ಟೋಕಿಯೋ: ಭಾರತದ ಸ್ಟಾರ್ ಬಾಕ್ಸರ್ ವಿಕಾಶ್ ಕ್ರಿಶನ್ ಟೋಕಿಯೋ ಒಲಿಂಪಿಕ್ಸ್ನಲ್ಲಿ ಮೊದಲ ಸುತ್ತಿನ ವಾಲ್ಟರ್ವೇಟ್ ವಿಭಾಗದಲ್ಲಿ ಸೋಲು ಕಂಡು ನಿರಾಸೆಯನುಭವಿಸಿದ್ದಾರೆ.
ಕೊಕುಗಿಕಾನ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ 29 ವರ್ಷದ ಭಾರತೀಯ ಬಾಕ್ಸರ್ ಜಪಾನ್ನ ಮೆನ್ಸಾ ಒಕಾಜಾವಾ ವಿರುದ್ಧ 0-5ರಲ್ಲಿ ಸೋಲು ಕಂಡರು.
ಮೊದಲ ಸುತ್ತಿನಲ್ಲಿ ಎಲ್ಲ 5 ತೀರ್ಪುಗಾರರು ಜಪಾನ್ ಬಾಕ್ಸರ್ಗೆ 10 ಅಂಕ ನೀಡಿದರೆ, ವಿಕಾಶ್ಗೆ ಎಲ್ಲರೂ 9 ಅಂಕ ನೀಡಿದರು. ಹಾಗಾಗಿ ಮೊದಲ ಸುತ್ತಿನಲ್ಲೇ ಹಿನ್ನಡೆಯನುಭವಿಸಿದರು. ನಂತರ ಎರಡನೇ ಸುತ್ತಿನಲ್ಲೂ ಅದೇ ಮುಂದುವರಿಯಿತು. ಕೊನೆಯ ಹಾಗೂ ನಿರ್ಣಾಯಕ ಸುತ್ತಿನಲ್ಲಿ ಕ್ರಿಶನ್ ಜಪಾನ್ ಎದುರಾಳಿಯನ್ನು ಮಣಿಸಲು ಸಾಧ್ಯವಾಗದ ಕಾರಣ ಟೋಕಿಯೋ ಒಲಿಂಪಿಕ್ಸ್ನಿಂದ ಹೊರಬಿದ್ದರು.
ಭಾನುವಾರದ ಪಂದ್ಯಗಳಲ್ಲಿ ಮೇರಿ ಕೋಮ್ ಮತ್ತು ಮನೀಶ್ ಕೌಶಿಕ್ ಕಣಕ್ಕಿಳಿಯಲಿದ್ದಾರೆ. ಪದಕ ಭರವಸೆಯ ಬಾಕ್ಸರ್ ಅಮಿತ್ ಪಂಘಲ್ಗೆ ಮೊದಲ ಸುತ್ತಿನಲ್ಲಿ ಬೈ ಸಿಕ್ಕಿದೆ.
ಇದನ್ನು ಓದಿ:Tokyo Olympics: ಈ ಬೆಳ್ಳಿ ಪದಕ ಇಡೀ ದೇಶಕ್ಕೆ ಅರ್ಪಣೆ : ಮೀರಾಬಾಯಿ ಚಾನು