ನವದೆಹಲಿ: ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ ಬಂದಿದೆ. 75 ಕೆಜಿ ವಿಭಾಗದಲ್ಲಿ ಸ್ಟಾರ್ ಬಾಕ್ಸರ್ ಹಾಗೂ ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಈ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ನಾಲ್ಕನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ.
ಇದನ್ನೂ ಓದಿ: ಬಾಕ್ಸಿಂಗ್ ಚಾಂಪಿಯನ್‌ಶಿಪ್: ಲೈಟ್ ಫ್ಲೈವೇಟ್ ವಿಭಾಗದಲ್ಲಿ ನಿಖತ್ ಜರೀನ್ಗೆ ಚಿನ್ನ
ಇಲ್ಲಿನ ಕೆಡಿ ಜಾಧವ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬಾಕ್ಸರ್ ಕೈಟ್ಲಿನ್ ಪಾರ್ಕರ್ ಅವರನ್ನು ಲವ್ಲಿನಾ ಸೋಲಿಸಿ ಚಿನ್ನದ ಪದಕ ಗೆದ್ದರು. ಪಂದ್ಯದುದ್ದಕ್ಕೂ ಎದುರಾಳಿಯನ್ನು ಲಯದಿಂದಲೇ ಎದುರಿಸಿದ ಲವ್ಲಿನಾ ಎಲ್ಲ ಮೂರು ಸುತ್ತುಗಳಲ್ಲಿ ಉತ್ತಮವಾಗಿ ಆಡಿದರು. ಲವ್ಲಿನಾ ತಮ್ಮ ಆಕ್ರಮಣದ ಮೂಲಕದ ಆಸ್ಟ್ರೇಲಿಯಾದ ಬಾಕ್ಸರ್‌ಗೆ ಹೆಚ್ಚಿನ ಅವಕಾಶಗಳನ್ನು ನೀಡಲಿಲ್ಲ. ಪರಿಣಾಮ 5-2 ಪಾಯಿಂಟ್ಗಳ ಅಂತರದಿಂದ ಬಂಗಾರದ ಪದಕಕ್ಕೆ ಭಾರತೀಯ ಬಾಕ್ಸರ್ ಕೊರಳೊಡ್ಡಿದರು.
-
Newly crowned world champion Lovlina after scripting history 🗣️🔥@AjaySingh_SG l @debojo_m#itshertime #WorldChampionships #WWCHDelhi @Media_SAI @anandmahindra @IBA_Boxing @Mahindra_Auto @MahindraRise @NehaAnandBrahma @LovlinaBorgohai pic.twitter.com/iggUkRbEpz
— Boxing Federation (@BFI_official) March 26, 2023 " class="align-text-top noRightClick twitterSection" data="
">Newly crowned world champion Lovlina after scripting history 🗣️🔥@AjaySingh_SG l @debojo_m#itshertime #WorldChampionships #WWCHDelhi @Media_SAI @anandmahindra @IBA_Boxing @Mahindra_Auto @MahindraRise @NehaAnandBrahma @LovlinaBorgohai pic.twitter.com/iggUkRbEpz
— Boxing Federation (@BFI_official) March 26, 2023Newly crowned world champion Lovlina after scripting history 🗣️🔥@AjaySingh_SG l @debojo_m#itshertime #WorldChampionships #WWCHDelhi @Media_SAI @anandmahindra @IBA_Boxing @Mahindra_Auto @MahindraRise @NehaAnandBrahma @LovlinaBorgohai pic.twitter.com/iggUkRbEpz
