ನವದೆಹಲಿ: ಒಲಿಂಪಿಯನ್ ಸಿ.ಎ. ಭವಾನಿ ದೇವಿ ಸೋಮವಾರ ಚೀನಾದ ವುಕ್ಸಿಯಲ್ಲಿ ನಡೆದ ಏಷ್ಯನ್ ಫೆನ್ಸಿಂಗ್ ಚಾಂಪಿಯನ್‌ಶಿಪ್ ಮಹಿಳೆಯರ ಸೇಬರ್ ಸ್ಪರ್ಧೆಯ ಸೆಮಿಫೈನಲ್‌ನಲ್ಲಿ ಸೋಲನುಭವಿಸಿದರು. ಆದರೆ, ಕಂಚಿನ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ. ಈ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿಗೆ ಭಾರತಕ್ಕೆ ಪದಕ ಒಲಿದುಬಂದಿದೆ.
ಸೆಮಿಫೈನಲ್‌ನಲ್ಲಿ ಉಜ್ಬೇಕಿಸ್ತಾನ್‌ನ ಝೆನಾಬ್ ದೇಬೆಕೋವಾ ವಿರುದ್ಧದ ಕಠಿಣ ಹೋರಾಟದಲ್ಲಿ ಭವಾನಿ 14-15 ರಿಂದ ಸೋತರು. ಇದಕ್ಕೂ ಮೊದಲು ಭವಾನಿ, ಕ್ವಾರ್ಟರ್ ಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಜಪಾನ್‌ನ ಮಿಸಾಕಿ ಎಮುರಾ ಅವರನ್ನು 15-10 ರಿಂದ ಸೋಲಿಸಿದ್ದರು. ಇದು ಮಿಸಾಕಿ ವಿರುದ್ಧ ಭವಾನಿ ಅವರ ಮೊದಲ ಗೆಲುವಾಗಿತ್ತು.
-
HISTORY created 🔥 🔥
— India_AllSports (@India_AllSports) June 19, 2023 " class="align-text-top noRightClick twitterSection" data="
Bhavani Devi (WR 49) upsets reigning World Champion & World No. 1 Misaki Emura 15-10 to advance into Semis (Sabre) of Asian Fencing Championships.
➡️ India thus assured of historic 1st ever medal in Asian Fencing Championships. pic.twitter.com/HU3LQGJ9Np
">HISTORY created 🔥 🔥
— India_AllSports (@India_AllSports) June 19, 2023
Bhavani Devi (WR 49) upsets reigning World Champion & World No. 1 Misaki Emura 15-10 to advance into Semis (Sabre) of Asian Fencing Championships.
➡️ India thus assured of historic 1st ever medal in Asian Fencing Championships. pic.twitter.com/HU3LQGJ9NpHISTORY created 🔥 🔥
— India_AllSports (@India_AllSports) June 19, 2023
Bhavani Devi (WR 49) upsets reigning World Champion & World No. 1 Misaki Emura 15-10 to advance into Semis (Sabre) of Asian Fencing Championships.
➡️ India thus assured of historic 1st ever medal in Asian Fencing Championships. pic.twitter.com/HU3LQGJ9Np
ಭವಾನಿ 64ರ ಸುತ್ತಿನಲ್ಲಿ ಬೈ ಪಡೆದಿದ್ದರು. ನಂತರ ಮುಂದಿನ ಸುತ್ತಿನಲ್ಲಿ ಕಜಕಿಸ್ತಾನ್‌ನ ದೋಸ್ಪೆ ಕರೀನಾ ಅವರನ್ನು ಮಣಿಸಿದ್ದರು. ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಓಜಾಕಿ ಸೆರಿ ಅವರನ್ನು 15-11 ರಿಂದ ಪರಾಭವಗೊಳಿಸಿದ್ದರು.
ಕ್ವಾರ್ಟರ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಅನ್ನು ಮಣಿಸಿದ ನಂತರ ಮಾತನಾಡಿದ್ದ ಭವಾನಿ,"ವಿಶ್ವದ ಕೆಲವು ಅಗ್ರ ಶ್ರೇಯಾಂಕಿತ ಆಟಗಾರ್ತಿಯನ್ನು ಸೋಲಿಸುವುದು ನನ್ನ ಕನಸಾಗಿತ್ತು. ಮಿಸಾಕಿ ವಿರುದ್ಧ ಜಯ ಸಾಧಿಸಲು ನನಗೆ ತುಂಬಾ ಸಂತೋಷವಾಗಿದೆ" ಎಂದು ಹೇಳಿದ್ದರು.
