ಇಂಡಿಯನ್ ವೆಲ್ಸ್ (ಯುಎಸ್ಎ): ವಿಶ್ವದ ನಂ.1 ಶ್ರೇಯಾಂಕದ ಟೆನಿಸ್ ಆಟಗಾರ್ತಿ ಪಟ್ಟವನ್ನು ಅಲಂಕರಿಸಿರುವ ಪೋಲೆಂಡ್‌ನ ಇಗಾ ಸ್ವಿಟೆಕ್, ಇದು ನನ್ನ ನಿರೀಕ್ಷೆಗಳಿಗೂ ಮೀರಿದ್ದಾಗಿದ್ದು, ಇದರಿಂದ ಮತ್ತಷ್ಟು ಹೆಚ್ಚಿನ ಒತ್ತಡ ಉಂಟಾಗುವಂತೆ ಮಾಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತ ಆಸ್ಟ್ರೇಲಿಯಾ ಟೆಸ್ಟ್ ಪಂದ್ಯ: ವೀಕ್ಷಕರಿಗೆ ಉಚಿತ ಪ್ರವೇಶದೊಂದಿಗೆ ಆಹಾರ ಪೊಟ್ಟಣ ವಿತರಣೆ
ಕಳೆದ ವರ್ಷ ಏಪ್ರಿಲ್ 4ರಂದು ಆಶ್ಲೀ ಬಾರ್ಟಿ ಅವರ ನಿವೃತ್ತಿ ನಂತರ ಇಗಾ ಸ್ವಿಟೆಕ್ ನಂ.1 ಶ್ರೇಯಾಂಕಕ್ಕೆ ಏರುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ 2023ರ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆದ ನಂ.2-ಶ್ರೇಯಾಂಕದ ಅರೀನಾ ಸಬಲೆಂಕಾ ಅವರಿಗಿಂತ 4,485 ಪಾಯಿಂಟ್ಗಳ ಮುನ್ನಡೆ ಹೊಂದಿದ್ದಾರೆ. ಈ ಬಗ್ಗೆ ಇಂಡಿಯನ್ ವೆಲ್ಸ್‌ನಲ್ಲಿ ಸುದ್ದಿಗಾರರಿಗೆ ಮಾತನಾಡಿದ ಅವರು, ಇಗಾ ಸ್ವಿಟೆಕ್, ವಿಶ್ವದ ನಂ.1 ಶ್ರೇಯಾಂಕ ಸಾಧ್ಯವಿಲ್ಲ ಎಂದು ನಾನು ಭಾವಿಸಿದ್ದೆ. ಇದು ನನ್ನ ನಿರೀಕ್ಷೆಗಳನ್ನು ಮೀರಿಸಿದೆ. ಯಾರಿಗಾದರೂ ಅಗ್ರ ಸ್ಥಾನಕ್ಕೆ ಏರಬೇಕೆಂಬ ಇಚ್ಛೆ ಇರುತ್ತದೆ. ಆದರೆ ಖಚಿತವಾಗಿ ನಾನು ಹೇಳುತ್ತೇನೆ. ಇದು ಬಹಳಷ್ಟು ಒತ್ತಡ ಮತ್ತು ನಿರೀಕ್ಷೆಗಳನ್ನು ಹುಟ್ಟು ಹಾಕುತ್ತದೆ ಎಂದು ತಿಳಿಸಿದ್ದಾರೆ.
