶದಿಂದ ಬೆರಳೆಣಿಕೆಯಷ್ಟು ಮಾತ್ರ ಕ್ರೀಡಾ ಪ್ರತಿಭೆಗಳು ಹೊರಹೊಮ್ಮುತ್ತಿದ್ದಾರೆ. ಇದೀಗ ಅದೇ ಸಾಲಿನಲ್ಲಿ 19 ವರ್ಷದ ಕಾಶ್ಮೀರಿ ಯುವತಿ ಸಲ್ಬೀನಾ ಶಲ್ಲಾ ಕೂಡ ಇದ್ದಾರೆ. ವೇಟ್​​ ಲಿಫ್ಟರ್​​ ಆಗಿರುವ ಇವರು ಒಲಿಂಪಿಕ್ಸ್​​​ನಲ್ಲಿ ಭಾರತ ಪ್ರತಿನಿಧಿಸುವ ಕನಸು ಕಾಣ್ತಿದ್ದಾರೆ.

ಒಲಿಂಪಿಕ್ಸ್​​ನಲ್ಲಿ ಭಾರತ ಪ್ರತಿನಿಧಿಸುವ ಕನಸು ಕಾಣ್ತಿರುವ ಕಾಶ್ಮೀರಿ ಯುವತಿ

ಒಲಿಂಪಿಕ್ಸ್​​ನಲ್ಲಿ ಭಾರತ ಪ್ರತಿನಿಧಿಸುವ ಕನಸು ಕಾಣುತ್ತಿರುವ 19 ವರ್ಷದ ಕಾಶ್ಮೀರಿ ಯುವತಿ ಸಲ್ಬೀನಾ ಶಲ್ಲಾ ಪ್ರತಿದಿನ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಅವರಿಗೆ ಕೋಚ್​ ಶೌಕತ್​ ಮಜೀದ್ ತರಬೇತಿ ನೀಡ್ತಿದ್ದಾರೆ. 2020ರ ಟೋಕಿಯೋ ಒಲಿಂಪಿಕ್ಸ್​​​ನಲ್ಲಿ ಭಾರತ ಪ್ರತಿನಿಧಿಸಿ 49 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು ಇವರಿಗೆ ಸ್ಫೂರ್ತಿಯಾಗಿದ್ದು, ಅವರಂತೆ ದೇಶಕ್ಕಾಗಿ ಪದಕ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಮೂಲತಃ ಜಮ್ಮು-ಕಾಶ್ಮೀರದ ಬದ್ಗಾಂನವರಾಗಿರುವ ಸಲ್ಬೀನಾ ಕಠಿಣ ತರಬೇತಿ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಕೋಳಿಗೆ ಗೌನ್, ಸರ ತೊಡಿಸಿ ಹುಟ್ದಬ್ಬ ಆಚರಿಸಿದ ಯುವಕ- ಕೇಕ್​ನಲ್ಲಿ ಮುಳುಗೆದ್ದ 'ಮೋಟು' - ವಿಡಿಯೋ

ಇದಕ್ಕೆ ಸಂಬಂಧಿಸಿದಂತೆ 'ಈಟಿವಿ ಭಾರತ' ಜೊತೆ ಸಲ್ಬೀನಾ ಶಲ್ಲಾ ಮಾತನಾಡಿದ್ದು, ಕಳೆದ ಒಂದು ವರ್ಷದಿಂದ ತರಬೇತಿ ಪಡೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ ತಾವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾಗಿಯಾಗಲು ಸಿದ್ಧಗೊಂಡಿದ್ದು, ಕುಟುಂಬದಿಂದ ಎಲ್ಲ ರೀತಿಯ ಸಹಕಾರ ಸಿಗುತ್ತಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.