“ಏಷ್ಯನ್‌ನಲ್ಲಿ ದೇಶಕ್ಕಾಗಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಇದು ಉತ್ತಮ ಕ್ಷಣವಾಗಿದೆ. ಮಿಸಾಕಿಯನ್ನು ಸೋಲಿಸುವುದು ತುಂಬಾ ದೊಡ್ಡದಾಗಿದೆ ಏಕೆಂದರೆ ಅವಳು ತುಂಬಾ ಒಳ್ಳೆಯ ಮತ್ತು ಸ್ಥಿರವಾದ ಫೆನ್ಸರ್ ಆಗಿದ್ದಾಳೆ. ನಾನು ಹಿಂದಿನ ಏಷ್ಯನ್‌ನಲ್ಲಿ ಮಿಸಾಕ್‌ಗೆ 16 ರ ಸುತ್ತಿನಲ್ಲಿ ಸೋತಿದ್ದೆ. ಆಕೆ ವಿರುದ್ಧ ಒಂದು ಯೋಜನೆಯೊಂದಿಗೆ ಹೋಗಿದ್ದೆ ಮತ್ತು ಯಶಸ್ಸು ಕಂಡಿದ್ದೇನೆ” ಎಂದು ಸಂತಸ ವ್ಯಕ್ತಪಡಿಸಿದ್ದರು.
-
Olympian C A Bhavani Devi creates history, wins India's first-ever medal at Asian Fencing Championships -- a bronze in Wuxi, China
— Press Trust of India (@PTI_News) June 19, 2023 " class="align-text-top noRightClick twitterSection" data="
">Olympian C A Bhavani Devi creates history, wins India's first-ever medal at Asian Fencing Championships -- a bronze in Wuxi, China
— Press Trust of India (@PTI_News) June 19, 2023Olympian C A Bhavani Devi creates history, wins India's first-ever medal at Asian Fencing Championships -- a bronze in Wuxi, China
— Press Trust of India (@PTI_News) June 19, 2023
ಇದನ್ನೂ ಓದಿ: ODI World Cup: ಏಕದಿನ ವಿಶ್ವಕಪ್ ಕ್ರಿಕೆಟ್- ಚೆನ್ನೈ, ಬೆಂಗಳೂರಿನಲ್ಲಿ ಪಂದ್ಯ ಆಡಲ್ಲ ಎಂದ ಪಾಕಿಸ್ತಾನ!
ಭವಾನಿ ಐತಿಹಾಸಿಕ ಸಾಧನೆಗೆ ಭಾರತೀಯ ಫೆನ್ಸಿಂಗ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಅಭಿನಂದನೆ ಸಲ್ಲಿಸಿದ್ದಾರೆ. ಮೆಹ್ತಾ ಪಿಟಿಐ ಜೊತೆಗೆ ಮಾತನಾಡಿ, "ಭಾರತೀಯ ಫೆನ್ಸಿಂಗ್‌ಗೆ ಇದು ಅತ್ಯಂತ ಹೆಮ್ಮೆಯ ದಿನ. ಈ ಹಿಂದೆ ಯಾರೂ ಸಾಧಿಸಲಾಗದ ಸಾಧನೆಯನ್ನು ಭವಾನಿ ಮಾಡಿದ್ದಾರೆ. ಪ್ರತಿಷ್ಠಿತ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿಆಕೆ ಪದಕ ಗೆದ್ದ ಮೊದಲ ಭಾರತೀಯ ಫೆನ್ಸರ್. ಎಲ್ಲರ ಪರವಾಗಿ ಶುಭಾಶಯ ಕೋರುತ್ತೇನೆ" ಎಂದು ಹೇಳಿದ್ದಾರೆ.
ಸೆಮಿಫೈನಲ್‌ನಲ್ಲಿ ಭವಾನಿ ದೇವಿ ಉತ್ತಮ ಫೈಟ್ ಕೊಟ್ಟು ಸೋಲನುಭವಿಸಿದ್ದಾರೆ. ಅವರು ಕೇವಲ ಒಂದು ಅಂಕದ ಅಂತರದಲ್ಲಿ ಸೋಲು ಕಂಡಿದ್ದಾರೆ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಖಡ್ಗಧಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಭವಾನಿ, ಟೋಕಿಯೋ ಗೇಮ್ಸ್‌ನಲ್ಲಿ 32ರ ಸುತ್ತಿನಲ್ಲಿ ಸೋಲು ಕಂಡಿದ್ದರು.
2022ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಕಾಮನ್ವೆಲ್ತ್ ಫೆನ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭವಾನಿ ದೇವಿ ಚಿನ್ನದ ಪದಕ ಗೆದ್ದಿದ್ದರು. ವೈಯಕ್ತಿಕ ಸೇಬರ್ ವಿಭಾಗದ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಎರಡನೇ ಶ್ರೇಯಾಂಕಿತ ವರೋನಿಕಾ ವೇಸ್ಲೆವಾ ವಿರುದ್ಧ 15-10ರ ಅಂತರದಿಂದ ಗೆಲುವು ದಾಖಲಿಸಿದ್ದರು.
ಇದನ್ನೂ ಓದಿ: Intercontinental Cup: ಲೆಬನಾನ್ ಮಣಿಸಿ ಇಂಟರ್‌ಕಾಂಟಿನೆಂಟಲ್ ಫುಟ್ಬಾಲ್ ಕಪ್ ಗೆದ್ದ ಭಾರತ