21 ವರ್ಷ ವಯಸ್ಸಿನ ಸ್ವಿಟೆಕ್ ಕಳೆದ ವರ್ಷ ಸೆನ್ಸಾಷನಲ್ ಸೆಷನ್ ಹೊಂದಿದ್ದರು. ಒಟ್ಟು ಎಂಟು ಪ್ರಶಸ್ತಿಗಳನ್ನು ಗೆದ್ದರು. 37 ಪಂದ್ಯಗಳ ಗೆಲುವಿನ ನಾಗಲೋಟ ಕಂಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ದೋಹಾ ಮತ್ತು ದುಬೈ ಟೂರ್ನಿಗಳ ನಂತರ ಬಹಳ ಪ್ರಬಲವಾಗಿ ಎಂಬ ಭಾವಿಸಿದೆ. ಏಕೆಂದರೆ ನಾನು ಮಹಿಳಾ ಟೆನಿಸ್ ಅಸೋಸಿಯೇಷನ್ (ಡಬ್ಲ್ಯೂಟಿಎ) 500 ಟೂರ್ನಿ ಗೆದ್ದಿದ್ದೆ. ಡಬ್ಲ್ಯೂಟಿಎ 1000ರ ಟೂರ್ನಿ ಫೈನಲ್ಗೆ ಲಗ್ಗೆ ಇಟ್ಟಿದೆ. ಆದರೆ, ನಾನು ಫೈನಲ್‌ನಲ್ಲಿ ಸೋತಿದ್ದೇನೆ. ಆ ಪ್ರದರ್ಶನದಿಂದ ಜನರು ಸಂತೋಷವಾಗಿಲ್ಲ. ಜನರೇ ನನ್ನ ವಿಮರ್ಶಾತ್ಮಕರಾಗಿದ್ದಾರೆ ಎಂದರು.
ಇದನ್ನೂ ಓದಿ: ಭಾರತ ಮತ್ತು ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್: ಖವಾಜಾ ಶತಕ, ಗ್ರೀನ್ ಅರ್ಧಶತಕಕ್ಕೆ ಒಂದೇ ಹೆಜ್ಜೆ ಬಾಕಿ
ಹೀಗಾಗಿ ಕಳೆದ ವರ್ಷ ಈ ದೊಡ್ಡ ಸರಣಿಗೆ ಮುನ್ನ ನಾನು ನಾನು ಗೆದ್ದ ಎಲ್ಲ ಪಂದ್ಯಾವಳಿಗಳ ಯೋಚಿಸುವಂತೆ ಮಾಡಿತು. ಜನರ ಈ ಎಲ್ಲ ಕಾಮೆಂಟ್‌ಗಳನ್ನು ಗಮನಿಸಿದರೆ, ಅದು ಸಾಕಾಗುವುದಿಲ್ಲ ಎಂದು ನಾನು ಭಾವಿಸಿದ್ದೆ. ಅಷ್ಟೇ ಅಲ್ಲ, ಡಬ್ಲ್ಯೂಟಿಎ ಟೂರ್ ರೇಸ್‌ನಿಂದ ಡಬ್ಲ್ಯೂಟಿಎ ಫೈನಲ್ಸ್‌ಗೇರಿರುವ ಬಗ್ಗೆ ಗಮನಹರಿಸುವಂತಾಗಿದೆ ಎಂದು ಇಗಾ ಸ್ವಿಟೆಕ್ ಹೇಳಿದ್ದಾರೆ.
ಕಳೆದ ವರ್ಷ ಏನಾಯಿತು ಎಂಬುವುದರ ಕುರಿತು ನಾನು ಯೋಚಿಸಲು ಹೋಗುವುದಿಲ್ಲ. ಪ್ರತಿಯೊಂದು ಪಂದ್ಯಾವಳಿಯೂ ವಿಭಿನ್ನ ಕಥೆಯಾಗಿದೆ. ಪ್ರಾಮಾಣಿಕವಾಗಿ ನಾನು ಚೆನ್ನಾಗಿ ಆಡಿದರೆ, ಶ್ರೇಯಾಂಕದಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ, ಇದರರ್ಥ ನಾನು ನಂ.1ಸ್ಥಾನದಲ್ಲೇ ಉಳಿಯಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಗಾಯಗೊಂಡಿದ್ದ ಬೆತ್ ಮೂನಿ ಡಬ್ಲ್ಯುಪಿಎಲ್ನಿಂದ ಔಟ್.. ಗುಜರಾತ್ ತಂಡಕ್ಕೆ ಸ್ನೇಹ ರಾಣಾ ನಾಯಕಿ