ಸರ್ಬಿಯಾ: ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಬಜರಂಗ್ ಪೂನಿಯಾ ವಿನೂತನ ಇತಿಹಾಸ ಸೃಷ್ಟಿಸಿದರು. 65 ಕೆಜಿ ವಿಭಾಗದ ಪಂದ್ಯದಲ್ಲಿ ಕ್ವಾರ್ಟರ್ಫೈನಲ್ನಲ್ಲಿ ಇವರು ಸೋತಿದ್ದರು. ಆದರೆ, ರಿಪೇಚ್ ಸುತ್ತಿನ ಮೂಲಕ ಕಂಚಿಗೋಸ್ಕರ ಹೋರಾಟ ನಡೆಸಿ ಗೆದ್ದು ಬೀಗಿದ್ದಾರೆ. ಈ ಮೂಲಕ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ನಾಲ್ಕು ಪದಕ ಗೆದ್ದಿರುವ ಭಾರತದ ಏಕೈಕ ಕುಸ್ತಿಪಟುವಾಗಿ ಬಜರಂಗ್ ಹೊರಹೊಮ್ಮಿದರು.
-
4️⃣th Worlds medal for @BajrangPunia 🤼♂️
— SAI Media (@Media_SAI) September 18, 2022 " class="align-text-top noRightClick twitterSection" data="
Our Tokyo Olympics BRONZE medalist has bagged a BRONZE🥉 again. This time at the Wrestling World Championships (FS 65kg) in Belgrade🤩
His World Championships CV now:
SILVER - 2018
BRONZE - 2013, 2019, 2022#WrestleBelgrade pic.twitter.com/vF1kOEEflL
">4️⃣th Worlds medal for @BajrangPunia 🤼♂️
— SAI Media (@Media_SAI) September 18, 2022
Our Tokyo Olympics BRONZE medalist has bagged a BRONZE🥉 again. This time at the Wrestling World Championships (FS 65kg) in Belgrade🤩
His World Championships CV now:
SILVER - 2018
BRONZE - 2013, 2019, 2022#WrestleBelgrade pic.twitter.com/vF1kOEEflL4️⃣th Worlds medal for @BajrangPunia 🤼♂️
— SAI Media (@Media_SAI) September 18, 2022
Our Tokyo Olympics BRONZE medalist has bagged a BRONZE🥉 again. This time at the Wrestling World Championships (FS 65kg) in Belgrade🤩
His World Championships CV now:
SILVER - 2018
BRONZE - 2013, 2019, 2022#WrestleBelgrade pic.twitter.com/vF1kOEEflL
ಕಳೆದ ವರ್ಷ ಟೋಕಿಯೋ ಒಲಿಂಪಿಕ್ನಲ್ಲಿ ಕಂಚು ಗೆದ್ದಿದ್ದ ಬಜರಂಗ್, ಇದೀಗ ಪೋರ್ಟೋ ರಿಕೊದ ಸೆಬಾಸ್ಟಿಯನ್ ಸಿ ರಿವೇರಾ ವಿರುದ್ಧ 11-9 ಅಂಕಗಳ ಅಂತರದಿಂದ ಗೆಲುವು ಸಾಧಿಸಿ ಕಂಚಿಗೆ ಮುತ್ತಿಕ್ಕಿದ್ದಾರೆ. ಕ್ವಾರ್ಟರ್ಫೈನಲ್ನಲ್ಲಿ ಅಮೆರಿಕದ ಜಾನ್ ಮೈಕೆಲ್ ಡಯಾಕೊಮಿಹಾಲಿಸ್ ವಿರುದ್ಧ ಇವರಿಗೆ ಸೋಲಾಗಿತ್ತು. ಆದರೆ, ಮೈಕೆಲ್ ಫೈನಲ್ಗೆ ಪ್ರವೇಶ ಪಡೆದುಕೊಂಡಿದ್ದರಿಂದ ಬಜರಂಗ್‌ಗೆ ರಿಪೇಚ್ ಸುತ್ತಿನಲ್ಲಿ ಕಂಚಿಗೋಸ್ಕರ ಸೆಣಸಾಡುವ ಅವಕಾಶ ಸಿಕ್ಕಿತ್ತು.