— Boxing Federation (@BFI_official) March 26, 2023
ಭಾರತಕ್ಕೆ ನಾಲ್ಕನೇ ಚಿನ್ನದ ಪದಕ: ನಿನ್ನೆಯಷ್ಟೇ 48 ಕೆಜಿ ವಿಭಾಗದಲ್ಲಿ ನಿತು ಘಂಘಾಸ್ ಅವರು ಮಂಗೋಲಿಯಾದ ಲುತ್ಸೈಖಾನ್ ಅಲ್ಟಾಂಟ್ಸೆಟ್ಸೆಗ್ ಅವರನ್ನು 5-0 ಅಂಕಗಳೊಂದಿಗೆ ಸೋಲಿಸುವ ಮೂಲಕ ತಮ್ಮ ಮೊದಲ ವಿಶ್ವ ಚಾಂಪಿಯನ್‌ಶಿಪ್ ಪದಕವನ್ನು ಗೆದ್ದಿದ್ದರು. ಮತ್ತೊಂದೆಡೆ, 81 ಕೆಜಿ ವಿಭಾಗದಲ್ಲಿ ಸ್ವೀಟಿ ಬೂರಾ ಅವರು ಚೀನಾದ ವಾಂಗ್ ಲೀನಾ ವಿರುದ್ಧ 4-3 ಪಾಯಿಂಟ್‌ಗಳಿಂದ ಗೆಲುವು ಸಾಧಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಇಂದು ನಿಖತ್ ಜರೀನ್ ಲೈಟ್ ಫ್ಲೈವೇಟ್ನ 48-50 ಕೆಜಿ ವಿಭಾಗದಲ್ಲಿ ವಿಯೆಟ್ನಾಂನ ನ್ಗುಯೆನ್ ಥಿ ಟಾಮ್ ಅವರನ್ನು 5-0 ಅಂತರದಿಂದ ಸೋಲಿಸಿ ವಿಶ್ವ ಚಾಂಪಿಯನ್ ಆಗಿ ತಮ್ಮ ಕಿರೀಟವನ್ನು ಉಳಿಸಿಕೊಂಡಿದ್ದರು. ಇದರ ಬೆನ್ನಲ್ಲೇ 75 ಕೆಜಿ ವಿಭಾಗದಲ್ಲಿ ಸ್ಟಾರ್ ಬಾಕ್ಸರ್ ಲವ್ಲಿನಾ ಕೂಡ ಚಿನ್ನದ ಪದಕ ಗೆಲ್ಲುವ ಮೂಲಕ ದೇಶಕ್ಕೆ ನಾಲ್ಕನೇ ಚಿನ್ನದ ಪದಕವನ್ನು ತಂದಿದ್ದಾರೆ. ಈ ನಾಲ್ವರು ಬಾಕ್ಸರ್‌ಗಳು ಫೈನಲ್‌ಗೆ ಪ್ರವೇಶಿಸಿದಾಗಿನಿಂದ ಎಲ್ಲರೂ ಚಿನ್ನದ ನಿರೀಕ್ಷೆಯಲ್ಲಿದ್ದರು. ಅಂತೆಯೇ, ನಾಲ್ವರು ಬಾಕ್ಸರ್‌ಗಳು ಕೂಡ ದೇಶದ ಜನತೆಯನ್ನು ನಿರಾಸೆಗೊಳಿಸದೆ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ಲವ್ಲಿನಾ ಹಿನ್ನೆಲೆ: ಅಸ್ಸೋಂನ ಗೋಲಾಘಾಟ್ ಜಿಲ್ಲೆಯ ಲವ್ಲಿನಾ ಟೋಕಿಯೊ 2020 ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದು ಇತಿಹಾಸವನ್ನು ಸೃಷ್ಟಿಸಿದ್ದರು. ಶ್ರೇಷ್ಠ ಬಾಕ್ಸರ್‌ಗಳಾದ ಎಂಸಿ ಮೇರಿ ಕೋಮ್ ಮತ್ತು ವಿಜೇಂದರ್ ಸಿಂಗ್ ನಂತರ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಒಲಿಂಪಿಕ್ ಪದಕ ತಂದುಕೊಟ್ಟ ಮೂರನೇ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಲವ್ಲಿನಾ ಪಾತ್ರರಾಗಿದ್ದರು. 2018 ಮತ್ತು 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕಗಳನ್ನು ಲವ್ಲಿನಾ ಗೆದ್ದಿದ್ದರು. ಅಲ್ಲದೇ, 2017 ಮತ್ತು 2021ರ ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ ಎರಡು ಕಂಚಿನ ಪದಕಗಳಿಗೆ ಮುತ್ತಿಕ್ಕಿದ್ದರು.
ಇದನ್ನೂ ಓದಿ: ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಐತಿಹಾಸಿಕ ಚಿನ್ನದ ಪದಕ ಗೆದ್ದ ನಿತು - ಸ್ವೀಟಿ ಬೂರಾ