ಶೆಫೀಲ್ಡ್ (ಇಂಗ್ಲೆಂಡ್): ನಾಲ್ಕು ರಾಷ್ಟ್ರಗಳ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್‌ನ್ಯಾಶನಲ್ ಕೂಟದಲ್ಲಿ ವಿಶ್ವದ ನಂ.1 ಪುರುಷರ ಡಬಲ್ಸ್ ಜೋಡಿ ಪ್ರಮೋದ್ ಭಗತ್ ಮತ್ತು ಸುಕಾಂತ್ ಕದಮ್ ಎಸ್.ಎಲ್ 3 ಮತ್ತು ಎಸ್‌ಎಲ್ 4 ವಿಭಾಗದಲ್ಲಿ ಚಿನ್ನ ಗೆದ್ದರು. ಭಗತ್ ಸಿಂಗಲ್ಸ್ ಎಸ್‌ಎಲ್ 3 ವಿಭಾಗದಲ್ಲಿ ಬೆಳ್ಳಿ ಹಾಗೂ ಮಿಶ್ರ ಡಬಲ್ಸ್ ಎಸ್‌ಎಲ್ 3, ಎಸ್‌ಯು 5 ವಿಭಾಗದಲ್ಲಿ ಮನೀಶಾ ರಾಮದಾಸ್ ಅವರೊಂದಿಗೆ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಕದಮ್ ಸಿಂಗಲ್ಸ್ ಎಸ್‌ಎಲ್4 ವಿಭಾಗದಲ್ಲಿ ಕಂಚಿಗೆ ತೃಪ್ತಿಪಟ್ಟರು.
ಪುರುಷರ ಡಬಲ್ಸ್‌ನಲ್ಲಿ ಭಗತ್ ಮತ್ತು ಕದಮ್ ಭಾರತದ ದೀಪ್ ರಂಜನ್ ಬಿಸೋಯಿ ಮತ್ತು ಮನೋಜ್ ಸರ್ಕಾರ್ ಜೋಡಿಯನ್ನು 21-17, 21-17 ಪಾಯಿಂಟುಗಳ ಅಂತರದಿಂದ ಸೋಲಿಸಿ ಪ್ರಶಸ್ತಿ ಪಡೆದರು. ಸಿಂಗಲ್ಸ್‌ನಲ್ಲಿ ಭಗತ್ 8-21, 10-21 ರಲ್ಲಿ ಇಂಗ್ಲೆಂಡ್‌ನ ಡೇನಿಯಲ್ ಬೆಥೆಲ್ ಎದುರು ಪರಾಭವಗೊಂಡರು. ಮಿಶ್ರ ಡಬಲ್ಸ್‌ನಲ್ಲಿ ಭಗತ್ ಮತ್ತು ಮನಿಶಾ ರಾಮದಾಸ್ 17-21,17-21 ರಲ್ಲಿ ಇಂಡೋನೇಷ್ಯಾದ ಹಿಕ್ಮತ್ ರಾಮ್‌ದಾನಿ ಮತ್ತು ಲಿಯಾನಿ ರಾತ್ರಿ ಒಕ್ಟಿಲಾ ವಿರುದ್ಧ ಸೋಲುಂಡರು.
-
4 Nations Para-Badminton International 2023, England (2nd–6th August)🏸
— SAI Media (@Media_SAI) August 7, 2023 " class="align-text-top noRightClick twitterSection" data="
🇮🇳 won a total of 18 medals (3-🥇, 5-🥈, 10-🥉)
Gold Medalist 🥇
1. Krishna (TOPS Athlete) - MS SH6
2. Pramod (TOPS Athlete) & Sukant (TOPS Athlete) - MD SL 3-4
3. Manasi (TOPS Athlete) & Thulasi - WD… pic.twitter.com/cifp5O75C5
">4 Nations Para-Badminton International 2023, England (2nd–6th August)🏸
— SAI Media (@Media_SAI) August 7, 2023
🇮🇳 won a total of 18 medals (3-🥇, 5-🥈, 10-🥉)
Gold Medalist 🥇
1. Krishna (TOPS Athlete) - MS SH6
2. Pramod (TOPS Athlete) & Sukant (TOPS Athlete) - MD SL 3-4
3. Manasi (TOPS Athlete) & Thulasi - WD… pic.twitter.com/cifp5O75C54 Nations Para-Badminton International 2023, England (2nd–6th August)🏸
— SAI Media (@Media_SAI) August 7, 2023
🇮🇳 won a total of 18 medals (3-🥇, 5-🥈, 10-🥉)
Gold Medalist 🥇
1. Krishna (TOPS Athlete) - MS SH6
2. Pramod (TOPS Athlete) & Sukant (TOPS Athlete) - MD SL 3-4
3. Manasi (TOPS Athlete) & Thulasi - WD… pic.twitter.com/cifp5O75C5
ಪಂದ್ಯಗಳ ನಂತರ ಮಾತನಾಡಿದ ಭಗತ್, "ಡಬಲ್ಸ್ ಫಲಿತಾಂಶದಿಂದ ಸಂತಸವಾಗಿದೆ. ಆದರೆ, ನನ್ನ ಸಿಂಗಲ್ಸ್ ಮತ್ತು ಮಿಶ್ರ ಡಬಲ್ಸ್ ಫಲಿತಾಂಶ ಬೇಸರ ತರಿಸಿತು. ಡೇನಿಯಲ್ ಬೆಥೆಲ್ ಈ ವರ್ಷ ನನಗೆ ತುಂಬಾ ಸವಾಲಿನ ಎದುರಾಳಿಯಾಗಿದ್ದಾರೆ. ಅವರನ್ನು ಮಣಿಸಲು ನನ್ನ ಆಟದಲ್ಲಿ ಕೆಲವು ಸುಧಾರಣೆ ಮಾಡಿಕೊಳ್ಳಬೇಕಿದೆ. ನಾನು ತಕ್ಷಣ ತರಬೇತಿಗೆ ಹಿಂತಿರುಗುತ್ತೇನೆ. ನನ್ನ ದೌರ್ಬಲ್ಯಗಳ ಮೇಲೆ ಕೆಲಸ ಮಾಡುತ್ತೇನೆ" ಎಂಬ ಆತ್ಮವಿಶ್ವಾಸದ ನುಡಿಗಳನ್ನಾಡಿದರು.
