ನವದೆಹಲಿ : ಭಾರತೀಯ ಬಾಕ್ಸರ್ಗಳಾದ ಗೋವಿಂದ್ ಸಹನಿ(48 ಕೆಜಿ), ಅನಂತ್ ಪ್ರಹ್ಲಾದ್ ಚೋಪ್ಡೆ(54 ಕೆಜಿ) ಮತ್ತು ಸುಮಿತ್(75ಕೆಜಿ) ಥಾಯ್ಲೆಂಡ್ ಓಪನ್ನಲ್ಲಿ ಭರ್ಜರಿ ಪ್ರದರ್ಶನ ತೋರಿ ಭಾರತಕ್ಕೆ ಚಿನ್ನದ ಪದಕಗಳನ್ನು ತಂದುಕೊಟ್ಟಿದ್ದಾರೆ. ಶನಿವಾರ ನಡೆದ ಬೌಟ್ಸ್ನಲ್ಲಿ ಸಹನಿ ಮತ್ತು ಸುಮಿತ್ ತಮ್ಮ ಪ್ರತಿಸ್ಪರ್ದಿಗಳ ವಿರುದ್ಧ ಆರಂಭ ಮತ್ತು ಅಂತ್ಯ ಎರಡಲ್ಲೂ ಪ್ರಾಬಲ್ಯಯುತ ಪ್ರದರ್ಶನ ತೋರಿ 5-0 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿದರು.
ಇವರಿಬ್ಬರು ಸ್ಥಳೀಯ ಬಾಕ್ಸರ್ಗಳಾದ ನಟ್ಟಫಾನ್ ಥುಮ್ಚರೋಯೆನ್ ಮತ್ತು ಪೀಟ್ಪತ್ ಯೆಸುಂಗ್ನೋ ವಿರುದ್ಧ ಗೆಲುವು ಸಾಧಿಸಿದರು. 54 ಕೆಜಿ ವಿಭಾಗದಲ್ಲಿ ಅನಂತ ಥಾಯ್ಲಂಡ್ ಅಗ್ರ ಬಾಕ್ಸರ್ ವ ರಿತ್ತಿಯಾಮನ್ ಸೇಂಗ್ಸಾವಾಂಗ್ ವಿರುದ್ಧ ಡಿಫೆನ್ಸ್ ಮತ್ತು ಆಕ್ರಮಣಕಾರಿ ಮಿಶ್ರಿತ ಪ್ರದರ್ಶನ ತೋರಿ ಅವಿರೋಧ ಜಯ ಸಾಧಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.
ಆದರೆ, ಅಮಿತ್ ಪಂಘಲ್(52ಕೆಜಿ),ಮೋನಿಕಾ(48 ಕೆಜಿ),ವರೀಂದರ್ ಸಿಂಗ್(60ಕೆಜಿ) ಕೆ ಜಿ ಆಶಿಷ್ ಕುಮಾರ್(81ಕೆಜಿ) ಫೈನಲ್ನಲ್ಲಿ ಸೋಲು ಕಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಮನೀಶಾ(57ಕೆಜಿ), ಪೂಜಾ(69ಕೆಜಿ) ಮತ್ತು ಭಾಗ್ಯವತಿ ಕಚಾರಿ(75 ಕೆಜಿ) ಕಂಚಿನ ಪದಕ ಗೆದ್ದರು. ಈ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದವರಿಗೆ 2000 ಅಮೆರಿಕನ್ ಡಾಲರ್ ಮತ್ತು ಬೆಳ್ಳಿ ಹಾಗೂ ಕಂಚು ಗೆದ್ದವರಿಗೆ ಕ್ರಮವಾಗಿ 1000 ಮತ್ತು 500 ಡಾಲರ್ ಬಹುಮಾನ ನೀಡಲಾಗುತ್ತದೆ.
ಇದನ್ನೂ ಓದಿ:ಧೋನಿ ಸಾಧನೆಯನ್ನು ಸರಿಗಟ್ಟಿದ ತೆವಾಟಿಯಾ.. ಯಾವ ದಾಖಲೆ ಅದು?