ಗ್ರೇಟರ್ ನೋಯ್ಡಾ: ಆಲ್ರೌಂಡ್ ಪ್ರದರ್ಶನ ತೋರಿದ ಬೆಂಗಾಲ್ ವಾರಿಯರ್ಸ್, ತಮಿಳ್ ತಲೈವಾಸ್ ತಂಡವನ್ನು ಮಣಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ನೋಯ್ಡಾದ ಶಹೀದ್ ವಿಜಯ್ಸಿಂಗ್ ಪಥಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ನ 128 ನೇ ಪಂದ್ಯದಲ್ಲಿ ತಲೈವಾ ತಂಡವನ್ನು 33-29ರಲ್ಲಿ ಮಣಿಸುವ ಮೂಲಕ ಬೆಂಗಾಲ್ ತನ್ನ ಅಂಕವನ್ನು 83ಕ್ಕೇರಿಸಿಕೊಂಡಿದ್ದಲ್ಲದೆ ದಬಾಂಗ್ ಡೆಲ್ಲಿಯನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆಯಿತು.
-
.@tamilthalaivas put up a good fight, but @BengalWarriors edged past them in true #AamarWarriors fashion!
— ProKabaddi (@ProKabaddi) October 9, 2019 " class="align-text-top noRightClick twitterSection" data="
Catch all the action from a 🔥 #UPvHYD -
⏲️: LIVE, NOW
📺: Star Sports and Hotstar#IsseToughKuchNahi #VIVOProKabaddi pic.twitter.com/n6GSgr7JpH
">.@tamilthalaivas put up a good fight, but @BengalWarriors edged past them in true #AamarWarriors fashion!
— ProKabaddi (@ProKabaddi) October 9, 2019
Catch all the action from a 🔥 #UPvHYD -
⏲️: LIVE, NOW
📺: Star Sports and Hotstar#IsseToughKuchNahi #VIVOProKabaddi pic.twitter.com/n6GSgr7JpH.@tamilthalaivas put up a good fight, but @BengalWarriors edged past them in true #AamarWarriors fashion!
— ProKabaddi (@ProKabaddi) October 9, 2019
Catch all the action from a 🔥 #UPvHYD -
⏲️: LIVE, NOW
📺: Star Sports and Hotstar#IsseToughKuchNahi #VIVOProKabaddi pic.twitter.com/n6GSgr7JpH
ಆರಂಭದಿಂದಲೂ ರೋಚಕವಾಗಿದ್ದ ಪಂದ್ಯದಲ್ಲಿ ಎರಡೂ ತಂಡಗಳೂ ಸಮಬಲದ ಹೋರಾಟ ನಡೆಸಿದವು. ಪರಿಣಾಮ ಮೊದಲಾರ್ಧದ ವೇಳೆಗೆ ಎರಡೂ ತಂಡಗಳು ತಲಾ 13-13 ಅಂಕ ಪಡೆದಿದ್ದವು. ಆದರೆ ದ್ವಿತೀಯಾರ್ಧದಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ವಾರಿಯರ್ಸ್ 13-13 ಇದ್ದ ಅಂಕವನ್ನು 17-13ಕ್ಕೆ ಏರಿಸಿಕೊಂಡಿತು. ನಂತರ ಮುನ್ನಡೆಯನ್ನು ಕಾಯ್ದುಕೊಂಡು ಹೋಗಿ ಅಂತಿಮವಾಗಿ 33-29ರಿಂದ ಗೆಲುವು ಸಾಧಿಸಿತು.
ವಾರಿಯರ್ಸ್ ಪರ ನಬೀಬಕ್ಷ್ 7, ಸುಕೇಶ್ ಹೆಗ್ಡೆ 6, ರಿಂಕು ನರ್ವಲ್ 5, ಸೌರಭ್ ಪಾಟೀಲ್ 4, ಬಲ್ದೇವ್ ಸಿಂಗ್ 2 ಅಂಕ ಪಡೆದರು. ತಲೈವಾ ಪರ ರಾಹುಲ್ ಚೌದರಿ 7, ಸಾಗರ್ 5, ಅಜಿತ್ ಕುಮಾರ್ 4, ರಣ್ ಸಿಂಗ್ 3 ಅಂಕ ಪಡೆದರು.