ಕದಮ್ ಅವರು ಸೆಮಿಫೈನಲ್‌ನಲ್ಲಿ ಇಂಡೋನೇಷ್ಯಾದ ಫ್ರೆಡಿ ಸೆಟಿಯಾವಾನ್ ವಿರುದ್ಧ 21-17, 15-21, 16-21ರಿಂದ ಸೋಲನುಭವಿಸಿ ಸಿಂಗಲ್ಸ್‌ನಲ್ಲಿ ಕಂಚು ತೃಪ್ತಿಪಟ್ಟರು. ಎಸ್ಎಚ್6 ವಿಭಾಗದಲ್ಲಿ ಕೃಷ್ಣ ನಗರ್, ಮಾನಸಿ ಜೋಶಿ (ಎಸ್‌ಎಲ್ 3 ವಿಭಾಗ) ಮತ್ತು ತುಳಸಿಮತಿ ಮುರುಗೇಶನ್ (ಎಸ್‌ಯು 5 ವಿಭಾಗ) ಚಿನ್ನ ಸಂಪಾದಿಸಿದರು. ಇದೇ ವಿಭಾಗದಲ್ಲಿ ಪಾರುಲ್ ದಲ್ಸುಖ್ಭಾಯ್ ಪರ್ಮಾರ್ ಮತ್ತು ಶಾಂತಿಯಾ ವಿಶ್ವನಾಥನ್ ಭಾರತದ ಪರ ಪ್ರಶಸ್ತಿ ಲಭಿಸಿದೆ. ಮಹಿಳೆಯರ ಎಸ್ಎಚ್ 6 ವಿಭಾಗದಲ್ಲಿ ನಿತ್ಯಾ ಶ್ರೀ, ದೀಪ್ ರಂಜನ್ ಬಿಸೋಯಿ ಮತ್ತು ಮನೋಜ್ ಸರ್ಕಾರ್ ಬೆಳ್ಳಿ ಗೆದ್ದರೆ, ಪುರುಷರ ಎಸ್‌ಎಲ್3-ಎಸ್‌ಎಲ್4 ನಲ್ಲಿ ನಿತೇಶ್ ಮತ್ತು ತರುಣ್ ಕಂಚಿನ ಪದಕ ಪಡೆದರು.
ಎಸ್‌ಎಲ್3 ವಿಭಾಗದಲ್ಲಿ ಕುಮಾರ್ ನಿತೇಶ್ ಕಂಚು, ಮಹಿಳೆಯರ ಎಸ್‌ಎಲ್3 ವಿಭಾಗದಲ್ಲಿ ಮಾನಸಿ ಜೋಶಿ ಮತ್ತು ಮನ್‌ದೀಪ್ ಕೌರ್ ಕಂಚಿನ ಪದಕ ಹಾಗೂ ಮಿಶ್ರ ಡಬಲ್ಸ್ ಎಸ್‌ಯು5 ವಿಭಾಗದಲ್ಲಿ ಚಿರಾಗ್ ಬರೇತಾ ಮತ್ತು ರಾಜ್‌ಕುಮಾರ್ ಬೆಳ್ಳಿ ಪದಕ ಗೆದ್ದಿದ್ದಾರೆ. ಮಹಿಳೆಯರ ಎಸ್‌ಯು 5 ವಿಭಾಗದಲ್ಲಿ ರಾಮದಾಸ್ ಕಂಚು, ಕೃಷ್ಣಾ ನಗರ ಮತ್ತು ನಿತ್ಯ ಶ್ರೀ ಮಿಶ್ರ ಡಬಲ್ಸ್ ಎಸ್ಎಚ್ 6 ವಿಭಾಗದಲ್ಲಿ ಕಂಚು, ಪ್ರೇಮ್ ಕುಮಾರ್ ಅಲೆ ಮತ್ತು ಟರ್ಕಿಯ ಎಮಿನ್ ಸೆಕಿನ್ ಮಿಶ್ರ ಡಬಲ್ಸ್ ಡಬ್ಲ್ಯೂಎಚ್1- ಡಬ್ಲ್ಯೂಎಚ್2 ಈವೆಂಟ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಇದನ್ನೂ ಓದಿ: Para Badminton: ಪ್ಯಾರಾ ಬ್ಯಾಡ್ಮಿಂಟನ್ ಫೈನಲ್‌ಗೇರಿದ ಪ್ರಮೋದ್ ಭಗತ್, ಸುಕಾಂತ್ ಕದಮ್