ಕಿಂಗ್ಸ್ಟನ್ : ವಿಶ್ವದ ವೇಗದ ಓಟಗಾರ, ಒಲಿಂಪಿಕ್ಸ್ನಲ್ಲಿ 8 ಚಿನ್ನದ ಪದಕ ಗೆದ್ದಿರುವ ಜಮೈಕಾದ ಉಸೇನ್ ಬೋಲ್ಟ್ ತಮ್ಮ ಮಗಳಿಗೆ ಒಲಿಂಪಿಯಾ ಲೈಟ್ನಿಂಗ್ ಬೋಲ್ಟ್ ಎಂದು ನಾಮಕರಣ ಮಾಡಿರುವುದಾಗಿ ತಿಳಿಸಿದ್ದಾರೆ.
ಇನ್ಸ್ಸ್ಟಾಗ್ರಾಮ್ನಲ್ಲಿ 21ನೇ ವರ್ಷಕ್ಕೆ ಕಾಲಿರಿಸಿದ ಪತ್ನಿಗೆ ಶುಭಾಶಯ ಕೋರಿರುವ ಬೋಲ್ಟ್, ತಮ್ಮ ಮಡದಿಯ ಮುಖದಲ್ಲಿ ನಗು ಸದಾ ಇರುವ ಹಾಗೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ. ನಮ್ಮ ಮಗಳ ಜೊತೆ ಹೊಸ ಅಧ್ಯಾಯ ಆರಂಭಿಸಿದ್ದೇವೆ. ಭವಿಷ್ಯವನ್ನ ನಾವು ಎದುರು ನೋಡುತ್ತಿದ್ದೇವೆ. ನಾನು ಈ ಕುಟಂಬದ ಆಧಾರ ಸ್ತಂಭವಾಗಿರುತ್ತೇನೆ. ಐ ಲವ್ ಯು, 21ನೇ ಜನ್ಮದಿನದ ಶುಭಾಶಯ ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಇದೇ ಸಂದರ್ಭದಲ್ಲಿ ವಿಶ್ವದ ವೇಗದ ಓಟಗಾರ ಬೋಲ್ಟ್ ಮೇ 18ರಂದು ಜನಿಸಿರುವ ತಮ್ಮ ಮಗಳ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ. ಜೊತೆಗೆ ಮಗಳಿಗೆ ಒಲಿಂಪಿಯಾ ಲೈಟ್ನಿಂಗ್ ಬೋಲ್ಟ್ ಎಂದು ನಾಮಕರಣ ಮಾಡಿರುವುದಾಗಿ ತಿಳಿಸಿದ್ದಾರೆ.