ETV Bharat / sports

ಬಾಕ್ಸಮ್ ಇಂಟರ್​ನ್ಯಾಷನಲ್​​​: ಪದಕ ಖಚಿತಪಡಿಸಿದ ಪೂಜಾ, ಮೇರಿ ಕೋಮ್​

ಬುಧವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಒಲಿಂಪಿಕ್​ ಬಾಂಡ್​ ಬಾಕ್ಸರ್​ ಪೂಜಾ, ಇಟಲಿಯ ಅಸುಂಟ ಕ್ಯಾನ್ಫೋರಾ ವಿರುದ್ಧ ಗೆಲ್ಲುವ ಮೂಲಕ ಸೆಮಿಫೈನಲ್ ಪ್ರವೇಶ ಪಡೆದರು.

ಬಾಕ್ಸಮ್ ಇಂಟರ್​ನ್ಯಾಷನಲ್​
ಪೂಜಾ ರಾಣಿ
author img

By

Published : Mar 4, 2021, 4:52 PM IST

ಕಾಸ್ಟೆಲೊನ್​​: ಏಷ್ಯನ್ ಚಾಂಪಿಯನ್​ ಪೂಜಾ ರಾಣಿ (75ಕೆ.ಜಿ) ಸ್ಪೇನ್​ನ ಕ್ಯಾಸ್ಟೆಲ್ಲನ್​ನಲ್ಲಿ ನಡೆಯುತ್ತಿರುವ 35ನೇ ಬಾಕ್ಸಮ್​ ಇಂಟರ್​ನ್ಯಾಷನಲ್ ಬಾಕ್ಸಿಂಗ್ ಟೂರ್ನಮೆಂಟ್​ನಲ್ಲಿ ಸೆಮಿಫೈನಲ್​ ಪ್ರವೇಶಿಸುವ ಮೂಲಕ ಪದಕ ಖಚಿತಪಡಿಸಿದ್ದಾರೆ. ಆದರೆ ಎರಡು ಬಾರಿಯ ಕಂಚಿನ ಪದಕ ವಿಜೇತ ಲೊವ್ಲಿನಾ ಬೊರ್ಗೊಹೈನ್ ಕ್ವಾರ್ಟರ್​ ಫೈನಲ್​ನಲ್ಲಿ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದರು.

ಬುಧವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಒಲಿಂಪಿಕ್​ ಬಾಂಡ್​ ಬಾಕ್ಸರ್​ ಪೂಜಾ ಇಟಲಿಯ ಅಸುಂಟ ಕ್ಯಾನ್ಫೋರಾ ವಿರುದ್ಧ ಗೆಲ್ಲುವ ಮೂಲಕ ಸೆಮಿಫೈನಲ್ ಪ್ರವೇಶ ಪಡೆದರು.

ಮೇರಿ ಕೋಮ್​
ಮೇರಿ ಕೋಮ್​

ಇದಕ್ಕೂ ಮುನ್ನ ನಡೆದ ಪಂದ್ಯಗಳಲ್ಲಿ ಮೇರಿಕೋಮ್ ​(51 ಕೆ.ಜಿ), ಸಿಮ್ರಾನ್​ಜಿತ್​ ಕೌರ್ ​(60 ಕೆ.ಜಿ), ಜಾಸ್ಮಿನ್ ​(57 ಕೆ.ಜಿ) ಸೆಮಿಫೈನಲ್ ಪ್ರವೇಶಿಸಿ ಪದಕ ಖಾತ್ರಿ ಮಾಡಿಕೊಂಡರು.

ಲೊವ್ಲಿನಾ ಬೊರ್ಗೊಹೈನ್ ಜೊತೆಗೆ ಮನಿಶಾ ಮೌನ್ ​(57 ಕೆ.ಜಿ) ಕ್ವಾರ್ಟರ್​ ಫೈನಲ್​ನಲ್ಲಿ ಸೋಲು ಕಂಡಿದ್ದಾರೆ. ಇಂದು ಭಾರತದ 8 ಪುರುಷ ಬಾಕ್ಸರ್​ಗಳು ಕಣಕ್ಕಿಳಿಯಲಿದ್ದಾರೆ. ಈ ಟೂರ್ನಿಯಲ್ಲಿ 17 ದೇಶದಗಳ ಬಾಕ್ಸರ್​ಗಳು ಸ್ಪರ್ಧೆಯಲ್ಲಿದ್ದಾರೆ.

ಇದನ್ನೂ ಓದಿ:ಅರ್ಜೆಂಟೀನಾ ಓಪನ್; 2ನೇ ಶ್ರೇಯಾಂಕದ ಗ್ಯಾರಿಂಟೋರನ್ನು ಮಣಿಸಿದ ಭಾರತದ ಸುಮಿತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.