ಬಜರಂಗ್ ಈ ಹಿಂದೆ 2013 ರಲ್ಲಿ ಕಂಚು, 2018ರಲ್ಲಿ ಬೆಳ್ಳಿ ಹಾಗೂ 2019ರಲ್ಲಿ ಕಂಚು ಗೆದ್ದಿದ್ದರು.
-
Battle tested ➡️ @BajrangPunia 🇮🇳.
— United World Wrestling (@wrestling) September 17, 2022 " class="align-text-top noRightClick twitterSection" data="
Bajrang edged two-time world bronze medalist Alejandro VALDES TOBIER 🇨🇺, 5-4, and will meet @yiannidiako_LGR 🇺🇸 next.#WrestleBelgrade | #TheHomeOfWrestling pic.twitter.com/3Uf8aJtDQl
">Battle tested ➡️ @BajrangPunia 🇮🇳.
— United World Wrestling (@wrestling) September 17, 2022
Bajrang edged two-time world bronze medalist Alejandro VALDES TOBIER 🇨🇺, 5-4, and will meet @yiannidiako_LGR 🇺🇸 next.#WrestleBelgrade | #TheHomeOfWrestling pic.twitter.com/3Uf8aJtDQlBattle tested ➡️ @BajrangPunia 🇮🇳.
— United World Wrestling (@wrestling) September 17, 2022
Bajrang edged two-time world bronze medalist Alejandro VALDES TOBIER 🇨🇺, 5-4, and will meet @yiannidiako_LGR 🇺🇸 next.#WrestleBelgrade | #TheHomeOfWrestling pic.twitter.com/3Uf8aJtDQl
ಇದನ್ನೂ ಓದಿ: ವಿಶ್ವ ಕುಸ್ತಿ ಚಾಂಪಿಯನ್‌ಶಿಪ್: ಕಂಚಿನ ಪದಕ ಗೆದ್ದ ವಿನೇಶ್ ಫೋಗಟ್
ಕೆಚ್ಚೆದೆಯ ಆಟ ಪ್ರದರ್ಶಿಸಿದ ಬಜರಂಗ್: ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಬಜರಂಗ್ ತಲೆಗೆ ಬ್ಯಾಂಡೇಜ್ ಕಟ್ಟಿಕೊಂಡು ಸೆಣಸಾಟ ನಡೆಸಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಲೆಗೆ ಪೆಟ್ಟು ಮಾಡಿಕೊಂಡಿದ್ದು ಸುರಕ್ಷತೆಯ ದೃಷ್ಟಿಯಿಂದ ಪಂದ್ಯದಿಂದ ಹಿಂದೆ ಸರಿಯುವ ಅವಕಾಶ ನೀಡಲಾಗಿತ್ತು. ಆದರೆ, ಎದುರಾಳಿ ವಿರುದ್ಧ ಸೆಣಸಾಡಿ ಪದಕ ಗೆದ್ದಿದ್ದಾರೆ. ಪ್ರೀಕ್ವಾರ್ಟರ್ನಲ್ಲಿ ಬಜರಂಗ್ ಕ್ಯಾಬಾದ ಅಲೆಜಾಂಡ್ರೋ ಎನ್ರಿಕ್ ವಿರುದ್ಧ ಗೆಲುವು ಪಡೆದಿದ್ದರು.
ಭಾರತದ ನಿರಾಶಾದಾಯಕ ಪ್ರದರ್ಶನ: ವಿಶ್ವ ಕುಸ್ತಿ ಚಾಂಪಿಯನ್ಶಿಪ್ಗಾಗಿ ಭಾರತ 30 ಸದಸ್ಯರ ತಂಡವನ್ನು ಕಣಕ್ಕಿಳಿಸಿತ್ತು. ಆದರೆ, ಇಲ್ಲಿಯವರೆಗೆ ಕೇವಲ 2 ಪದಕ ಗೆದ್ದಿದೆ ಅಷ್ಟೇ. ಈಗಾಗಲೇ 53 ಕೆಜಿ ವಿಭಾಗದಲ್ಲಿ ವಿನೇಶ್ ಪೋಗಟ್ ಕಂಚು ಸಾಧನೆ ಮಾಡಿದ್ದಾರೆ. ಒಲಿಂಪಿಕ್ ಪದಕ ವಿಜೇತ ರವಿ ದಹಿಯಾ ನಿರಾಸೆ ಮೂಡಿಸಿದ್ದಾರೆ.